ಜ್ಞಾನೇಶ ಎಂ.ಬಿ ಗೊರೂರು ಮತ್ತು ಸಿದ್ದರಾಜು ಹೆಚ್ ಅವರ ನಿರ್ಮಾಣದ ಅಂಗೈಲಿ ಅಕ್ಷರ ಎಂಬ ಮಕ್ಕಳ ಕನ್ನಡ ಚಿತ್ರದ ಚಿತ್ರೀಕರಣ ಪೂರ್ಣಗೊಂಡು, ಬಿಡುಗಡೆ ಹಂತ ತಲುಪಿದೆ. ಶೀಘ್ರದಲ್ಲೇ ತೆರೆಗೆ ಬರಲಿದೆ. ಹುಲಿಯೂರುದುರ್ಗ, ಮಾಗಡಿ ತಾವರೆಕೆರೆ, ದೊಡ್ಡಬಳ್ಳಾಪುರ, ಘಾಟಿ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿದ್ದರಾಜು ಕಾಳೇನಹಳ್ಳಿ ಅವರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗೇಶ್ ಉಜ್ಜನಿ, ವೀ ಶ್ರೀ , ಮಲ್ಲಿಕಾರ್ಜುನ್ ಅವರ ಸಹಾಯಕ ನಿರ್ದೇಶನ ಈ ಚಿತ್ರಕ್ಕಿದೆ.
ಅಮ್ಮನಿಂದ ದೂರವಾದ ಒಂದು ಬಡ ವರ್ಗದ ಹುಡುಗನ ಶೈಕ್ಷಣಿಕ ಹಾದಿ, ಅಮ್ಮ ಮಗನ ನಡುವಿನ ಬಾಂಧವ್ಯ, ಸೆಂಟಿಮೆಂಟ್ ಇರುವ ಹಾಗೂ ಸಮಾಜಕ್ಕೆ ಶಿಕ್ಶಣದ ಮಹತ್ವದ ಅರಿವು ಮೂಡಿಸುವ ಕುರಿತಾದ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಫ್ರೆಂಡ್‍ಷಿಪ್, ಸೆಂಟಿಮೆಂಟ್ ಹಾಗೂ ಕಾಮಿಡಿಯಂತಹ ಎಲ್ಲಾ ಮನರಂಜನಾತ್ಮಕ ಅಂಶಗಳು ಇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ಬಾಲ್ಯದಲ್ಲೇ ತಂದೆತಾಯಿ ಕಳೆದುಕೊಂಡ ಮಕ್ಕಳು ವಿದ್ಯಾಭ್ಯಾಸ ಹಾಗೂ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದೇ ಈ ಚಿತ್ರದ ಕಥಾವಸ್ತು. ಇದು ನನ್ನ ಅನುಭವವೂ ಹೌದು ಎನ್ನುತ್ತಾರೆ ನಿರ್ದೇಶಕ ಸಿದ್ದರಾಜು.
ಈ ಚಿತ್ರದ 4 ಹಾಡುಗಳಿಗೆ ಎ.ಟಿ. ರವೀಶ್ ಅವರ ಸಂಗೀತ ಸಂಯೋಜನೆಯಿದ್ದು, ನಾಗೇಶ್ ಉಜ್ಜನಿ, ಜ್ಞಾನೇಶ ಎಂ.ಬಿ, ಶೈಲಜಾ ಎಸ್.ರಾವ್ ಸಾಹಿತ್ಯ ರಚಿಸಿದ್ದಾರೆ. ಗಾಯಕರಾಗಿ ಸರಿಗಮಪ ವಿನ್ನರ್ ಸುನಿಲ್, ಮೆಹಬೂಬ್ ಸಾಬ್, ಕನ್ನಡ ಕೋಗಿಲೆ ತನುಷ್ ರಾಜ್ ಹಾಡಿದ್ದಾರೆ. ಮಲ್ಲ, ಕೋದಂಡರಾಮ ಚಿತ್ರದ ಸಂಜೀವ್ ರೆಡ್ಡಿ ಅವರ ಸಂಕಲನವಿದ್ದು, ರಮೇಶ್ ಹಾಗೂ ನರಸಿಂಹ ಅವರ ಛಾಯಾಗ್ರಹಣ, ಲಯನ್ ಗಂಗರಾಜು ಅವರ ಸಾಹಸ, ಸ್ಟಾರ್ ನಾಗಿ, ಸುರೇಶ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಈ ಚಿತ್ರದಲ್ಲಿ ಬಾಲನಟರಾಗಿ ಕನ್ನಡ ಕೋಗಿಲೆ ಖ್ಯಾತಿಯ ತನುಷರಾಜ್, ಶನಿ ಧಾರಾವಾಹಿಯಲ್ಲಿ ಬಾಲ ಹನುಮನ ಪಾತ್ರದಾರಿ ಕಾನಿಷ್ಕ ರವಿ ದೇಸಾಯಿ, ಉಘೇ ಉಘೇ ಮಾದೇಶ್ವರ ಮರಿದೇವನ ಪಾತ್ರದಾರಿ ಅಮೋಘ ಕೃಷ್ಣ, ಪುಟಾಣಿ ಪಂಟ್ರು ಮಧುಸೂಧನ್, ಭರಾಟೆ ಚಿತ್ರದಲ್ಲಿ ನಟಿಸಿರುವ ಬೇಬಿ ಅಂಕಿತ ಜಯರಾಮ್, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದಲ್ಲಿ ನಟಿಸಿರುವ ಬೇಬಿಶ್ರೀ ಹಾಗೂ ಹೊಸ ಪರಿಚಯ ಜೀವನ್ ಗೌಡ, ಚೇತನ್, ಚಂದನ್ ಹಾಗೂ ಮಾಸ್ಟರ್ ನವನೀತ್ ಅಭಿನಯಿಸಿದ್ದಾರೆ.
ಅಲ್ಲದೆ ಮಜಾಭಾರತ ಚಂದ್ರಪ್ರಭಾ, ಕಾಮಿಡಿ ಕಿಲಾಡಿಗಳು ಜಿ ಜಿ ಗೋವಿಂದೇಗೌಡ, ಟಿಕ್ ಟಾಕ್ ಸ್ಟಾರ್ ವಿನೋದ್ ಆನಂದ್, ಅಮ್ಮನ ಪಾತ್ರದಲ್ಲಿ ಮಂಗಳೂರಿನ ಮೋನಿಕ, ಬರಹಗಾರ್ತಿ ಶ್ರೀದೇವಿ ಮಂಜುನಾಥ, ಧಾರಾವಾಹಿ ನಟ ರಾಜೇಶ್, ಕಾವೇರಿ ತೀರದ ಚರಿತ್ರೆ ಮೂವಿಯ ನಾಯಕನಟ ನವೀನ್ ರಾಜ್,ಬಾ ನಾ ರವಿ, ಫೈಟ್ ಮಾಸ್ಟರ್ ಗಂಗರಾಜು ಹಾಗೂ ಹೊಸ ಪರಿಚಯ ನಾಗಶ್ರೀ, ಗುರು, ರಾಜು, ಬಸವರಾಜು, ಪ್ರತಾಪ್ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕರ್ನಾಟಕ ಜನಸೇವಾ ಟ್ರಸ್ಟಿನ ಪ್ರಶಾಂತ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಗೋ ಸಂರಕ್ಷಕರಾದ ಮಹೇಂದ್ರ ಮುನ್ನೋತ್ ಶಿಕ್ಷಣ ಸಚಿವರಾಗಿ ನಟಿಸಿದ್ದಾರೆ.