ಗಮನಿಸಿ : ಇನ್ನು ಮುಂದೆ ಕಾರವಾರ ಹಾಸನ ಬೆಂಗಳೂರು ರೈಲು ವೇಗ ಹೆಚ್ಚಳದಿಂದ ಸಮಯ ಕಡಿತಗೊಳ್ಳಲಿದೆ

0

ಹಾಸನ: ಜೂನ್ 1ಕ್ಕೆ ಕಾರವಾರ ಮತ್ತು ಬೆಂಗಳೂರು ನಡುವೆ ಸಂಚರಿಸುವ ರೈಲಿನ ಸಂಚಾರ ಸಮಯವನ್ನು 45 ನಿಮಿಷ ಹಾಗೂ ಕಣ್ಣೂರು- ಬೆಂಗಳೂರು ರೈಲಿನ ಸಂಚಾರ ಸದುಯವನ್ನು 20 ನಿಮಿಷ ಕಡಿಮೆಗೊಳಿಸುವ ನೈಋತ್ಯ ರೈಲ್ವೆಯ ನಿರ್ಧಾರ ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಖುಷಿಯ ವಿಷಯವಾಗಿದೆ

ಹಾಸನ ಮತ್ತು ಶ್ರವಣಬೆಳಗೊಳ ಹಳಿ ನಡುವಿನ ದುರಸ್ತಿಯನ್ನು ಯೋಜನೆಯಡಿ ಹಳಿ ನವೀಕರಣ ಪೂರ್ಣಗೊಳಿಸಿದ ನಂತರ ಹಾಸನ- ಬೆಂಗಳೂರು ವಿಭಾಗದಲ್ಲಿ ರೈಲುಗಳ ವೇಗ ಹೆಚ್ಚಿಸಲಾಗಿರುವುದರಿಂದ ಪ್ರಯಾಣ ಅವಧಿಯು ಕಡಿಮೆಯಾಗಲಿದೆ.

ಮಂಗಳೂರು ಸೆಂಟ್ರಲ್ ಮೂಲಕ ಸಂಚರಿಸುವ, ರೈಲು ಸಂಖ್ಯೆ 512 ಕಣ್ಣೂರು- ಬೆಂಗಳೂರು ರಾತ್ರಿ ರೈಲು ಬೆಂಗಳೂರನ್ನು ಪ್ರತಿ ದಿನ ಮುಂಜಾನೆ 6.50ಕ್ಕೆ ತಲುಪುತ್ತಿದ್ದರೆ ಜೂನ್ 1ರಿಂದ ಅದು ಬೆಂಗಳೂರನ್ನು 6.30ಕ್ಕೆ ತಲುಪಲಿದೆ. ಈ ರೈಲು ಹಾಸನವನ್ನು ಮುಂಜಾನೆ 2.55ಕ್ಕೆ, ಚನ್ನರಾಯಪಟ್ಟಣಕ್ಕೆ 3.21ಕ್ಕೆ ಶ್ರವಣಬೆಳಗೊಳಕ್ಕೆ 3.31ಕ್ಕೆ, ಕುಣಿಗಲ್ ನಿಲ್ದಾಣಕ್ಕೆ 4.29ಕ್ಕೆ ಮತ್ತು ಯುಶವಂತಪುರ ನಿಲ್ದಾಣವನ್ನು 6.04ಕ್ಕೆ ತಲುಪಲಿದೆ.

ರೈಲು ಸಂಖ್ಯೆ 16511 ಈಗ ಬೆಂಗಳೂರಿನಿಂದ ರಾತ್ರಿ 9.308 ನಿರ್ಗಮಿಸುತ್ತಿದ್ದರೆ ಜೂನ್ 1ರಿಂದ 9.35ಕ್ಕೆ ನಿರ್ಗಮಿಸಲಿದೆ. ಈ ರೈಲು ಯಶವಂತಪುರ ನಿಲ್ದಾಣವನ್ನು 9.47 ಕುಣಿಗಲ್ ಗೆ 10.45ಕ್ಕೆ ಶ್ರವಣಬೆಳಗೊಳ ನಿಲ್ದಾಣಕ್ಕೆ 11.36, ಚನ್ನರಾಯಪಟ್ಟಣ ನಿಲ್ದಾಣವನ್ನು 11.46ಕ್ಕೆ ಮತ್ತು ಹಾಸನ ನಿಲ್ದಾಣವನ್ನು 12.40ಕ್ಕೆ ತಲುಪಲಿದೆ.

ಕಾರವಾರ- ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಈಗ ಬೆಂಗಳೂರನ್ನು ಬೆಳಗ್ಗೆ 8 ಗಂಟೆಗೆ ತಲುಪುತ್ತಿದ್ದರೆ ಜೂನ್ 1ರಿಂದ ಬೆಂಗಳೂರಿಗೆ 7.15ಕ್ಕೆ ತಲುಪಲಿದೆ. ಈ ರೈಲು ಹಾಸನ, ಚನ್ನರಾಯಪಟ್ಟಣ, ಕುಣಿಗಲ್, ಮತ್ತು ಯಶವಂತಪುರ ನಿಲ್ದಾಣಗಳನ್ನು ಕ್ರಮವಾಗಿ 3,53, 4.19 ಹಾಗೂ 5.16ಕ್ಕೆ ತಲುಪಲಿದೆ.

ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ಈಗಿನ 6.50ರ ಬದಲು ಜೂನ್ 1ರಿಂದ 6.45ಕ ಬೆಂಗಳೂರು ನಿಲ್ದಾಣದಿಂದ ನಿರ್ಗಮಿಸಲಿದೆ. ಆದರೆ ಮಂಗಳೂರು ಮತ್ತು ಕಾರವಾರನಿಲ್ದಾಣಗಳಲ್ಲಿ ಆಗಮನ ಸಮಯದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಕಣ್ಣೂರು- ಬೆಂಗಳೂರು ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಈಗ ರಾತ್ರಿ 8.10ಕ್ಕೆ ನಿರ್ಗಮಿಸುತ್ತಿದೆ ಹಾಗೂ ಪಂಚಗಂಗಾ ಎಕ್ಸ್ ಪ್ರೆಸ್ ಕಾರವಾರ ನಿಲ್ದಾಣದಿಂದ ಸಂಜೆ 6 ಗಂ ಟೆಗೆ ನಿರ್ಗಮಿಸುತ್ತದೆ. ಜೂನ್ 1ರಿಂದ ಮಂಗಳೂರು ಬೆಂಗಳೂರು ನಡುವಿನ ಪ್ರಯಾಣ ಅವಧಿ: 10.20 ಗಂಟೆಗಳಾದರೆ ಕಾರವಾರ ಬೆಂಗಳೂರು ನಡುವಿನ ಪ್ರಯಾಣ ಅವಧಿ 13.15 ಗಂಟೆಗಳಾಗಲಿವೆ.

LEAVE A REPLY

Please enter your comment!
Please enter your name here