ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ಮಾಜಿ ಸಿ.ಎಂ.ಸಿಧ್ದರಾಮಯ್ಯ ; ಹೈಲೈಟ್ಸ್

0

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ 29/5/2022 ರಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ಭಾಗವಹಿಸಿ, ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್

ಅಭ್ಯರ್ಥಿ ಮಧು ಮಾದೇಗೌಡರ ಪರ ಪ್ರಚಾರ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಾಜಿ ಸಚಿವರಾದ ಚಲುವರಾಯಸ್ವಾಮಿ, ಶಿವರಾಮ್, ಮಾಜಿ ಸಂಸದ ಜವರೇಗೌಡ, ಮಾಜಿ ಶಾಸಕ ಗೋಪಾಲಸ್ವಾಮಿ ಮತ್ತಿತರರು ಹಾಜರಿದ್ದರು.

“ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿದ್ದಾಗ 53 ಲಕ್ಷ ಕೋಟಿ ರೂ. ಸಾಲದ ಹೊರೆ ಇದ್ದು, ಈಗ 155 ಲಕ್ಷ ಕೋಟಿ ರೂ. ಆಗಿದೆ. ರಾಜ್ಯ ಸರಕಾರ 5.18 ಲಕ್ಷ ಕೋಟಿ ರೂ. ಸಾಲ ಮಾಡಿದ್ದು

ಪ್ರತಿ ವರ್ಷ 40 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಅಸಲು ಮತ್ತು ಬಡ್ಡಿಗೆ ನೀಡಬೇಕಾಗಿದೆ. ನಿಮಗೆ ಕೈಮುಗಿಯುತ್ತೇನೆ, ರಾಜ್ಯವನ್ನು ಉಳಿಸಲು ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಕಾಂಗ್ರೆಸ್ ಬೆಂಬಲಿಸಿ ಎಂದರು ಸಿದ್ದರಾಮಯ್ಯ

ಪಿಎಸ್‍ಐ ಸೇರಿ ಎಲ್ಲಾ ನೇಮಕಾತಿ ಯಲ್ಲಿ ಅಕ್ರಮ ಕಂಡು ಬರುತ್ತಿದೆ. ಮಂತ್ರಿಗಳು, ಅಧಿಕಾರಿಗಳು ಭ್ರಷ್ಟಾಚಾರ ದಲ್ಲಿ ಶಾಮೀಲಾಗಿದ್ದಾರೆ. ರಾಜ್ಯ ಸರ್ಕಾರ ಶೇ 40 ರಷ್ಟು ಕಮಿಷನ್ ಸರ್ಕಾರ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ಆಪಾದಿಸಿದರು.

‘ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತಿದೆ, ಇದು ನನಗೆ ಅರ್ಥವಾಗುತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ಅದರ ಲಾಭವನ್ನು ಪಡೆದುಕೊಂಡು ಜೆಡಿಎಸ್ ಗೆಲ್ಲುತ್ತಿದೆ.

ಮಂಡ್ಯದಲ್ಲಿ 7 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರೂ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಅದೇ ರೀತಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‍ ನಾಯಕರು ಒಗ್ಗಟ್ಟು ಪ್ರದರ್ಶಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 4 -5 ಸ್ಥಾನ ಗೆಲ್ಲಬಹುದು’ ಎಂದರು.

ಪಟ್ಟಣದಲ್ಲಿ ಭಾನುವಾರ ಎರಡು ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಪಟ್ಟಣದ ಹಾಸನ ರಸ್ತೆಯಲ್ಲಿರುವ ಒಂದು ಕಚೇರಿ ಉದ್ಘಾಟನೆ ಮಾಡಿದರು. ನಂತರ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಅಂಗವಾಗಿ ಏರ್ಪಡಿಸಿದ್ದ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಬಳಿಕ ಇನ್ನೊಂದು ಕಚೇರಿ ಉದ್ಘಾಟನೆ ಮಾಡಿದರು. ಇದು ಕೆಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು.

‘ತಾಲ್ಲೂಕಿನ ನಾಯಕರು ಬೇಕಾಬಿಟ್ಟಿ ಕಚೇರಿ ಆರಂಭಿಸುವುದು ಎಷ್ಟು ಸರಿ? ಕಾರ್ಯಕರ್ತರು ಯಾವ ಕಚೇರಿಗೆ ಹೋಗಬೇಕು. ಒಂದು ಕಚೇರಿ ಉದ್ಘಾಟನೆ ಮಾಡಿದ ಬಳಿಕ ಎರಡನೇ ಕಚೇರಿ ಅಗತ್ಯ ಇರಲಿಲ್ಲ. ವೋಟ್ ಹಾಕೋಕೆ ಜನತೆ ಸಿದ್ಧರಿದ್ದಾರೆ. ಆದರೆ ನಾಯಕರಲ್ಲಿ ಒಗ್ಗಟ್ಟೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು

ಈ ಮದ್ಯೆ ಸಿದ್ದರಾಮಯ್ಯನವರ ಹಿಂದೆ ಮುಂದೆಯೇ ನಾ ಮುಂದು ತಾ ಮುಂದು ಎಂದು ಹಾಸನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಓಡಾಡುತ್ತಿದ್ದುದು ಕಂಡುಬಂತು


LEAVE A REPLY

Please enter your comment!
Please enter your name here