ಹೂ ವ್ಯಾಪಾರಿಯ ಪ್ರಾಯಶ್ಚಿತ ಹಾಸನದ ಓದುಗರಿಗೊಂದು ವೇದಿಕೆ

0

ಹೂ ವ್ಯಾಪಾರಿಯ ಪ್ರಾಯಶ್ಚಿತ

ಒಂದು ಊರಿನಲ್ಲಿ ಮಾರಪ್ಪ ಎಂಬ ಹೂ ವ್ಯಾಪಾರಿ ಇದ್ದನು.ಅವನ ತೋಟದಲ್ಲಿ ಸುಗಂಧ ತುಂಬಿದ ಹೂಗಳು ಇದ್ದವು.ಆದರೆ

ಅವನು ಆ ಹೂಗಳನ್ನು ಉಪಯೋಗಿಸುತ್ತಿರಲಿಲ್ಲ . ಅದನ್ನು ಮಾರಯ್ಯನ ಮನೆಯ ಪಕ್ಕದವರು ಆ ಹೂವನ್ನು ಅವರು ಕಿತ್ತುಕೊಂಡು ಪೋಣಿಸಿ ನಂತರ ಅವರು ಮಾರುಕಟ್ಟೆಗೆ ಹೋಗಿ ಹೂವನ್ನು ಮಾರುತ್ತಿದ್ದರು. ಆದರೆ

ಮಾರಯ್ಯ ಸ್ವಲ್ಪ ಕೆಟ್ಟು ಹೋಗಿದ್ದ ಹೂಗಳನ್ನು ಮಾರುತಿದ್ದನ್ನು . ಆದರೆ ಮಾರಯ್ಯ ಪಕ್ಕದ ಮನೆಯವರು ಹೂಗಳನ್ನು ಮಾರಿ ತುಂಬಾ ದೊಡ್ಡ ಶ್ರೀಮಂತರಾದವರು ಅಂಚಿನ ಮನೆಯಲ್ಲಿದ್ದವರು ಈಗ ಎರಡು ಬಹುಮಾಡಿ ಕಟ್ಟದ ಮನೆಯಲ್ಲಿ ವಾಸವಾಗಿದ್ದಾರೆ. ಇದನ್ನು ನೋಡಿದ ಮಾರಯ್ಯ ಅವನಿಗೆ ಚಿಂತೆಯಾಗುತ್ತದೆ. ಅವರು ಹೇಗೆ ಶ್ರೀಮಂತರಾದವರು ಎಂದು ಯೋಚಿಸುತ್ತಿರುವಾಗ .

ಒಂದು ದಿನ ಪಕ್ಕದ ಮನೆಯವರು ಬಂದು”ಮಾರಯ್ಯ ನಾನು ದಿನನಿತ್ಯ ನಿನ್ನ ಒಪ್ಪಿಗೆ ತೆಗೆದುಕೊಂಡು ಹೂಗಳನ್ನು ಕಿತ್ತುಕೊಂಡು ಪೋಣಿಸಿ ನಾನು ಮಾರುಕಟ್ಟೆಗೆ ಹೋಗಿ ಮಾರುತ್ತಿದ್ದೆ . ಆ ಹೂವುಗಳು ಸುಗಂಧದಿಂದ ತುಂಬಿಕೊಂಡಿದ್ದವು ಆ ಸುಗಂಧ ಜನರಿಗೆ ಮುಟ್ಟಿಸಿ ಎಲ್ಲರೂ ನನ್ನ ಹತ್ತಿರ ಹೂಗಳನ್ನು ತೆಗೆದುಕೊಂಡಿದ್ದರು ಆದರೆ

