ಶುದ್ದ ಕುಡಿಯುವ ನೀರಿನ ಘಟಕಕ್ಕೆ ಸೋಮಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಚಾಲನೆ

0

ಜಾವಗಲ್ ಹೋಬಳಿಯ ಹಂದ್ರಾಳು ಗ್ರಾಮದಲ್ಲಿ ಶನಿವಾರ ಶ್ರೀ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಸೋಮಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದ ಸಂಸ್ಥೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪುಷ್ಪಗಿರಿ ಒಂದು ಧಾರ್ಮಿಕ ಕ್ಷೇತ್ರವಾಗದೆ ಒಂದೇ ವರ್ಗದ ಜನತೆಗೆ ಸೀಮಿತವಾಗದೆ ಬೆಳೆಯುತ್ತಿರುವ
ಕ್ಷೇತ್ರವಾಗಿದೆ, ಹಳ್ಳಿಗಳಲ್ಲಿ ಬರಿ ರಾಜಕೀಯ ಮಾಡುವುದರಿಂದ ಗ್ರಾಮ ಉದ್ದಾರ ಆಗುವುದಿಲ್ಲ
ಅದರ ಬದಲು ಬೇಕಾದ ಸೌಲಭ್ಯಗಳಿಗೆ ಒಟ್ಟಾಗಿ ಹೋರಾಟ ನಡೆಸಿದರೆ ಯಶಸ್ಸು ಸಾಧ್ಯ, ಮುಂದಿನ ದಿನಗಳಲ್ಲಿ ಪುಷ್ಪಗಿರಿ ಸಂಸ್ಥೆ ವತಿಯಿಂದ ಸಾಲ ಸೌಲಭ್ಯ ನೀಡಲಾಗುವುದುದೆಂದರು,

ಶಾಸಕರಾದ ಕೆ ಎಸ್ ಲಿಂಗೇಶ್ ಮಾತನಾಡಿ
ಅನೇಕ ಕಾಯಿಲೆಗಳು ಪ್ರಾರಂಭವಾಗುವುದೇ ನಾವು ಪ್ರತಿ ನಿತ್ಯ ಕುಡಿಯುವ ನೀರಿನಿಂದಲೆ ನೀರು ಶುದ್ದವಾಗಿದ್ದರೆ ನಾವು ಆರೋಗ್ಯವಾಗಿರಬಹುದು ಅನ್ನುವ ದೂರ ದೃಷ್ಟಿಯಿಂದ ಪರಮಪೂಜ್ಯರು
ಇಂದು 27 ನೇ ಶುದ್ದ ಕುಡಿಯುವ ನೀರಿನ ಘಟಕ
ಉದ್ಘಾಟನೆ ಮಾಡುತ್ತಿರುವುದು ಈ ಭಾಗದ ಜನತೆಗೆ ಅತ್ಯಂತ ಸಂತೋಷದ ವಿಷಯವಾಗಿದೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಾರಂಭವಾಗಿ ಕೇವಲ ಎರಡು ವರ್ಷದಲ್ಲಿ 6 ಜಿಲ್ಲೆಗಳಲ್ಲಿ ತಮ್ಮ ಸಂಸ್ಥೆ ವತಿಯಿಂದ ಅನೇಕ ಒಳ್ಳೆಯ ಕಾರ್ಯ ಮಾಡುತ್ತಿರುವುದು ಸಂತೋಷದ ವಿಷಯವೆಂದರು, ಈ ಸಂದರ್ಭದಲ್ಲಿ ಪುಷ್ಪಗಿರಿ ಆಢಳಿತಾಧಿಕಾರಿಗಳಾದ ಕಿಟ್ಟಪ್ಪನವರು, ಹಾಗೂ ಸಂತೋಷ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾವತಿ, ಉಪಾಧ್ಯಕ್ಷರಾದ ಕೆ ಕೆ ಕುಮಾರ್, ಕೆ ಎಂ ಎಫ್ ನಿರ್ದೇಶಕರಾದ ಬಸವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಸಂಪತಕುಮಾರ್, ದಿನೇಶ್, ರಶ್ಮಿಉಮೇಶ, ವೇಂಕಟೇಶ್, ಗಂಗರಾಜು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here