ಪೌಷ್ಟಿಕ ಆಹಾರ ಶಿಬಿರ ಅರೇಹಳ್ಳಿ

0

ಬೇಲೂರು: ಬೇಲೂರು ತಾಲೂಕು ಅರೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 8 ಅಂಗನವಾಡಿ ಕೇಂದ್ರಗಳ ಪೋಷಣಾ ಮಾಸಾಚರಣೆ ಪ್ರಯುಕ್ತ ಪೌಷ್ಟಿಕ ಆಹಾರ ಶಿಬಿರವನ್ನು ಗ್ರಾಮದ ರಾಮನಗರ ಅಂಗನವಾಡಿ ಶೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ನಂತರ ಮಾತನಾಡಿದ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿಗಳಾದ ವೈದ್ಯೆ ಡಾ|| ಮಮತಾ ಜೆ ಮಕ್ಕಳು ಹಾಗೂ ಬಾಣಂತಿ ಯಾರಲ್ಲಿ ಆಪೌಷ್ಟಿಕತೆಯ ಮಟ್ಟ ಬೆಳೆಯುತ್ತಿರುವ ಕಾರಣ ಉತ್ತಮಆಹಾರವನ್ನು ಸೇವಿಸುವುದು ಬಗ್ಗೆ ಅರಿವು ಮೂಡಿಸಿ ಎಲ್ಲರನ್ನು ಪೌಷ್ಟಿಕತೆಯತ್ತ ಕರೆದೊಯ್ಯಬೇಕು ಎಂದು ತಿಳಿಸಿದರು. ನಂತರ

ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪ್ರತಿ ಒಂದು ಸಂಸ್ಥೆಯಿಂದ ಇಂತಹ ಆರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸವಲತ್ತು ಆಗಲಿದೆ ಎಂದು ತಿಳಿಸಿದರು. ಇದೇ ವೇಳೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾರಿಂದ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬೀಳ್ಕೊಡುಗೆ ಮಾಡಲಾಯಿತು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮಾ ಬಿ, ಸದಸ್ಯರಾದ ಮೆಹಬೂಬ್ ಷರೀಫ್, ವೀರೇಶ್ ಗೌಡ್ರು, ಸಾಮಾಜಿಕ ಸೇವಕರಾದ ಮುಜೀಬ್ ಉರ್ ರೆಹಮಾನ್, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.
ವರದಿ: ನಸೀರ್ ಉದ್ದಿನ್

LEAVE A REPLY

Please enter your comment!
Please enter your name here