ನಿನ್ನೆ ಜೆಡಿಎಸ್ ತೊರೆದ ಅರಕಲಗೂಡಿನ ಶಾಸಕ ಎ.ಟಿ.ರಾಮಸ್ವಾಮಿ ಇಂದು ದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

0

ದೆಹಲಿ / ಹಾಸನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ; ‘ಅರಕಲಗೂಡಿನ ಶಾಸಕರು, ಉತ್ತಮ ಸಂಸದೀಯ ಪಟು ಶ್ರೀಎ.ಟಿ. ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಆತ್ಮೀಯವಾದ ಸ್ವಾಗತ ಕೋರುತ್ತೇನೆ. ರಾಮಸ್ವಾಮಿ ಅವರ ಆಗಮನದಿಂದ ಹಾಸನ ಭಾಗದಲ್ಲಿ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಸಿಗಲಿದೆ‌’ ಎಂದು ಹೇಳಿದ್ದು . , ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಅಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಿಸುವುದು ಬಿಜೆಪಿ ಉದ್ದೇಶವಾಗಿದ್ದು, ಅದೇ ಹಿನ್ನೆಲೆಯಲ್ಲಿ ಈಗ ಅರಕಲಗೂಡಿನ ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಬಿಜೆಪಿಗೆ ಸೆಳೆದುಕೊಳ್ಳಲಾಗಿದೆ ಎನ್ನಲಾಗಿದೆ . ಇಂದು ದೆಹಲಿಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಿಜೆಪಿಗೆ ಎ.ಟಿ. ರಾಮಸ್ವಾಮಿಯನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದು ಹೀಗೆ … ,

ಎಟಿಆರ್ ಪಕ್ಷ ಸೇರ್ಪಡೆಯಿಂದ ಬಿಜೆಪಿಗೆ ಶಕ್ತಿ ಸಿಗಲಿದೆ ಎಂದು ದೆಹಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದು . ರಾಮಸ್ವಾಮಿ ಅವರ ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿ, ಅವರು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮಾಧ್ಯಮಕ್ಕೆ ತಿಳಿಸಿದರು .,

ಪಕ್ಷದ ಸೇರ್ಪಡೆ ನಂತರ ಎಟಿಆರ್ ಮಾತನಾಡಿದ್ದು ?

” ನಾನು ಭೂಗಳ್ಳರ ವಿರುದ್ಧ ಹೋರಾಟ ಮಾಡಿದ್ದೇನೆ. ಸದ್ಯ ಯಾವುದೇ ಷರತ್ತು ಹಾಕದೆ ಬಿಜೆಪಿ ಸೇರಿದ್ದೇನೆ. ಅತ್ಯಂತ ಸಂತೋಷದಿಂದ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ , ಯಾವುದೇ ಸ್ಥಾನದ ಆಕಾಂಕ್ಷಿ ನಾನು ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸ ನೋಡಿ ಬಿಜೆಪಿ ಸೇರಿದ್ದೇನೆ. ಬಿಜೆಪಿಗೆ ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡುತ್ತೇನೆ. ಇಂದು ಸಂಜೆ ಮತ್ತೆ ನಾಳೆ ಬೆಳಿಗ್ಗೆ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು

ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದೇನೆ. ನನಗೆ ಬಹಳ ಸಂತೋಷ ಆಗುತ್ತಿದೆ. ಯಾಕೆಂದರೆ ನಮ್ಮ ರಾಷ್ಟ್ರ ಭಾರತ ಇಡೀ ವಿಶ್ವದಲ್ಲಿ ದಾಪುಗಾಲು ಹಾಕುತ್ತಿದೆ. ಇದಕ್ಕೆ ಕಾರಣ ಮೋದಿ ಹಾಗೂ ಬಿಜೆಪಿ ಪಕ್ಷ. ಇಂದು ಅಂತಹ ಪಕ್ಷಕ್ಕೆ ನಾನು ಸೇರ್ಪಡೆಯಾಗಿದ್ದೇನೆ ” ಎಂದರು. ,

ರಾಮಸ್ವಾಮಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರು ಇವರು . ಸದ್ಯ ಅವರ ಸೇರ್ಪಡೆಯೊಂದಿಗೆ ಬಿಜೆಪಿ ಹಾಸನದಲ್ಲಿ ಮತ್ತೊಂದರ ಕ್ಷೇತ್ರದ (ಅರಕಲಗೂಡು) ಗೆಲುವಿನ ಮೇಲೆ ಮೇಲೆ ಕಣ್ಣಿಟ್ಟಿದೆ. ಮಾತ್ರವಲ್ಲದೆ,

ಪ್ರಬಲ ನಾಯಕರ ಕೊರತೆಯನ್ನು ಎದುರಿಸುತ್ತಿದ್ದ ಬಿಜೆಪಿಗೆ ರಾಮಸ್ವಾಮಿ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹಾಗೂ ಅರಕಲಗೂಡು ನೆರೆಯ ಕ್ಷೇತ್ರಗಳಲ್ಲಿ ಅವರ ಪ್ರಭಾವವನ್ನು ಬಳಸಲು ಯೋಜಿಸುತ್ತಿದೆ. ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಬಿಜೆಪಿ ಮುಖಂಡ ಎ.ಮಂಜು ಅವರಿಗೆ ಜೆಡಿಎಸ್ ಈಗಾಗಲೇ ಅರಕಲಗೂಡು ಟಿಕೆಟ್ ಘೋಷಿಸಿದೆ. ಇವರು ಎಟಿಆರ್ ಗೆ ಪ್ರಬಲ ಪೈಪೋಟಿಯಾದರೆ ಇದೇ ಬಿಜೆಪಿಯ ಇದೇ ಅರಕಲಗೂಡು ವಿಧಾನಸಭಾ ಕ್ಷೇತ್ರದ ಮತ್ತೊರ್ವ ಟಿಕೆಟ್ ಆಕಾಂಕ್ಷಿ ಪೊಟ್ಯಾಟೋ ರಮೇಶ್ ಕಥೆ ಏನು ಕಾದು ನೋಡ ಬೇಕಿದೆ .

LEAVE A REPLY

Please enter your comment!
Please enter your name here