ಹಾಸನ ಕಾಂಗ್ರೆಸ್ ಉಸ್ತುವಾರಿ ಸಂಸದ ಡಿ ಕೆ ಸುರೇಶ್ ನೇತೃತ್ವದಲ್ಲಿ ಹಾಸನದಲ್ಲಿ ತೈಲಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

0

ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಾಸನ ನಗರ ಸೇರಿ ಜಿಲ್ಲೆಯ ವಿವಿದೆಡೆ ಇಂದು ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ಸಂಸದರಾದ ಹಾಗೂ ಹಾಸನ ಜಿಲ್ಲಾ ಉಸ್ತುವಾರಿಯಾದ  ಡಿ ಕೆ ಸುರೇಶ್ ರವರು

ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಚಾಮರಾಜನಗರ ಜಿಲ್ಲೆಯ ಮಾಜಿ ಸಂಸದರೂ  ಧ್ರುವನಾರಾಯಣ್ ರವರು ಕೆಪಿಸಿಸಿ ವೈದ್ಯರ ಘಟಕದ ರಾಜ್ಯಾಧ್ಯಕ್ಷರಾದ ಮಧುಸೂದನ್ ರವರು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ

ಮಾಜಿ ಸಚಿವರಾದ ಬಿ ಶಿವರಾಮು ರವರು ವಿಧಾನಪರಿಷತ್ ಸದಸ್ಯರಾದ ಗೋಪಾಲ್ ಸ್ವಾಮಿಯವರು ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜಾವಗಲ್ ಮಂಜುನಾಥ್ ರವರು ಕಾಂಗ್ರೆಸ್ ಮುಖಂಡರಾದ , ಹೆಚ್.ಕೆ.ಮಹೇಶ್, ಬಿ ಕೆ ರಂಗಸ್ವಾಮಿ (ಬನವಾಸೆ )ಅವರ ನೇತೃತ್ವದಲ್ಲಿ ಹಾಸನದ ಡೈರಿ ವೃತ್ತದಲ್ಲಿರುವ  ಪೆಟ್ರೋಲ್ ಬಂಕ್ ಹತ್ತಿರ ಕೇಂದ್ರ ಮತ್ತು

ರಾಜ್ಯ ಸರ್ಕಾರದ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ ಏರಿಕೆ ವಿರುದ್ಧ ಇಂದು ಹಲವು ಪೆಟ್ರೋಲ್ ಬಂಕ್ ಗಳ ಮುಂಭಾಗ ಪ್ರತಿಭಟನೆ ನಡೆಯಿತು ಈ ಸಂದರ್ಭದಲ್ಲಿ

ಜಿಲ್ಲಾ ಯೂತ್ ಕಾಂಗ್ರೆಸ್ , ಮಹಿಳಾ  ಕಾಂಗ್ರೆಸ್ ನ , ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು

ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಯರಿಗೆ ನಗರ NCN ಕಲ್ಯಾಣ ಮಂಟಪದಲ್ಲಿ ಫುಡ್ ಕಿಡ್ ವಿತರಿಸಲಾಯಿತು

” ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸಿದೆನು. ನಿರಂತರವಾಗಿ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಾಸನ ಜಿಲ್ಲೆಯ ಹಿರಿಸಾವೆ, ಚನ್ನರಾಯಪಟ್ಟಣ ಮತ್ತು ಹಾಸನ ನಗರ ಸೇರಿದಂತೆ ಒಟ್ಟು 6 ಪೆಟ್ರೋಲ್ ಬಂಕ್ ಗಳ ಮುಂಭಾಗದಲ್ಲಿ ಈ ಪ್ರತಿಭಟನೆಗಳನ್ನು ನಡೆಸಲಾಯಿತು.
ನಂತರ ಮಾಜಿ ಸಚಿವರಾದ ದಿ.ಶ್ರೀಕಂಠಯ್ಯನವರ ಸಮಾಧಿಗೆ ನಮಿಸಿ ಹಿರಿಸಾವೆಯಲ್ಲಿ ಆಶಾ ಕಾರ್ಯಕರ್ತರು ಮತ್ತು ಬಡವರಿಗೆ ಫುಡ್ ಕಿಟ್ ವಿತರಿಸಿದೆನು. ನಂತರ ಚನ್ನರಾಯಪಟ್ಟಣ ಮತ್ತು ಹಾಸನ ನಗರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಾ ಕಾರ್ಯಕರ್ತರು ಮತ್ತು ಬಡ ವರ್ಗದ ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದೆನು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ್ ರವರು, ವಿಧಾನ ಪರಿಷತ್ ಸದಸ್ಯರಾದ ಗೋಪಾಲ ಸ್ವಾಮಿಯವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ಜಿಲ್ಲಾ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.”
Hassan #Petrol100NotOut – DK suresh

LEAVE A REPLY

Please enter your comment!
Please enter your name here