ಸಣ್ಣ ಉದ್ದಿಮೆ ಪ್ರಾರಂಬಿಸಲು ಯೋಜನಾ ವೆಚ್ಚದ ಶೇ.50 ರಷ್ಟು ಅಥವಾ ರೂ.50,000/- ನಗರಸಭೆ ವತಿಯಿಂದ ನೀಡಲಾಗುತ್ತಿದೆ ., ಕೊನೆಯ ದಿ.ಜ.16 👇

0

ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಹಾಸನ.ಡಿ.18(ಹಾಸನ್_ನ್ಯೂಸ್):-  2020-21 ನೇ ಸಾಲಿನ ಎಸ್.ಎಫ್.ಸಿ ಮತ್ತು ನಗರಸಬೆ ಅನುದಾನದಲ್ಲಿ ಕಾಯ್ದಿರಿಸಿದ 29%(24.10%)7.25%ರ  ಯೋಜನೆಯಡಿ ಕ್ರಮವಾಗಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಇತರೆ ಬಡ ಜನರ ಕಲ್ಯಾಣ ನಿಧಿ ಕಾರ್ಯಕ್ರಮಗಳಿಗಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದ್ದು ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಹ ಫಲಾನುಭವಿಗಳು ಅರ್ಜಿ ಹಾಗೂ ದಾಖಲಾತಿಗಳನ್ನು ಜ.16 ರ ಒಳಗಾಗಿ ನಗರಸಭೆ ಹಾಸನ ಇಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಲು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಹಾಸನ ನಗರಸಭಾ ವ್ಯಾಪ್ತಿಯ ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ಅರ್ಹ ಫಲಾನುಭವಿಳಿಗೆ ಸಣ್ಣ ಉದ್ದಿಮೆ ಪ್ರಾರಂಬಿಸಲು ಯೋಜನಾ ವೆಚ್ಚದ ಶೇ.50 ರಷ್ಟು ಅಥವಾ ರೂ.50,000/-ಗಳಿಗೆ ಯಾವುದು ಕಡಿಮೆಯೋ ಅಷ್ಟು ಮೊತ್ತದ ಸಹಾಯಧನವನ್ನು ಬ್ಯಾಂಕ್ ಸಾಲದೊಂದಿಗೆ ನೀಡುವುದು. ಅರ್ಜಿದಾರರು ಬಡತನ ರೇಖೆಗಿಂದ ಕೆಳಗಿದ್ದು ವಾರ್ಷಿಕ ವರಮಾನ 3ಲಕ್ಷ ಮೀರವಂತಿಲ್ಲ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಮತ್ತು ಭಾವಚಿತ್ರ ,ಪ್ರಸ್ತುತ ವರ್ಷದ ವಾರ್ಷಿಕ ವರಮಾನ ಪತ್ರ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ನಿವಾಸಿ ದೃಡೀಕರಣ ಪತ್ರ, ಉದ್ದಿಮೆ ಪರವಾನಗಿ ಪತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ 20ರೂಪಾಯಿ ಚಾಪಾಕಾಗದದಲ್ಲಿ ಪ್ರಮಾಣ ಪತ್ರ ಎಲ್ಲಾ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸಿ ನೀಡುವುದು.
           ಪ.ಜಾತಿ ಮತ್ತು ಪ.ಪಂಗಡದ ಕೌಶಲ್ಯಾಭಿವೃಧ್ದಿ ತರಬೇತಿ ಹೊಂದಿರುವ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವುದು. ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿದ್ದು ವಾರ್ಷಿಕ ವರಮಾನ  3 ಲಕ್ಷ  ಮೀರುವಂತಿಲ್ಲ ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಹೊಲಿಗೆ ತರಬೇತಿಂiÀನ್ನು ಪಡೆದಿರುವ ಪ್ರಮಾಣ ಪತ್ರ. ಈ ಹಿಂದೆ ಬೇರೆ  ಇಲಾಖೆಯಿಂದ ಯಾವುದೇ ಹೊಲಿಗೆ ಯಂತ್ರ ಪಡೆಯದೇ ಇರುವ ಬಗ್ಗೆ 20 ರೂಪಾಯಿ ಛಾಪಾ ಕಾಗದದಲ್ಲಿ ನೋಟರಿ ಪ್ರಮಾಣ ಪತ್ರ. ನಿಗದಿತ ದಾಖಲೆಗಳೊಂದಿಗೆ ಅರ್ಜಿ ಮತ್ತು ಭಾವಚಿತ್ರ, ಪ್ರಸ್ತುತ ವರ್ಷದ ವಾರ್ಷಿಕ ವರಮಾನ ಪತ್ರ, ಜಾತಿ ಪ್ರಮಾಣಪತ್ರ, ಪಡಿತರ ಚೀಟಿ , ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ. ನಿವಾಸಿ ಪ್ರಮಾಣ ಪತ್ರ, ಎಲ್ಲಾ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸಿ ನೀಡುವುದು.
