ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮೈಸೂರು ರಸ್ತೆಯ ವಿದ್ಯುತ್ ಇಲಾಖೆ ಸಮೀಪ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಕಾರು ಗುದ್ದಿದ ಹೊಡೆತಕ್ಕೆ
ಹೊಳೇನರಸೀಪುರದ ಮೆಣಗನಹಳ್ಳಿಯ ಮರಗೆಲಸದ ಯೋಗಾಚಾರಿ(52) ಎಂಬುವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ . ಗ್ರಾಮದಿಂದ ಹೊಳೇನರಸೀಪುರ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಹಿಂದಿನಿಂದ ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿಹೊಡೆದ ರಭಸಕ್ಕೆ. ಇವರ ಸ್ಕೂಟಿ ಮುಂದೆ
ಹೋಗುತ್ತಿದ್ದ ಟ್ರ್ಯಾಟರ್‌ಗೆ ಡಿಕ್ಕಿ ಹೋಗಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಅಸುನೀಗಿದ್ದಾರೆ . ಹೊಳೆನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು . ಮೃತ ಯೋಗಾಚಾರಿ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.