ನೂತನ ದೇವಾಲಯ ಉದ್ಘಾಟನೆ ಜಾವಗಲ್

0

ಜಾವಗಲ್ ಹೋಬಳಿ ನಾಗೇನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಕರಿಯಮ್ಮ ಕೆಂಪಮ್ಮದೇವಿಯವರ ನೂತನ ದೇವಾಲಯ ಉದ್ಘಾಟನೆ ಮಹೋತ್ಸವದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್ ಮಾತನಾಡಿ ‘ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೌಲ್ಯಗಳ ಕುಸಿತ ಉಂಟಾಗುತ್ತಿದೆ. ಹಾಗಾಗಿ ಧ್ಯಾನ, ಪ್ರಾರ್ಥನೆ, ಸತ್ಸಂಗಗಳು ಜನರಲ್ಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಗಳು ಬೆಳೆಯುವಂತಹ ವಾತಾವರಣ ನಿರ್ಮಿಸಲು ದೇವಾಲಯಗಳು, ಆಶ್ರಮಗಳು ಪ್ರಮುಖ ತಾಣಗಳಾಗಿವೆ. ಪ್ರತಿಯೊಬ್ಬರು ದಾನ, ಧರ್ಮಗಳಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ಉಂಟಾಗುತ್ತದೆ. ಹಾಗಾಗಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು’ ಎಂದರು.
ನಂತರ ದೇವಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಕಾಣಿಕೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಪ್ಪ,ಮಾಸ್ತಮ್ಮ, ಶಶಿಕುಮಾರ್, ರಾಜಣ್ಣ, ಸಿದ್ದೇಶ್, ಮಂಜುನಾಥ್, ಮೂರ್ತಿ, ಪರಮೇಶ್, ಮಂಜಯ್ಯ, ಗೋವಿಂದ, ರಮೇಶ್, ರಘು, ರಾಜು, ರಂಜಿತ್, ಹಾಗೂ ದೇವಾಲಯದ ಸಮಿತಿಯ ಸಿದ್ದೇಶ್, ಮೂರ್ತಿ ಇದ್ದರು.
ದೇವಾಲಯದ ಸಮಿತಿಯ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್ ಅವರಿಗೆ ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here