ಖರ್ಜೂರ ನಮ್ಮ ಆರೋಗ್ಯದ ಬಂಗಾರ

0

ಖರ್ಜೂರ(Dates)ದಿಂದ ಆರೋಗ್ಯಕ್ಕಿರುವ ಪ್ರಯೋಜನಗಳು.

ಖರ್ಜೂರ ಒಂದು ಆರೋಗ್ಯಕರವಾದ ಒಣ ಹಣ್ಣು (Dry Fruit ), ಖರ್ಜೂರದಲ್ಲಿ ವಿಟಮಿನ್ಸ್,ಮಿನರಲ್ ಅಂಶಗಳು , ಕ್ಯಾಲ್ಸಿಯಂ, ಐರನ್,ಫಾಸ್ಫೇಟ್, ಪೊಟ್ಯಾಷಿಯಂ ಅಂಶಗಳು ಹೇರಳವಾಗಿ ದೊರೆಯುತ್ತವೆ.
ಇದನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಉಪಯೋಗಗಳು ದೊರೆಯುತ್ತದೆ .
*ಖರ್ಜೂರದ ಸೇವನೆಯಿಂದ ನಮ್ಮ ಮೂಳೆಗಳು ಸದೃಢವಾಗುತ್ತದೆ.

*ಖರ್ಜೂರದಲ್ಲಿನ ಐರನ್ ಅಂಶಗಳು ಅನಿಮಿಯಾ (Anemia- Iron Deficiency ) ದಿಂದ ನಿಶ್ಯಕ್ತಿಯಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ.
*ಖರ್ಜೂರದ ಸೇವನೆ ರಕ್ತದೊತ್ತಡ ಕಾಯಿಲೆಗೆ ಉತ್ತಮವಾದುದು.
*ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆಯನ್ನು ದೂರ ಮಾಡುತ್ತದೆ.
*ಇದರಲ್ಲಿರುವ ವಿಟಮಿನ್ C ಮತ್ತು D ಅಂಶದಿಂದ ಚರ್ಮದ ಆರೋಗ್ಯ ಹಾಗೂ ಕೂದಲಿನ ಆರೋಗ್ಯ ವೃದ್ಧಿಸುತ್ತದೆ.
*ಹೃದಯಕ್ಕೆ ಉತ್ತಮ ಆರೋಗ್ಯ ನೀಡುತ್ತದೆ.

*ಇದರಲ್ಲಿ ನೈಸರ್ಗಿಕ ಸಕ್ಕರೆ ಗ್ಲುಕೋಸ್, ಸುಕ್ರೋಸ್ ಹಾಗೂ ಫ್ರಕ್ಟೋಸ್ ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. (Instant Energy)
*ಕಣ್ಣಿನ ಆರೋಗ್ಯಕ್ಕೆ ಖರ್ಜೂರ ಉತ್ತಮವಾದದ್ದು
*Night Blindness ಅಂದರೆ ರಾತ್ರಿ ಹೊತ್ತು ದೃಷ್ಟಿ ಹೀನವಾಗುಹುದನ್ನು ತಡೆಯುತ್ತದೆ.
*ಮಕ್ಕಳ ಬೆಳವಣಿಗೆಗೆ ಇದು ಉತ್ತಮವಾದ ಹಣ್ಣು.
* ಕೂದಲು ಉದುರುವಿಕೆಯನ್ನು ತಡೆಗಟ್ಟಲು ಇದು ಸಹಾಯಕಾರಿ.
* ದಿನನಿತ್ಯ 3 ಅಥವ 4 ಖರ್ಜೂರದ ಸೇವನೆಯಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here