ಮಾವಿನ ಕೆರೆಯಲ್ಲಿರುವ ” ಜವಾಹರ್ ನವೋದಯ ವಿದ್ಯಾಲಯ ” ಕ್ಕೆ6ನೇ ತರಗತಿ 2021-22 ನೇ ಏಪ್ರಿಲ್ ಸಾಲಿನಲ್ಲಿ ನಿಮ್ಮ ಮಕ್ಕಳ ಸೇರಿಸಬೇಕೆ ಹಾಗಾದರೆ ಈ ವರದಿ ನೋಡಿ 👇

0

ಹಾಸನ/ಹೊಳೆನರಸೀಪುರ ಡಿ.18(ಹಾಸನ್_ನ್ಯೂಸ್) !,  ಹೊಳೆನರಸೀಪುರ ತಾಲ್ಲೂಕಿನ ಮಾವಿನ ಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ಆರನೇ ತರಗತಿ 2021-22 ನೇ ಏಪ್ರಿಲ್ ಸಾಲಿನಲ್ಲಿ ಸೇರಬಯಸುವ ಹಾಸನ ಜಿಲ್ಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ.
     ಪರೀಕ್ಷೆಯು 10 ನೇ ಏಪ್ರಿಲ್ 2021 ರಂದು ಶನಿವಾರ ಆಯಾ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿನ ಮಾನ್ಯತೆ ಪಡೆದ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿರುವ ಹಾಗೂ ದಿನಾಂಕ 01-05-2008 ನಂತರ ದಿನಾಂಕ 30-04-2012ರ ಮೊದಲು ಜನಿಸಿದ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಅರ್ಹರಾಗಿರುತ್ತಾರೆ.
       ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 29 ರಂದು ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಜವಾಹರ್ ನವೋದಯ ವಿದ್ಯಾಲಯ ಮಾವಿನಕೆರೆ ದೂ.ಸಂ. 08175-265429 ಇವರನ್ನು ಸಂಪರ್ಕಿಸಬಹುದಾಗಿದೆ.

JAWAHAR NAVODAYA VIDYALAYA 

Affiliation Code:840005 

The school is affiliated to the CBSE board. (Central Board of Secondary Education)

Contact Details(Address, Phone, Fax):

Address:MAVINAKERE P.O HOLENARASI PURA TQ HASSAN DIST. KARNATAKA Phone Num: STD Code:08175 PhNo: 75429 , Fax:58106

LEAVE A REPLY

Please enter your comment!
Please enter your name here