‘ದೇವತೆಗಳ ಹಣ್ಣು’, ‘ಸರ್ವಗುಣ ಸಂಪನ್ನ’ ,ತೂಕ ಇಳಿಸೋಕೆ ಮುಖ್ಯ ಪಾತ್ರಧಾರಿ.ಇದು ಯಾವ ಹಣ್ಣು?

0

ಎಲ್ಲಾ ಸಮಸ್ಯೆಗೆ ಪರಂಗಿ ಹಣ್ಣು ಹೇಳು ಮಾಡಿಸಿರುವ ಹಣ್ಣು. ಈ ರುಚಿ ನಮ್ಮೆಲ್ಲರಿಗೂ ತಿಳಿದದ್ದೆ, ಇದು ಅದ್ಭುತ ರುಚಿ ಹೊಂದಿರುವ ಹಣ್ಣು.ಇದರಲ್ಲಿ ವಿಟಮಿನ್ ಸಿ, ಎ ಫೈಬರ್ ಹಾಗೂ ಪೊಟ್ಯಾಸಿಯಮ್ ಹೆಚ್ಚು ಪ್ರಮಾಣದಲ್ಲಿದ್ದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಗೊಳಿಸುತ್ತದೆ .

*ತೂಕ ಇಳಿಸುತ್ತದೆ:
ಈಗಿನ ಕಾಲದಲ್ಲಿ ಎಲ್ಲರೂ ತೆಳ್ಳಗೇ ಕಾಣೋದು ಫ್ಯಾಷನ್.ಇಂಥ ಆಸೆ ಇರುವವರಿಗೆ ಪರಂಗಿ ಹಣ್ಣು ಬಹಳ ಉಪಯೋಗಕಾರಿ. ಈ ಹಣ್ಣಿನಲ್ಲಿ ಕ್ಯಾಲೊರಿ ಬಹಳ ಕಮ್ಮಿ ಹಾಗಾಗಿ ಇದು ನಮ್ಮ ಕರುಳಿನ ಚಲನೆಯನ್ನು ತೆರವುಗೊಳಿಸಿ ನಿಮ್ಮ ತೂಕವನ್ನು ಇಳಿಸುತ್ತದೆ .

*ನಿಮ್ಮ ಕಣ್ಣುಗಳಿಗೆ ಬಹಳ ಉತ್ತಮ:
ಪರಂಗಿ ಹಣ್ಣಿನಲ್ಲಿರುವ ವಿಟಮಿನ್ ಎ ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆಯನ್ನು ದೂರ ಮಾಡುತ್ತದೆ. ಕಣ್ಣು ಮಂಜಾಗುವ ಸಮಸ್ಯೆಗಳಿಂದಲೂ ಕೂಡ ನಿಮ್ಮನ್ನು ಚೇತರಿಸುತ್ತಿದೆ.

*ಹೆಚ್ಚು ಆಯಸ್ಸು ಲಭಿಸುವ ಹಾಗೆ ಮಾಡುತ್ತದೆ:
ಹಲವರಿಗೆ ಹೆಚ್ಚು ಕಾಲ ಬದುಕಲು ಬಹಳ ಆಸೆ ಪರಂಗಿ ಹಣ್ಣಿನ ಒಂದು ತುಂಡು ೨೦೦% ವಿಟಮಿನ್ ಸಿ ಹೊಂದಿರುತ್ತದೆ ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ನಿಮಗೆ ಹೆಚ್ಚು ಆಯಸ್ಸು ನೀಡುತ್ತದೆ.

*ಸದಾ ಯುವಕರಾಗಿ ಕಾಣಲು ಸಹಾಯ ಮಾಡುತ್ತದೆ:
ಕಾಂತಿಯುಕ್ತವಾದ ಹೊಳೆಯುವ ಚರ್ಮವನ್ನು ಪಡೆಯಲು ಪರಂಗಿ ಬಹಳ ಸಹಾಯಕಾರಿ.ಇದರಲ್ಲಿ ಇರುವ ವಿಟಮಿನ್ ನಿಮ್ಮನ್ನು ಸದಾ ಯುವಕರಾಗಿ ಕಾಣಲು ಸಹಾಯ ಮಾಡುತ್ತದೆ.

*ದೀರ್ಘ ಕಾಲ ಉಳಿಯುವ ಕೂದಲು:
ಪರಂಗಿ ಹಣ್ಣಿನಲ್ಲಿ ಇರುವ ಪೊಟ್ಯಾಸಿಯಮ್ ಅಂಶ ನಿಮ್ಮ ಕೂದಲನ್ನು ತುಂಬಾ ದೀರ್ಘಕಾಲ ಉಳಿಯುವಂತೆ ಮತ್ತು ಬೊಕ್ಕತಲೆ ಬರದಂತೆ ತಡೆಯುತ್ತದೆ.

*ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ :
ಮಹಿಳೆಯರಿಗೆ ಬರುವಂತಹ ಸ್ತನದ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಿ ತಡೆಗಟ್ಟುತ್ತದೆ.

ಈ ಎಲ್ಲಾ ಉಪಯೋಗಗಳು ತಿಳಿದ ನಂತರವೂ ಪರಂಗಿ ಹಣ್ಣನ್ನು ಉಪಯೋಗಿಸದೆ ಇರುವುದು ಸಾಧ್ಯವಿಲ್ಲ.
ನಿಮ್ಮ ಆರೋಗ್ಯವನ್ನು ಕಾಪಾಡಲು ಸದಾ ಪ್ರಯತ್ನಿಸಿ.

ಬರಹ – ತನ್ವಿ .ಬಿ

LEAVE A REPLY

Please enter your comment!
Please enter your name here