UPSC ಫಲಿತಾಂಶ , ರ‍್ಯಾಂಕ್ ಪಡೆದ ನಮ್ಮ ಹಾಸನದ ಗ್ರಾಮೀಣ ಪ್ರತಿಭೆ ರವಿನಂದನ್

0

ಹಾಸನ / ದೆಹಲಿ : ಆರಂಭದ ದಿನಗಳಲ್ಲಿ 9 ತಿಂಗಳು ಹೊಸದಿಲ್ಲಿಯಲ್ಲಿ ತರಬೇತಿ ಪಡೆದೆ. ಮೂರಾಲ್ಕು ಪ್ರಯತ್ನಗಳಲ್ಲಿ ವಿಫಲನಾದ ನಂತರ ಹಿಂದೇಟು ಹಾಕದೆ ಸ್ವತಂತ್ರವಾಗಿ ಅಭ್ಯಾಸ ಮಾಡಲು ಮುಂದಾದೆ. ಸತತ ಶ್ರಮ, ಪ್ರಯತ್ನದ ಜೊತೆಗೆ ಸ್ಮಾರ್ಟ್‌ವರ್ಕ್ ಕೂಡ ನೆರವಿಗೆ ಬರುತ್ತದೆ ಎನ್ನುವುದು ತಿಳಿದು ಅದರಂತೆ ಅಭ್ಯಾಸ ಆರಂಭಿಸಿದೆ. ಕಲಿಕೆಗೆ ಉತ್ತಮ ವಾತಾವರಣವೂ ಮುಖ್ಯವಾಗಿದ್ದು ಸದಾ ಧನಾತ್ಮಕ ಚಿಂತನೆಯಿಂದ ನನ್ನ ಪ್ರಯತ್ನದಲ್ಲಿ ಸಫಲತೆ ಕಂಡುಕೊಂಡೆ. ಎಂದ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಗ್ರಾಮದ ಎಂಜಿನಿಯರಿಂಗ್ ಪದವೀಧರ ಬಿ.ಎಂ.ರವಿನಂದನ್‌ ಅವರು ಆರನೇ ಪ್ರಯತ್ನದಲ್ಲಿ 455ನೇ ರ‍್ಯಾಂಕ್ ಗಳಿಸಿದ್ದಾರೆ.

‘ಪರೀಕ್ಷೆ ಬರೆಯಲು ತಂದೆಯೇ ಮಾರ್ಗದರ್ಶನ ನೀಡಿದ್ದರು. ಐದು ಬಾರಿ ಪ್ರಯತ್ನಿಸಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಪ್ರಯತ್ನ ಬಿಡಲಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ಇವರ ತಂದೆ ಬಿ.ಟಿ. ಮಂಜೇಗೌಡ ಕರೆ ಕೆನರಾ ಬ್ಯಾಂಕ್‌ನಲ್ಲಿ ಗುಮಾಸ್ತರಾಗಿದ್ದು, ತಾಯಿ ದೊಡ್ಡಕುಂಚೆ ಆಸ್ಪತ್ರೆಯಲ್ಲಿ ಶುಶೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗನ ಈ ಸಾಧನೆಗೆ ಅವರೂ ಸಂತಸ ವ್ಯಕ್ತಪಡಿಸಿದ್ದಾರೆ ., ಕೆನರಾ ಬ್ಯಾಂಕ್ ನೌಕರ ಬಿ.ಟಿ.ಮಂಜೇಗೌಡ, ಶುಶ್ರೂಷಕಿ ಪದ್ಮಾ ದಂಪತಿಯ ಮಗನಾದ ಅವರು, ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪೂರೈಸಿದರು. ‘ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ಕೊಠಡಿಯಲ್ಲಿದ್ದುಕೊಂಡು ತಯಾರಿ ನಡೆಸಿದೆ. ದಿನಕ್ಕೆ 8 ತಾಸು ಅಧ್ಯಯನ ಮಾಡುತ್ತಿದ್ದೆ. IPS ಹುದ್ದೆ ದೊರಕುವ ನಿರೀಕ್ಷೆ ಇದೆ’.,

ಒಂದರಿಂದ ನಾಲ್ಕನೇ ತರಗತಿವರೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರಿನಲ್ಲಿ ಕಲಿತ ರವಿನಂದನ್ 5 ರಿಂದ 7ನೇ ತರಗತಿವರೆಗೆ ಪಟ್ಟಣದ ನಿರ್ಮಲ ಕಾನ್ವೆಂಟ್‌ನಲ್ಲಿ ಅಭ್ಯಾಸ ಮಾಡಿದರು. 8 ರಿಂದ 10ನೇ ತರಗತಿಯನ್ನು ಪಟ್ಟಣದ ನಾಗ ಶಾಲೆಯಲ್ಲಿ ಕಲಿತಿದ್ದು, ಪದವಿ ಪೂರ್ವ ತರಗತಿಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿದರು. ಹಾಸನದ ಮಲೆನಾಡು ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ಮೆಕಾನಿಕಲ್ ವಿಭಾಗದಲ್ಲಿ 2014ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದು . ನಂತರ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿ UPSC ಯಲ್ಲಿ ಕರ್ನಾಟಕ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ವಿಷಯ ನಿಮಗೆ ಸ್ಪೂರ್ತಿ ದಾಯಕ ಎನಿಸಿದರೇ ಶೇರ್ ಮಾಡಿ .

LEAVE A REPLY

Please enter your comment!
Please enter your name here