ನಮ್ಮ ಅರಕಲಗೂಡಿನ ಮೂಲದ ವಿಜ್ಞಾನಿ ಫಿನ್ ಲ್ಯಾಂಡ್ AICC ಘಟಕದ ಮುಖ್ಯಸ್ಥ

0

ಹಾಸನ / ಫಿನ್ ಲ್ಯಾಂಡ್ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ನಮ್ಮ ಹಾಸನ ಜಿಲ್ಲೆಯ ಅರಕಲಗೂಡಿನ ಕೋಮಲ್ ಕುಮಾರ್ ಜವರಪ್ಪ ಅವರನ್ನು ಎರಡು ವರ್ಷಗಳ ಕಾಲ ಫಿನ್ ಲ್ಯಾಂಡ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಕೇವಲ 35 ವರ್ಷದ ಕೋಮಲ್,  ಮೈಸೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಮತ್ತು ಪಿಎಚ್‌ಡಿ ಪಡೆದು  ಅವರಿಗೆ UoM ನಿಂದ ಪರಿಸರ ವಿಜ್ಞಾನದಲ್ಲಿ ಪಿಎಚ್‌ಡಿ ನೀಡಿ ನಂತರ ಅವರ ಸಾಧನೆಗೆ ಫಿನ್ ಲ್ಯಾಂಡ್ ನಲ್ಲಿ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿಕೊಂಡ ಸೇವೆ ಸಲ್ಲಿಸುತ್ತಿದ್ದು , ತವರೂರಿನ ಭೂ ಸ್ವರ್ಗ ಖ್ಯಾತಿಯ ಫಿನ್ ಲ್ಯಾಂಡ್ ನ ಹಲವು ಅತ್ಯುನ್ನತ ತಂತ್ರಜ್ಞಾನಗಳು ಹಾಗೂ ಯೋಜನೆಗಳ ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಇಲಾಖೆಯ ಕಾರ್ಯದರ್ಶಿ ಆರತಿ ಕೃಷ್ಣನ್ ಕೋಮಲ್ ಅವರ ನೇಮಕವನ್ನು ಧೃಡ ಪಡಿಸಿದ್ದಾರೆ.

ಕೋಮಲ್ ತನ್ನ ವೃತ್ತಿಜೀವನವನ್ನು ಸ್ವೀಡನ್‌ನ ಲಿಂಕ್‌ಪಿಂಗ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಸಂಶೋಧಕರಾಗಿ ಪ್ರಾರಂಭಿಸಿದರು.  2016 ರಲ್ಲಿ ಅವರು ಫಿನ್ಲೆಂಡ್‌ನ ಹೆಲ್ಸಿಂಕಿ ವಿಶ್ವವಿದ್ಯಾಲಯ ಆಸ್ಪತ್ರೆಗೆ ವಿಜ್ಞಾನಿಯಾಗಿ ತೆರಳಿದರು.  ಕೋಮಲ್ ಮಾಲಿನ್ಯದ ಪರಿಸರ ಮತ್ತು ಆರೋಗ್ಯದ ಪರಿಣಾಮದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ, ನಿರ್ದಿಷ್ಟವಾಗಿ ರಕ್ತ ಕ್ಯಾನ್ಸರ್ ಮೇಲೆ ಆಗುವ ಪರಿಣಾಮಗಳ ವಿಷಯವಾಗಿ ಸಂಶೋಧನೆ ಮುಂದುವರೆಸಿದ್ದಾರೆ

ಕೋಮಲ್ ಅವರ ಕುಟುಂಬ ಸದಸ್ಯರು ಅಲ್ಲಿಯೇ ಅವರ ನೆರವಿಗೆ ಇರುತ್ತಾರೆ

“ನನ್ನ ಗಮನದ ಪ್ರದೇಶಗಳು ಪರಿಸರ ಮತ್ತು ಆರೋಗ್ಯ ಸುಧಾರಣೆ ಮತ್ತು ದೇಶದಲ್ಲಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒಳಗೊಂಡಿರುತ್ತದೆ.  ಉತ್ತರ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ, ದೇಶದಲ್ಲಿ ಪರಿಸರ, ಆರೋಗ್ಯ ಮತ್ತು ಶೈಕ್ಷಣಿಕ ಗುಣಮಟ್ಟ  ಇನ್ನೂ ಕಡಿಮೆ ಇದೆ.  ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು ನಾನು ರಾಜಕೀಯವನ್ನು ಒಂದು ಸಾಧನವಾಗಿ ಬಳಸಲು ಬಯಸುತ್ತೇನೆ, ”ಎಂದು ಅವರು ಹಾಸನ್ ನ್ಯೂಸ್ ತಂಡಕ್ಕೆ  ತಿಳಿಸಿದರು.

LEAVE A REPLY

Please enter your comment!
Please enter your name here