ಅರಸೀಕೆರೆಯಲ್ಲಿ ರೌಡಿ ಶೀಟರ್ ಹತ್ಯೆ : ಕ್ರೈಂ ಡೈರಿ ಹಾಸನ

0

ಹಾಸನ / ಅರಸೀಕೆರೆ : ಕ್ರೈಂ ಸುದ್ದಿ ಹಾಸನ ;
• ಅರಸೀಕೆರೆ ನಗರ ಹೊರವಲಯದ ಮಾಲೇಕಲ್ ತಿರುಪತಿ ಬೆಟ್ಟದ ಬಳಿಯ ಕಾರೇಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ರೌಡಿ ಶೀಟರ್ ನವಾಜ಼್ (26) ಎಂಬಾತನ ಹತ್ಯೆ

• 2016ರಲ್ಲಿ ಅರಸೀಕೆರೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದ ವರುಣ್ ಭೀಕರ ಹತ್ಯೆ ಪ್ರಮುಖ ಆರೋಪಿ ಇದೇ ರೌಡಿ ಶೀಟರ್ ನವಾಜ್ (26) ನನ್ನು ಮಂಗಳವಾರ(10Aug2021) ರ ಸಂಜೆ ಕೊಲೆ ಮಾಡಿರೋ ವಿಷಯ, ಬುಧವಾರ(11Aug2021) ಪ್ರಕರಣ ಬೆಳಕಿಗೆ ಬಂದು ಹಾಸನ ಜಿಲ್ಲೆ ಸೇರಿ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ

ಮೃತ ಯುವಕನ ಮರಣೋತ್ತರ ಪರೀಕ್ಷೆ ಬಳಿಕ ಅರಸೀಕೆರೆ ನಗರದ B.H. ರಸ್ತೆಯ ಖಬರಸ್ತಾನ ದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಅಂತ್ಯಕ್ರಿಯೆ ನಡೆಯಿತು. , ಇದಕ್ಕು ಮುನ್ನ ಈತನ ಸ್ನೇಹಿತರು ಸಹಚರರು ಹಾಸನ ನಗರ ಆಸ್ಪತ್ರೆ ಅಥವಾ ಅರಸೀಕೆರೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸೋ ವಿಚಾರದಲ್ಲಿ ಗೊಂದಲವಾಗಿತ್ತು

” ಅರಸೀಕೆರೆ ನಗರದಲ್ಲಿ ಗಾಂಜಾ ಮಾರಾಟ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ನವಾಜ್, ಜೈಲಿಗೆ ಹೋಗಿ ಬಂದಿದ್ದ. ಸ್ನೇಹಿತನ ಬಳಿ ಸುಮಾರು ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದ. ಹಣ ಹಿಂದಿರುಗಿಸಲು ಸತಾಯಿಸುತ್ತಿದ್ದ. ಇದಾದ ನಂತರ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಹತ್ಯೆಯಾಗಿದೆ. ತನಿಖೆ ಚುರುಕುಗೊಳಿಸಿದ್ದು, ಸದ್ಯದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು ” -ನಾಗೇಶ್ (DYSP)

” ಕೊಲೆಯಾಗಿರುವ ನವಾಜ್ ರೌಡಿ ಚಟುವಟಿಕೆ ಬಿಟ್ಟು ಹೋಟೆಲ್ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ. ಕೊಲೆ ಆರೋಪಿ ಗಳನ್ನು ಪೊಲೀಸರು ತಕ್ಷಣವೇ ಬಂಧಿಸಿ, ಅವರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ” – ಸಯ್ಯದ್ ಸರ್ದಾರ್ (ಅರಸೀಕೆರೆ ಮುಸ್ಲಿಂ ಜಮಾತ್ ಕಮಿಟಿ)

Job Opportunity
JOB TITLE: In shop sales at electronic showroom.
GENDER: men
Company requirements: Any Degree holder, with sales skills, customer handling skills, communication.
Experiance: experience Or fresher.
Salary: 15000 + incentives
NOTE: CANDIDATE SHOULD BE IN HASSAN LOCALITY
contact for more details: 8792953058


#crimedairyhassan #arsikere #hassan #hassanpolice #hassannews

LEAVE A REPLY

Please enter your comment!
Please enter your name here