       ಪ.ಜಾತಿ ಮತ್ತು ಪ.ಪಂಗಡಗದ ವಿವಿಧ ಅಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ನೆರವು ನೀಡುವುದು (ಪ್ರೋತ್ಸಾಹ ಧನ/ವಿದ್ಯಾರ್ಥಿ ವೇತನ) ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿದ್ದು ವಾರ್ಷಿಕ ವರಮಾನ 2,50,000/- ಮೀರುವಂತಿಲ್ಲ. ಎಸ್‍ಎಸ್‍ಎಲ್‍ಸಿ, ಐಟಿಐ, ಇತರೆ ವೃತ್ತಿಪರ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 3000 ರೂಪಾಯಿ ನೀಡಲಾಗುವುದು. ಪಿಯುಸಿ,ಡಿಪ್ಲಮೋ, ಉದ್ಯೋಗಾಧಾರಿತ ,ಪ್ಯಾರಾಮೆಡಿಕಲ್ ಕೋರ್ಸ್, ಡಿಪ್ಲಮೋ, ಡಿ.ಎಡ್, ಸಿಪಿಇಡಿ, ಮತ್ತು ಇತರೆ ತಾಂತ್ರಿಕ ಕೋರ್ಸ್‍ಗಳ  ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 4500 ರೂಪಾಯಿ ನೀಡಲಾಗುವುದು.   ಬಿ.ಎ,  ಬಿಎಸ್ಸಿ, ಬಿಕಾಂ, ಬಿ.ಇಡಿ, ಡಿಪಿಎಡ್, ಎಲ್‍ಎಲ್‍ಬಿ ಮತ್ತು ಇತರೆ ಪದವಿ ಡಿಪ್ಲಮೋ ಕೋರ್ಸ್‍ಗಳ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 6000 ರೂಪಾಯಿ ನೀಡಲಾಗುವುದು.  ಎಂ.ಎ, ಎಂಎಸ್ಸಿ, ಎಂಸಿಎ, ಬಿ.ಇ, ಎಂಕಾಂ, ಎಂಎಸ್‍ಡಬ್ಲ್ಯೂ ಹಾಗೂ ತತ್ಸಮಾನ ತರಗತಿಗಳ ವಿಂದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ ರೂ.15000 ಎಂಎಡ್, ಎಂಪಿಇಡಿ, ಹಾಗೂ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 9000 ರೂಪಾಯಿ ನೀಡಲಾಗುವುದು. 
         ಎಂಬಿಬಿಎಸ್ , ಬಿಡಿಎಸ್, ಎಂಟೆಕ್, ಎಂಎಸ್, ಎಂಡಿ, ಎಂಇ ಹಾಗೂ ಇತರೆ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 25000 ರೂಪಾಯಿ ನೀಡಲಾಗುವುದು.     ಪಿಹೆಚ್‍ಡಿ, ಪೋಸ್ಟ್ ಡಾಕ್ಟರೇಟ್ ಹಾಗೂ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 30000 ರೂಪಾಯಿ ನೀಡಲಾಗುವುದು.   ನಿಗದಿತ ದಾಖಲೆಗಳೊಂದಿಗೆ ಅರ್ಜಿ ಮತ್ತು ಭಾವ ಚಿತ್ರ , ಪ್ರಸ್ತುತ ವರ್ಷದ ವ್ಯಾಸಂಗ ಪ್ರಮಾಣ ಪತ್ರ, ಪ್ರಸ್ತುತ ವರ್ಷದ ಜಾತಿ/ಆಧಾಯ ಪ್ರಮಾಣ ಪತ್ರ, ಪಡಿತರ ಚೀಟಿ/ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಪ್ರಸ್ತುತ ವರ್ಷದಲ್ಲಿ ಬೇರೆ  ಇಲಾಖೆಯಿಂದ ಯಾವುದೇ ಪ್ರೋತ್ಸಾಹ ಧನ ಹಾಗೂ ವಿದ್ಯಾರ್ಥಿ ವೇತನ ಪಡೆಯದೇ ಇರುವ ಬಗ್ಗೆ 20 ರೂಪಾಯಿ ಛಾಪಾ ಕಾಗದದಲ್ಲಿ ನೋಟರಿ ಪ್ರಮಾಣ ಪತ್ರ. ಎಲ್ಲಾ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸಿ ಸಲ್ಲಿಸುವುದು.

