ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ

0

ಇದೀಗ ಬಂದ ಸುದ್ದಿ , ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ ದಾಖಲು ,

ಇನ್ನು ಸಂಚಾರಕ್ಕೆ ಮುಕ್ತವಾಗದ ಈ ರಾಷ್ಟ್ರೀಯ ಹೆದ್ದಾರಿಯ ಈ ಸ್ಥಳದಲ್ಲಿ ಇಂದು ಆಗಸ್ಟ್ 3 ಬೆಳಗಿನ ಜಾವ 5.30ರ ಸಮಯದಲ್ಲಿ , ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯದ ಹತ್ತಿರ ಕಣದಳ್ಳಿ ಬಳಿ ನಡೆದಿದೆ .,

ರಸ್ತೆ ಮದ್ಯೆ ಮಣ್ಣು ಹಾಕಿದ್ದು , ಈ ಮಣ್ಣಿನ ಗುಡ್ಡೆಗೆ ಬಡಿದ ಮಾರುತಿ ಸುಜ಼ುಕಿ ವಾಘನರ್ ಕಾರು , ರಸ್ತೆ ಪಕ್ಕದ ಮನೆಗಳಿರುವ ವಠಾರಕ್ಕೆ ಬಿದ್ದಿದೆ .,

ಪರಿಣಾಮ ಕಾರಿನಲ್ಲಿದ್ದ ಇಬ್ಬರಲ್ಲಿ ಒಬ್ಬರಿಗೆ ತೀವ್ರ ಗಾಯಗಳಾಗಿದ್ದು , ಮತ್ತೊಬ್ಬರು ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿದ್ದಾರೆ ,

ಕಾರು ಗುದ್ದಿದ ರಭಸಕ್ಕೆ ಅಲ್ಲೆ ವಾಸ ಇದ್ದ ಮನೆ ಅಲ್ಪ ಜಖಂ ಗೊಂಡಿದೆ . ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಇಲ್ಲ .

LEAVE A REPLY

Please enter your comment!
Please enter your name here