ಸಾಲುಮರದತಿಮ್ಮಕ್ಕ ಸಸ್ಯಕ್ಷೇತ್ರದಲ್ಲಿ ಹಸಿರು ಕರ್ನಾಟಕ ಪರಿಸರ ರಕ್ಷಣಾ ವೇದಿಕೆ

0

ಅರಸೀಕೆರೆ -ನಗರದ ಹೊರವಲಯದ ಜಾಜುರು ಸಮೀಪ ಇರುವ ಸಾಲುಮರದತಿಮ್ಮಕ್ಕ ಸಸ್ಯಕ್ಷೇತ್ರದಲ್ಲಿ ಹಸಿರು ಕರ್ನಾಟಕ ಪರಿಸರ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ತಮ್ಮ ವೇದಿಕೆಯು ಯಾವ ರೀತಿ ಕೆಲಸ ಮಾಡಬೇಕು ನಗರದಲ್ಲಿ ಯಾವಕಡೆ ಮರಗಳನ್ನು ಬೆಳೆಸಬಹುದು ಶಾಲಾ-ಕಾಲೇಜು ಸಾರ್ವಜನಿಕ ಸ್ಥಳ ದೇವಸ್ಥಾನ ಉದ್ಯಾನವನ ಮುಂತಾದಕಡೆ ಗಿಡಗಳನ್ನು ನೆಡುವ ಮೂಲಕ ತಮ್ಮ ಸಂಘದ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು ಎಂದು ತೀರ್ಮಾನಿಸಲಾಯಿತು. ಹಿಂದೆ ಕರೋನಾ ಇರುವ ಕಾರಣ ಸರಿಯಾಗಿ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗದೇ ಇರುವ ಕಾರಣ ಇನ್ನು ಮುಂದೆ ಎಲ್ಲ ಕೆಲಸಗಳನ್ನು ನೆಡೆಸಿ ಕೊಂಡು ಹೋಗುವ ಬಗ್ಗೆ ತೀರ್ಮಾನಿಸಲಾಯಿತು. ಹಸಿರು ಕರ್ನಾಟಕ ಪರಿಸರ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಬಿ.ಎಸ್.ಜಯಣ್ಣ ನವರು ರಾಜ್ಯ ಉಪಾಧ್ಯಕ್ಷರು ಚಂದ್ರಶೇಖರ್ ಬೆಳಗುಂಬ ಹಾಲಪ್ಪ, ರಾಜ್ಯ ಕಾರ್ಯದರ್ಶಿಯಾದ ವಿಶುಕುಮಾರ್, ಅರಸೀಕೆರೆ ತಾಲ್ಲೂಕು ಅಧ್ಯಕ್ಷರಾದ ಎ.ಎಲ್. ಮೋಹನ್ ಕುಮಾರ್ ಅರಸೀಕೆರೆ ಗ್ರಾಮಾಂತರ ಅಧ್ಯಕ್ಷರಾದ ನರೇಂದ್ರಕುಮಾರ್, ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಪರ್ವೇಜ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here