ಶೇ 7.5 ಯೋಜನೆಯಡಿಯಲ್ಲಿ ಇತರೆ : ಹಿಂದುಳಿದ ಜನಾಂಗದವರು ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ನೆರವು ನೀಡುವುದು (ಪ್ರೋತ್ಸಾಹ ಧನ/ವಿದ್ಯಾರ್ಥಿ ವೇತನ) ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿದ್ದು ವಾರ್ಷಿಕ ವರಮಾನ 2.50 ಲಕ್ಷ ಮೀರುವಂತಿಲ್ಲ  ಎಸ್‍ಎಸ್‍ಎಲ್‍ಸಿ, ಐಟಿಐ, ಇತರೆ ವೃತ್ತಿಪರ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 3000 ರೂಪಾಯಿ ನೀಡಲಾಗುವುದು.  ಪಿಯುಸಿ,  ಡಿಪ್ಲಮೋ,  ಉದ್ಯೋಗಾಧಾರಿತ, ಪ್ಯಾರಾಮೆಡಿಕಲ್ ಕೋರ್ಸ್ ಡಿ.ಎಡ್,ಸಿಪಿಇಡಿ, ಮತ್ತು ಇತರೆ ತಾಂತ್ರಿಕ ಕೋರ್ಸ್‍ಗಳ  ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 4500 ರೂಪಾಯಿ ನೀಡಲಾಗುವುದು. ಬಿ.ಎ, ಬಿಎಸ್ಸಿ, ಬಿಕಾಂ,ಬಿ.ಇಡಿ, ಡಿಪಿಎಡ್, ಎಲ್‍ಎಲ್‍ಬಿ ಮತ್ತು ಇತರೆ ಪದವಿ ಡಿಪ್ಲಮೋ ಕೋರ್ಸ್‍ಗಳ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 6000 ರೂಪಾಯಿ ನೀಡಲಾಗುವುದು. ಎಂ.ಎ, ಎಂಎಸ್ಸಿ, ಎಂಸಿಎ, ಬಿ.ಇ, ಎಂಕಾಂ, ಎಂಎಸ್‍ಡಬ್ಲ್ಯೂ ಹಾಗೂ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 15000 ರೂಪಾಯಿ ನೀಡಲಾಗುವುದು. ಎಂಎಡ್, ಎಂಪಿಇಡಿ ಹಾಗೂ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 9000 ರೂಪಾಯಿ ನೀಡಲಾಗುವುದು.
      ಎಂಬಿಬಿಎಸ್, ಬಿಡಿಎಸ್, ಎಂಟೆಕ್, ಎಂಎಸ್, ಎಂಡಿ, ಎಂಇ ಹಾಗೂ ಇತರೆ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 25000 ರೂಪಾಯಿ ನೀಡಲಾಗುವುದು.  ಪಿಹೆಚ್‍ಡಿ, ಪೋಸ್ಟ್ ಡಾಕ್ಟರೇಟ್ ಹಾಗೂ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 30000 ರೂಪಾಯಿ ನೀಡಲಾಗುವುದು.  ನಿಗದಿತ ದಾಖಲೆ ಅರ್ಜಿ/ಭಾವ ಚಿತ್ರ , ಪ್ರಸ್ತುತ ವರ್ಷದ ವ್ಯಾಸಂಗ ಪ್ರಮಾಣ ಪತ್ರ , ಪ್ರಸ್ತುತ ವರ್ಷದ ಜಾತಿ/ಆಧಾಯ ಪ್ರಮಾಣ ಪತ್ರ, ಪಡಿತರ ಚೀಟಿ/ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಪ್ರಸ್ತುತ ವರ್ಷದಲ್ಲಿ ಬೇರೆ  ಇಲಾಖೆಯಿಂದ ಯಾವುದೇ ಪ್ರೋತ್ಸಾಹ ಧನ/ವಿದ್ಯಾರ್ಥಿ ವೇತನ ಪಡೆಯದೇ ಇರುವ ಬಗ್ಗೆ 20 ರೂಪಾಯಿ ಛಾಪಾ ಕಾಗದದಲ್ಲಿ ನೋಟರಿ ಪ್ರಮಾಣ ಪತ್ರ. ಎಲ್ಲಾ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ನೀಡುವಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here