ಹಾಸನ: ಕೊರೊನಾ ಮಹಾಮಾರಿಯಿಂದ
ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆ ಪುನಾರಂಭವಾಗಿದ್ದು, ವಿದ್ಯಾರ್ಥಿಗಳು ಮುತುವರ್ಜಿಯಿಂದ ಓದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಾಸನ ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಕಿವಿಮಾತು ಹೇಳಿದರು.
ನಗರದ ಎಪಿಜೆ ಅಕಾಡೆಮಿ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ

ಫ್ರೆಶರ್ಸ್ ಡೇ ಹಾಗೂ ಕೊರೊನಾ ವಾರಿಯರ್ಸ್ಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಮಾಡುವುದು ಮತ್ತು ನಿರ್ಗಮಿತ ವಿದ್ಯಾರ್ಥಿಗಳನ್ನು ಬೀಳ್ಕೊಡುವುದು ಹಿಂದಿನಿಂದಲೂ ನಮ್ಮಲ್ಲಿ ಬೆಳೆದು ಬಂದಿರುವ ಸಂಪ್ರದಾಯ. ಅದರಂತೆ

ಈ ದಿನ ಫ್ರೆಶರ್ಸ್ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗಿದೆ. ೨ನೇ ಪಿಯುಸಿ ಹತ್ತಿರ ಬರುತ್ತಿದ್ದು, ವ್ಯಾಸಂಗ ಮುಗಿಸಿ ಹೋಗುವವರಿಗೆ ಬೀಳ್ಕೊಡಬೇಕಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವುದರ ಜೊತೆಗೆ

ಜೀವನದಲ್ಲಿ ಸಹನೆ, ತಾಳ್ಮೆ ಹಾಗೂ ಬದುಕಿನ ಕಲೆಯಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಇದೇ ವೇಳೆ ಡಾ.ಅಬ್ದುಲ್ ಕಲಾಂ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿನ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಕಲಾಂ, ಬೀದಿದೀಪದ ಕೆಳಗೆ ಮತ್ತು ಸರ್ಕಾರಿ ಶಾಲೆಯಲ್ಲಿ ಓದಿ ನಾಸಾದ ವಿಜ್ಞಾನಿಯಾಗುವ ಹಂತಕ್ಕೆ ಬೆಳೆದರು. ಅದಲ್ಲದೆ ದೇಶದ ಉನ್