” ವಿವೇಕಾನಂದರು ತನ್ನ ಜಾತಿಯಿಂದ ಖ್ಯಾತಿ ಗಳಿಸಲಿಲ್ಲ. ತನ್ನ ಜ್ಞಾನ, ವೈಚಾರಿಕತೆ, ದೇಶಾಭಿಮಾನದಿಂದ ವಿಶ್ವ ಖ್ಯಾತಿ ಗಳಿಸಿದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆಯ ಯುವಕರು ಮೈಗೂಡಿಸಿಕೊಳ್ಳಬೇಕು , ಜಗತ್ತಿನ ಅಸ್ತಿತ್ವ ಹಾಗೂ ಮನುಷ್ಯನ ಸಾರ್ಥಕ ಬದುಕಿಗೆ ಜಾತಿಗಿಂತ ನೀತಿ ಬಹುಮುಖ್ಯವಾಗಿದೆ, ಜಾತಿಯ ಗೋಡೆ ಕಟ್ಟಿಕೊಂಡು ಬದುಕುವುದು ಮಾನವೀಯತೆ ಅಲ್ಲ’ ಎಂದು ಕಡೂರು ತಾಲ್ಲೂಕು ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಅರಸೀಕೆರೆ ನಗರದ ವಿವೇಕಾನಂದ ಶಿಕ್ಷಣ ಕಾಲೇಜಿನಲ್ಲಿ ಜ್ಞಾನಶ್ರೀ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ವಿವೇಕಾನಂದರ 159 ನೇ ಜನ್ಮ ದಿನದ ನಿಮಿತ್ತ ರಾಷ್ಟ್ರೀಯ ಯುವಕರ ದಿನಾಚರಣೆಯಲ್ಲಿ ಮಾತನಾಡಿದ್ದು ಹೀಗೆ !