ಕಿರಿದಾದ ಸೇತುವೆಯಿಂದಾಗಿ ರಸ್ತೆಯ ಕೆಳಭಾಗಕ್ಕೆ ಬಿದ್ದ ಇನ್ನೋವ ಕಾರು

0

ಹಾಸನ : ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಬಾಚಿಹಳ್ಳಿ ಮತ್ತು ಅತ್ತಿಹಳ್ಳಿ ರಸ್ತೆಯಲ್ಲಿ ಸಿಗುವ ಮೊದಲನೇ ಸೇತುವೆ ಹಾಗೂ ಎರಡನೇ ಸೇತುವೆ ಇಂದು ಎದುರಿಗೆ ಬರುವ ವಾಹನಕ್ಕೆ ಸೈಡ್ ಕೊಡುವ. ಸಂದರ್ಭದಲ್ಲಿ ಇನ್ನೋವ ಕಾರು ರಸ್ತೆಯ ಕೆಳಭಾಗಕ್ಕೆ

ಬಿದ್ದಿದೆ , ಇತ್ತೀಚಿಗೆ ಬಾಚಿಹಳ್ಳಿ ಅತ್ತಿಹಳ್ಳಿಯ ರಸ್ತೆ ಅಗಲೀಕರಣ ಆಗಿದೆ ಆದರೆ ಸೇತುವೆ ಕಿರಿದಾದ ಪರಿಣಾಮ ಆಗಾಗ ಅಪಘಾತಗಳು ಹೆಚ್ಚಾಗಿದ್ದು . ಒಂದೇ ವಾರದಲ್ಲಿ 4 ಕಾರುಗಳು ಸೇತುವೆಯಿಂದ ಕೆಳಗೆ ಬಿದ್ದಿದ್ದು

ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಇಂದು ಒಂದು ಇನ್ನೋವಾ ಕಾರು ಉರುಳಿ ಬಿದ್ದಿದೆ ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು

ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು ಅಪಘಾತಗಳ ಸಂಖ್ಯೆಯು ಕೂಡ ಹೆಚ್ಚಾಗಿದೆ. ಸಂಬಂದಪಟ್ಟ ಅಧಿಕಾರಿಗಳು
ತಾತ್ಕಾಲಿಕವಾಗಿ ರಸ್ತೆಗೆ

ಹಂಪ್ ಹಾಕಿದರೆ ಇಂತಹ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಬಹುದು ಎಂದು ಬಾಚಹಳ್ಳಿ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರಾದ ಪ್ರದೀಪ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here