ವಿಡಿಯೋ ಕಾನ್ಫರೆನ್ಸ್ ಮೂಲಕ ನಮ್ಮ ಹಾಸನ ಸೇರಿ ರಾಷ್ಟ್ರಾದ್ಯಂತ ವಿವಿಧ ಆಮ್ಲಜನಕ ಸ್ಥಾವರ ಉದ್ಘಾಟಿಸಿದ ಪ್ರಧಾನಿ

0

ಹಾಸನ ಅ.07 : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಆನ್ ಲೈನ್ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿ.ಎಂ ಕೇರ್ಸ್ ಅಡಿಯಲ್ಲಿ ಸ್ಥಾಪಿಸಲಾದ ರಾಷ್ಟ್ರದ 35 ಪಿ.ಎಸ್.ಎ ಆಮ್ಲಜನಕ ಸ್ಥಾವರಗಳನ್ನು ಉದ್ಘಾಟಿಸಿದರು.

ಉತ್ತರಖಾಂಡದ  ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ( ಏಮ್ಸ್)ಯ ರಿಷಿಕೇಶಿಯಾದಲ್ಲಿಂದು ಎಲ್ಲಾ ಆಮ್ಲಜನಕ ಸ್ಥಾವರಗಳನ್ನು ಉದ್ಘಾಟಿಸಿ ವೀಡಿಯೋ ಸಂವಾದದ ಮೂಲಕ ಮಾತನಾಡಿದ ಅವರು ಇಲ್ಲಿಯವರೆಗೆ  ಪಿ.ಎಂ ಕೇರ್ಸ್ ಅಡಿಯಲ್ಲಿ ದೇಶಾದ್ಯಂತ ಒಟ್ಟು 1,224 ಪಿ.ಎಸ್.ಎ ಆಕ್ಸಿಜನ್ ಪ್ಲಾಂಟ್‍ಗಳಿಗೆ ಧನಸಹಾಯ ನೀಡಲಾಗಿದೆ. 1,100 ಕ್ಕೂ ಹೆಚ್ಚು ಪ್ಲಾಂಟ್‍ಗಳನ್ನು ನಿಯೋಜಿಸಲಾಗಿದೆ. ಇದು ದಿನಕ್ಕೆ 1,750 ಮೆಗಾ ಟನ್ ಆಮ್ಲಜನಕವನ್ನು ಉತ್ಪಾದಿಸುತ್ತದೆ ಎಂದು ತಿಳಿಸಿದರು.

ಕೋವಿಡ್ ಸೊಂಕಿತರು ಆಮ್ಲಜನಕದ ಕೊರತೆಯಿಂದ ಮೃತಪಡುವ ಸಂಖ್ಯೆ ಅಧಿಕವಾಗುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಜನರು  ಸಾವನ್ನಪ್ಪಿದ್ದಾರೆ. ಸಾರ್ವಜನಿಕರ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ದಿಂದ  ಜಿಲ್ಲೆಯ ಆಸ್ಪತ್ರೆಗಳಲ್ಲೇ   ದಿನ ನಿತ್ಯದ ವೈದ್ಯಕೀಯ ಆಮ್ಲಜನಕ ಉತ್ಪಾದಿಸುವ ಗುರಿಯೊಂದಿಗೆ ಹೊಸ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ  ಎಂದರು.

ಕಡಿಮೆ ಅವಧಿಯಲ್ಲಿ ದೇಶಾದ್ಯಂತ ಕೋವಿಡ್ -19 ವಿರುದ್ಧ ಹೋರಾಡುವ, ಸೌಲಭ್ಯ, ಸಾಮಥ್ರ್ಯ  ವೃದ್ದಿಯಾಗಿರುವುದನ್ನು  ಪ್ರಧಾನ ಮಂತ್ರಿ ಮೋದಿ ಅವರು ಶ್ಲಾಘಿಸಿದರು.