ನೀನು ಮಾತ್ರ ನಿನ್ನ ಹತ್ತಿರ ಇದ್ದ ಹೂಗಳನ್ನು ಬಳಸದೆ ದುಡ್ಡು ಕೊಟ್ಟು ಬೇರೆ ಹೂಗಳನ್ನು ಕೊಂಡುಕೊಂಡು ಅದರಲ್ಲಿ ಸ್ವಲ್ಪ ಕೆಟ್ಟು ಹೋಗುತ್ತಿದ್ದವು ಆ ದುರ್ವಾಸನೆಗೆ ಜನರು ನಿನ್ನ ಹತ್ತಿರ ಬರುತ್ತಿರಲಿಲ್ಲ ಆದರೆ ಇನ್ನು ಕಾಲ ಮಿಂಚಿಲ್ಲ ನೀನು ಮನಸ್ಸು ಮಾಡಿದರೆ ಈಗಲೇ ನಿನ್ನ ಹತ್ತಿರ ಇರುವ ಹೂವುಗಳನ್ನು ಮಾರಿ ಶ್ರೀಮಂತನಾಗುವೆ ” ಎಂದು ಹೇಳಿ ಹೋದರು. ಆ ಮಾತುಗಳನ್ನು ಕೇಳಿಸಿಕೊಂಡ ಮಾರಯ್ಯ ಅವನು ಒಬ್ಬಒಳ್ಳೆಯ ಮನುಷ್ಯನಾದ ಶ್ರೀಮಂತನಾದ . ನಂತರ ಒಂದು ದಿನ ಮಾರಪ್ಪ ಒಬ್ಬ ಸರ್ವಜ್ಞರನ್ನು ಭೇಟಿಯಾಗುತ್ತಾನೆ. ಮಾರಪ್ಪ ಸರ್ವಜ್ಞರಿಗೆ ಹೇಳುತ್ತಾನೆ ” ಬುದ್ಧಿ ನನ್ನ ಹತ್ತಿರ ಎರಡು ತಲೆಮಾರು ಕೂತು ತಿನ್ನಲು ಹಣ ಇದೆ ಆದರೆ ಆತ ಹಣ ಖರ್ಚು ಮಾಡಲು ಇಷ್ಟ ಇಲ್ಲ ಆ ಹಣ ಏನು ಮಾಡಲಿ ” ಎಂದು ಕೇಳಿದಾಗ ಅವರು ಹೇಳುತ್ತಾರೆ

ನಿನ್ನ ಹಣವನ್ನು ಬಡವರಿಗೆ ಅಥವಾ ಅನಾಥರಿಗೆ ಕೊಡುವಾಗ ನಿಮಗೆ ಯಾವುದೇ ಅರಿಷಾದ್ವರ್ಗ (ಕಾಮ, ಕ್ರೋಧ, ಲೋಭ, ಮೋಹ,ಮಾದಾ,ಮತ್ಸಾರ್ಯ)ಇವುಗಳು ಇರಬಾರದು ಎಂದು ಹೇಳಿ ಹೋದರು . ನಂತರ ಎರಡು ದಿನಗಳ ನಂತರ ತನ್ನ ಹಣವನ್ನು ತೆಗೆದುಕೊಂಡು ಎಲ್ಲಾ ಅನಾಥಾಶ್ರಮ , ವೃದ್ಧಾಶ್ರಮ ಹಾಗೂ ಬಡವರಿಗೆ ಹಣ ಕೊಟ್ಟನು ಹಾಗೂ ಭಿಕ್ಷುಕರಿಗೆ ಕೆಲಸ ಕೊಡಿಸಿ ಮಾರಪ್ಪನು ಕೂಡ ಮೋಕ್ಷವನ್ನು ಪಡೆದುಕೊಂಡನು. ಆದರೆ ಮಾರಪ್ಪನ ಮಕ್ಕಳು ಪ್ರತಿ ಒಬ್ಬರಿಗೂ ತಮ್ಮ ಕಂಪನಿಯಲ್ಲಿ ಕೆಲಸ ಕೊಟ್ಟರು.

ಸತ್ಯ ಘಟನೆ ಆಧಾರಿತ ನಮ್ಮೂರ ಕಥನ

https://www.facebook.com/profile.php?id=100068624001544

ಕಥೆ : ಪಿಕೆ ಗೌತಮ್ , ಹಾಸನ

LEAVE A REPLY

Please enter your comment!
Please enter your name here