ಹಾಸನ / ಅರಕಲಗೂಡು : ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಅಸ್ಸಾಂ ಮೂಲದ ಕಾರ್ಮಿಕ ದಂಪತಿಯ ಗರ್ಭಿಣಿ ಮಹಿಳೆ ನಿನ್ನೆ ಭಾನುವಾರ (13ಮಾರ್ಚ್2022) ಸಂಜೆ 7ಗಂಟೆಗೆ ದಾಖಲಾಗಿದ್ದಳು ., ದಾಖಲಾಗಿ ಮಗು ಜನನವಾದ ನಂತರ ತಾಯಿಯ ವಾರ್ಡ್ ಗೆ ಶಿಫ್ಟ್ ಮಾಡಿ ಮಗುವಿನ ಸುಶ್ರೂಷೆ ಕೋಣೆಯಿಂದ ಅದ್ಯಾರೋ ನಾಲ್ವರು ಕಿಡಿಗೇಡಿಗಳು
ಹೊಂಚು ಹಾಕಿ ಮಧ್ಯರಾತ್ರಿ 12ಗಂಟೆಗೆ ಮಗುವಿನ(ಹಸುಗೂಸು) ಆಸ್ಪತ್ರೆಯ ಹಿಂಬದಿ ಬಾಗಿಲಿನಿಂದ ಅಪಹರಣ ನಡೆಸಿದ್ದು ,ಅಪಹರಣ ನಡೆಸಿದವರು ನರ್ಸ್ ವೇಷದಲ್ಲಿದ್ದರು ಎನ್ನಲಾಗಿದೆ., ತಾಯಿಯ ಗೋಳಾಟ ಚೀರಾಟ ಮುಗಿಲು ಮುಟ್ಟಿತ್ತು ., ವಿಷಯ ತಿಳಿದ ಸ್ಥಳೀಯರೇ ಆದ ಜಿಲ್ಲಾ ಆರೋಗ್ಯ ಅಧಿಕಾರಿ , ಸತೀಶ್ ಪೊಲೀಸ್ ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ .
ಘಟನೆ : CCTV ಯಲ್ಲಿ ದಾಖಲಾಗಿದ್ದು ಅರಕಲಗೂಡು ಪಟ್ಟಣ ಪೊಲೀಸ್ ಠಾಣೆಗೆ ಈ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ದೀಪಕ್ ದೂರು ನೀಡಿದ್ದಾರೆ
ಭರವಸೆ ಇಟ್ಟು ಹೊರ ರಾಜ್ಯದಿಂದ ಬಂದ ಈಕೆಗೆ(ಕೂಲಿ ಕಾರ್ಮಿಕ ಮಹಿಳೆ) ಮರಳಿ ಮಗು ಸಿಗುವಂತಾಗಲಿ.