ಶಿರಾಡಿ ಘಾಟ್‌ನಲ್ಲಿ ಚತುಷ್ಪಥ ರಸ್ತೆ ಬೃಹತ್ ಯೋಜನೆ ಅತೀ ಶೀಘ್ರದಲ್ಲೇ

0

ದೆಹಲಿ / ಹಾಸನ : ಶಿರಾಡಿ ಘಾಟ್‌ನಲ್ಲಿ ಚತುಷ್ಪಥ ರಸ್ತೆ ಬೃಹತ್ ಯೋಜನೆ ನಿರ್ಮಾಣವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು

ದಿನಾಂಕ : 8ಸೆ. ನವದೆಹಲಿಯಲ್ಲಿ ಬುಧವಾರ ನಡೆದ ಮಾತುಕತೆಯಲ್ಲಿ ಗಡ್ಕರಿ ಅವರ ಬಳಿ ನಡೆದ ಮಾತುಕತೆ ನಂತರ ಸುದ್ದಿಗಾರರಿಗೆ ಶಿರಾಡಿ ಘಾಟ್ ರೋಡ್ ಅಪ್ಗ್ರೇಷನ್ ಬಗ್ಗೆ ವಿವರಿಸಿದರು.,

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ನಿಂದ ಮಂಗಳೂರಿನ ಮಾರನಹಳ್ಳಿ ವರೆಗೂ ಚತುಷ್ಪಥ ನಿರ್ಮಾಣ ಪೂರ್ಣಗೊಳಿಸುವುದು ಅವಶ್ಯವಾಗಿದೆ. ಆ ಹಾದಿಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ವಿಚಾರದಲ್ಲಿ ಸಮಾಲೋಚಕರ‌/ಪರಿಸರ ತಜ್ಞರ ಜೊತೆ ಮಾತುಕತೆ ಮುಕ್ತಾಯ ಹಂತಕ್ಕೆ ಬಂದಿದ್ದು.

ರಾಜ್ಯದಲ್ಲಿ ಕಳೆ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ , ಭೂಕುಸಿತ ಸಂಭವಿಸಿ ರಾಷ್ಟ್ರೀಯ ಇತರೆ ಹೆದ್ದಾರಿಗಳು ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು. ಅವುಗಳ ದುರಸ್ತಿಗೆ  184 ಕೋಟಿ ರೂ ಶೀಘ್ರವೇ ಬಿಡುಗಡೆ ಮಾಡುವಂತೆಯೂ ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ

ಕರ್ನಾಟಕದಲ್ಲಿ ಅಂದಾಜು 400 ಎಕರೆಯಲ್ಲಿ ಎಲೆಕ್ಟ್ರಾನಿಕ್‌ ಪಾರ್ಕ್‌ ನಿರ್ಮಿಸಲು ಉದ್ದೇಶಿಸಿದ್ದು , ಆಪ್ಟಿಕಲ್‌ ಫೈಬರ್ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ಮನವಿ ಮಾಡಲಾಗಿದೆ

ಈ ಭೇಟಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಕಂದಾಯ ಸಚಿವ ಆರ್. ಅಶೋಕ ಇದ್ದರು.

#shiradighat #sakleshpur #mangalore #hassan #karnatakacm #karnatakatourism @bsbommai.official

LEAVE A REPLY

Please enter your comment!
Please enter your name here