ಹಾಸನ: ಕಾಡಾನೆ ದಾಳಿಗೆ ಯುವಕ ಸಾವನ್ನಪ್ಪಿರುವ ಘಟನೆ ಹಾಸನ ಸಕಲೇಶಪುರ ಬಾಳ್ಳುಪೇಟೆಯ ಗಾಳಿಗುಡ್ಡ ಗ್ರಾಮದಲ್ಲಿ ನಡೆದಿದೆ. ರವಿ (48) ಆನೆ ದಾಳಿಗೆ ಬಲಿಯಾದವ.
ಹಾಸನ ಸಕಲೇಶಪುರದಲ್ಲಿ ಜನರ ಮೇಲೆ ಕಾಡಾನೆ ದಾಳಿ ಮುಂದುವರಿದಿದ್ದು, ಕಾಫಿ ತೋಟದ ಕೆಲಸ ಮಾಡುತ್ತಿದ್ದ ಒರ್ವನ ಮೇಲೆ ಆನೆ ಹಿಂಬದಿಯಿಂದ ಗುದ್ದಿದ ರಭಸಕ್ಕೆ ನೆಲಕ್ಕಪ್ಪಳಿಸಿದ ರವಿ , ಸ್ಥಳದಲ್ಲೇ ಸಾವನ್ನಪ್ಪಿದ್ದು . ಮುಖ ಸೇರಿದೇಹದ ಹಲವು ಅಂಗಾಗಗಳಿಗೆ ಗಾಯಗಳಾಗಿರುವ ಗುರುತುಗಳಿವೆ
ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರಿಂದ ರವಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು , ಈಗಾಗುತ್ತದೆ ಎಂದು ಯೋಚಿಸಿರಲಿಲ್ಲ , ಗರಬಡಿದಂತಾಗಿದೆ
ಕಾಡಾನೆಗಳ ಹಾವಳಿಯಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದು, ಈ ಬಗ್ಗೆ ಕ್ರಮಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಭಾರೀ ಆಕ್ರೋಶ ಹೊರಹಾಕಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸಕಲೇಶಪುರ ಬಂದ್ ಮಾಡಲು ಸಾರ್ವಜನಿಕ ವಲಯದಿಂದ ಹಲವು ಸಂಘಟನೆಗಳು ನಾಳೆ 11 ಮೇ ಬುಧವಾರ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆಗೆ ಮುಂದಾಗಿದೆ ಎನ್ನಲಾಗಿದೆ