ಸಂಘಕ್ಕೆ ಹಣ ಕಟ್ಟಲು ಹೋಗಿದ್ದ ಸಂದರ್ಭದಲ್ಲಿ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಮನೆ ಸಂಪೂರ್ಣ ಸುಟ್ಟು ಬಸ್ಮ

0

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಬಾಣಾವರ … ಇಲ್ಲಿಗೆ ಸಮೀಪದ ಚಿಕ್ಕಣ್ಣನ ಕೊಪ್ಪಲು ಗ್ರಾಮದಲ್ಲಿ ಯಶೋದಮ್ಮ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಮನೆ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ ಅದೃಷ್ಟವಶಾತ್

ಯಾವುದೇ ಪ್ರಾಣಪಾಯ ನಡೆದಿಲ್ಲ ಯಶೋದಮ್ಮನವರು ರಾತ್ರಿ 7:00 ಗಂಟೆಗೆ ಸಂಘದ ಹಣವನ್ನು ಕಟ್ಟಲು ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಇದ್ದಂತಹ ಮಕ್ಕಳು ಪಕ್ಕದ ಚಿಕ್ಕಪ್ಪನ ಮನೆಯಲ್ಲಿದ್ದರು ಯಶೋದಮ್ಮನವರು ಸಂಘವನ್ನು ಕಟ್ಟಿ ಹಿಂತುರುಗಿ ನೋಡಿದಾಗ ಮನೆ ಹೊತ್ತಿ ಉರಿಯುತ್ತಿತ್ತು ಇದನ್ನು ಕಂಡಂತಹ ಗ್ರಾಮಸ್ಥರು

ಸೇರಿ ಬೆಂಕಿ ಹಾರಿಸುವಲ್ಲಿ ತೊಡಗಿ ಬೆಂಕಿ ಹಾರಿಸುವ ಕೆಲಸ ಮಾಡಿದ್ದಾರೆ ಮತ್ತು ಅಗ್ನಿಶಾಮಕ ಇಲಾಖೆಗೆ ತಿಳಿಸಿ ಅಗ್ನಿಶಾಮಕ ವಾಹನವು ಬಂದು ಸಹ ಬೆಂಕಿಯನ್ನು ಹಾರಿಸುವ ಕೆಲಸದಲ್ಲಿ ಕೈಜೋಡಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದರೂ ಮನೆ ಸುಟ್ಟುಹೋದ ಪರಿಣಾಮ ಮಗನ ಮದುವೆಗೆ ಎಂದು

ಮಾಡಿಸಿಟ್ಟಿದಂತಹ ಬಂಗಾರ ಹಾಗೂ ಮನೆಯಲ್ಲಿ ಇದ್ದಂತಹ ಲಕ್ಷಾಂತರ ರೂಪಾಯಿ ಹಣ ಸೇರಿದಂತೆ ಪೀಠೋಪಕರಣಗಳು ಹಾಗೂ ಮನೆಯ ಸಾಮಗ್ರಿಗಳು ಸೇರಿದಂತೆ ಆಹಾರ ಪದಾರ್ಥ ದಾಸ ಧಾನ್ಯಗಳು ಸಂಪೂರ್ಣವಾಗಿ ಕರಕಲಾಗಿ ಹೋಗಿವೆ ಇದರಿಂದಾಗಿ ಮಗನ ಮದುವೆಗೆಂದು ಸಾಲ ಸೋಲಾ ಮಾಡಿ ಬಂಗಾರದ ಒಡವೆಗಳನ್ನು ಮಾಡಿಸಿದಂತಹ ಯಶೋದಮ್ಮನವರ ಕುಟುಂಬ

ಬೀದಿಗೆ ಬಂದು ನಿಂತಿದ್ದು ಕಂಗಾಲ ಆಗಿದೆ ಸ್ಥಳಕ್ಕೆ ಬಾಣಾವರ ಪಿಎಸ್ಐ ಸುರೇಶ್ ಹಾಗೂ ಗ್ರಾಮ ಆಡಳಿತಾಧಿಕಾರಿ ದೀಪ್ತಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

LEAVE A REPLY

Please enter your comment!
Please enter your name here