  ಇಷ್ಟು ಕಡಿಮೆ ಅವಧಿಯಲ್ಲಿ, ಭಾರತ   ದೇಶದ ಸಾಮಥ್ರ್ಯ ಪ್ರದರ್ಶನ ಗೊಂಡಿದೆ  1 ಪರೀಕ್ಷಾ ಪ್ರಯೋಗಾಲಯದಿಂದ 3,000 ಪರೀಕ್ಷಾ ಪ್ರಯೋಗಾಲಯಗಳ ನೆಟ್‍ವರ್ಕ್ ಸ್ಥಾಪನೆವರಗೆ ಮತ್ತು ಮುಖಗವುಸು ಮತ್ತು ಕಿಟ್‍ಗಳ ಆಮದಿನಿಂದ  ಉತ್ಪಾದನೆಯವರೆಗೆ ಬದಲಾವಣೆಗೊಂಡು ಭಾರತವು ರಫ್ತುದಾರ ದೇಶವಾಗಿ  ವೇಗವಾಗಿ ಮುಂದುವರಿಯುತ್ತಿದೆ, ಎಂದು ಮೋದಿ ಹೇಳಿದರು.

ರಾಜ್ಯ ಸರ್ಕಾರ ಮತ್ತು ಕೇಂದ್ರದ ಪ್ರಯತ್ನದಿಂದ, ಭಾರತವು 4,000 ಹೊಸ ಆಮ್ಲಜನಕ ಸ್ಥಾವರಗಳನ್ನು ಹೊಂದಿದ್ದು, ಇದನ್ನು ಪಿ.ಎಂ ಕೇರ್ಸ್ ನಿಧಿಯಡಿಯಲ್ಲಿ ಸ್ಥಾಪಿಸಲಾಗಿದೆ. ನಮ್ಮ ದೇಶದಲ್ಲಿನ ಆಸ್ಪತ್ರೆಗಳು ಈಗ ಹೆಚ್ಚು ಸಮರ್ಥವಾಗಿವೆ ಎಂದು ಅವರು ಬಣ್ಣಿಸಿದರು.

ಭಾರತವು ಕೋವಿಡ್ ಪ್ಲಾಟ್‍ಫಾರ್ಮ್ ಅನ್ನು ನಿರ್ಮಿಸುವ ಮೂಲಕ ಇಡೀ ಪ್ರಪಂಚಕ್ಕೆ ದಾರಿ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜ್ಯಪಾಲ ಗುರ್ಮಿತ್ ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪ್ರಧಾನಿಯೊಂದಿಗೆ  ವಿಡಿಯೋ ಸಂವಾದದಲ್ಲಿ ಪಾಲ್ಗೊಂಡರೆ  ಹಿಮ್ಸ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ  ಕೆ.ಗೋಪಾಲಯ್ಯ, ಶಾಸಕರಾದ, ಸಿ.ಎನ್ ಬಾಲಕೃಷ್ಣ, ಕೆ.ಎಂ ಶಿವಲಿಂಗೇಗೌಡ, ಪ್ರೀತಂ ಜೆ  ಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಎ ಪರಮೇಶ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ|| ಕೃಷ್ಣಮೂರ್ತಿ ಹಾಗೂ ಮತ್ತಿತರರು ವಿಡಿಯೋ ಸಂವಾದ ವೀಕ್ಷಣೆಯಲ್ಲಿ ಭಾಗವಹಿಸಿದ್ದರು.

ಇಂದು ನಗರದ ಹಿಮ್ಸ್ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಆಕ್ಸಿಜನ್ ಪ್ಲಾಂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.


ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಗೋಪಾಲಯ್ಯನವರು, ಶಾಸಕರಾದ ಶ್ರೀ ಸಿ.ಎನ್.ಬಾಲಕೃಷ್ಣರವರು, ಪ್ರೀತಮ್ ಜೆ ಗೌಡ ಜಿಲ್ಲಾಧಿಕಾರಿಗಳು, ನಗರಸಭೆ ಅಧ್ಯಕ್ಷರು ಹಾಗೂ ಹಿಮ್ಸ್ ನ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here