ಡಾಬಾ ನೋಡ್ಕೋ ಮಗ ಅಂದರೆ ಸೀಗೆ ಗುಡ್ಡಕ್ಕೆ ಜಾಲಿರೈಡ್ ಹೋಗಿ ವಾಪಸ್ ಬರಲೇ ಇಲ್ಲ

0

ಹಾಸನ : ಭೀಕರ ರಸ್ತೆ ಅಪಘಾತ , ವಿದ್ಯಾರ್ಥಿ ಆದರ್ಶ್ ( 21 ವರ್ಷ ) ಸ್ಥಳದಲ್ಲೇ ಸಾವು , XUV ಕಾರು ಟ್ಯಾಂಕರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಯುವಕರು ಒರ್ವ ಯುವತಿ ಇದ್ದು , ಹಾಸನ ನಗರದ ಹೊರವಲಯದ ಸೀಗೆ ಗುಡ್ಡ ಪ್ರವಾಸಿ ತಾಣ (ಅರಣ್ಯ ಸಂರಕ್ಷಿತ ಪ್ರದೇಶ ) ಕ್ಕೆ ಹೋಗಿ ಹಿಂದಿರುಗುವಾಗ ,

ಟ್ಯಾಂಕರ್ ಕಾರನ್ನು ವೇಗವಾಗಿ‌ ಓವರ್ ಟೇಕ್ ಮಾಡುವ ವೇಳೆ ದುರ್ಘಟನೆ ನಡೆದಿದ್ದು. ಹಾಸನ ನಗರದ NDRK ಕಾಲೇಜಿನ ಮೂವರು ವಿದ್ಯಾರ್ಥಿಗಳಲ್ಲಿ ಒರ್ವ ಸಾವನ್ನಪ್ಪಿದ ಘಟನೆ ನಿನ್ನ ಮಾರ್ಚ್ 31 ಶುಕ್ರವಾರ ಸಂಜೆ 7 ಗಂಟೆಗೆ ಬೇಲೂರು ರಸ್ತೆಯ ಕುಪ್ಪಳ್ಳಿಯ ಹರ್ಷ ಡಾಬಾ ಮುಂಭಾಗ ನಡೆದಿದೆ .

ಆದರ್ಶ್ ತಂದೆ ಕುಪ್ಪಳ್ಳಿ ಡಾಬಾ ನಡೆಸುತ್ತಿದ್ದು , ಖಾಸಗಿ ಕೆಲಸದ ನಿಮಿತ್ತ ಮಹಾರಾಷ್ಟ್ರ ಕ್ಕೆ ತೆರಳಿದ್ದರು , ಹೋಗುವ ಮುನ್ನ ಮಗ ಆದರ್ಶ್ ಅವರಿಗೆ ಡಾಬಾ ನೋಡಿಕೊಳ್ಳುವಂತೆ ಸೂಚಿಸಿದ್ದರು ,‌ ಆದರ್ಶ್ ಕೆಲಸದ ಹುಡುಗರಿಗೆ ಡಾಬಾ ನೋಡಿಕೊಳ್ಳುವಂತೆ ಹೇಳಿ ಸ್ನೇಹಿತರೊಂದಿಗೆ ಜಾಲಿ ಟ್ರಿಪ್ ಮುಗಿಸಿ ಹಿಂದಿರುಗುವಾಗ . ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ .

ಸದ್ಯ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು , ಕಾರಿನಲ್ಲಿದ್ದ ಯುವತಿ ಆರೋಗ್ಯ ಚೇತರಿಕೆಯಲ್ಲಿದ್ದು , ಮತ್ತೊರ್ವ ಹಾಸನ ನಗರದ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ , ನುಜ್ಜು ಗುಜ್ಜಾದ xuv ಕಾರು ಹಾಗೂ ಟ್ಯಾಂಕರ್ ಹಾಸನ ನಗರದ ಎನ್ ಆರ್ ವೃತ್ತದ ಪೊಲೀಸ್ ಠಾಣೆ ಬಳಿ ಇದೆ .

LEAVE A REPLY

Please enter your comment!
Please enter your name here