ಸರ್ಕಾರಿ ಶಾಲೆಗಳನ್ನು ಉಳಿಸಲು ಪೋಷಕರ ಸಹಕಾರ ಅತಿಮುಖ್ಯ ಎಂದು ಶಾಸಕ ಕೆ ಎಸ್ ಲಿಂಗೇಶ್.

0

ಬೇಲೂರು : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಬಿಕ್ಕೋಡು ಇವರ ಸಹಯೋಗದಿಂದ ತಾಲೂಕಿನ ಅಂಕಿಹಳ್ಳಿ ಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಸಿ ಮಾತನಾಡಿದರು.
ಶಾಲಾ ಉದ್ಘಾಟನೆ ನಡೆಸಿ ಮಾತನಾಡಿದ ಶಾಸಕ ಕೆ ಎಸ್ ಲಿಂಗೇಶ್ ಸುಮಾರು ೭ ವರ್ಷಗಳಿಂದ ಕಡಿಮೆ ಮಕ್ಕಳ ದಾಖಲಾತಿಯಿಂದ ಮುಚ್ಚಲ್ಪಟ್ಟಿದ್ದ ಸರ್ಕಾರಿ ಶಾಲೆಗೆ ಪ್ರಾರಂಭವಾಗಲು ಮರುಜೀವ ಕಾಯಕಲ್ಪ ಸಿಕ್ಕಿದ್ದು ಇದಕ್ಕೆ ಅಂಕೀಹಳ್ಳಿ ಗ್ರಾಮಸ್ಥರು ಮರುಜೀವ ನೀಡಿದ್ದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒಂದು ಕೈಗನ್ನಡಿಯಾಗಿದೆ.ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಪೋಷಕರು ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಸರಿಯಲ್ಲ.ಈ ಬೆಳವಣಿಗೆ ಸರಿಯಲ್ಲ.ಪ್ರತಿಯೊಬ್ಬ ಅಧಿಕಾರಿಗಳು ಸಮಾಜದಲ್ಲಿ ಉತ್ತುಂಗ ಸ್ಥಾನದಲ್ಲಿ ಇದ್ದಾರೆ ಎಂದರೆ ಅದು ಅವರು ಓದಿದ ಸರ್ಕಾರಿ ಶಾಲೆಗಳೇ ಕಾರಣ.ಒಂದು ವೇಳೆ ಸರ್ಕಾರಿ ಶಾಲೆಗಳು ಇಲ್ಲದೇ ಪಕ್ಷದಲ್ಲಿ ಖಾಸಗೀ ಶಾಲೆಗಳು ಹೆಚ್ಚಿನ ಶುಲ್ಕ ಭರಿಸಿ ವಸೂಲಿ ಮಾಡುತ್ತಾರೆ.ಹಣವಿದ್ದವರು ಕಟ್ಟುತ್ತಾರೆ ಆದರೆ ಬಡವರ ಸ್ಥಿತಿ ಏನು,ಹಾಗಾಗಿ ಈಗ ಸರ್ಕಾರಿ ಶಾಲೆಯಲ್ಲೇ ಉತ್ತಮ ಬೋಧನೆ,ಸುಸಜ್ಜಿತ ಕೊಠಡಿ,ಉತ್ತಮ ಶಿಕ್ಷಕರು, ಮಕ್ಕಳಿಗೆ ಸಮವಸ್ತ್ರ ,ನಲಿಕಲಿ

ಮದ್ಯಾಹ್ನದ ಬಿಸಿಊಟದ ವ್ಯವಸ್ಥೆ ,ಆಂಗ್ಲ ಮಾಧ್ಯಮ ಕಲಿಕೆ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದ್ದು ಸರ್ಕಾರಿ ಶಾಲೆಗಳೂ ಉತ್ತಮ ಗುಣಮಟ್ಟದಿಂದ ಕೂಡಿದೆ.ಇಲ್ಲಿ ಓದುವ ಮಕ್ಕಳಿಗೆ ಜೀವನದ ಪಾಠ,ಬದುಕುವ ಕಲೆ,ಹಾಗೂ ಮುಂದಿನ ಉತ್ತಮ ಭವಿಷ್ಯ ಕಂಡುಕೊಳ್ಳಲು ಸರ್ಕಾರಿ ಶಾಲೆಗಳು ಪೂರಕವಾಗಿದೆ.ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಪೋಷಕರ ಪಾತ್ರ ಹೆಚ್ಚಿನದಾಗಿದೆ.ಅದ್ದರಿಂದ ನಿಮ್ಮ ಸಹಕಾರ ಇದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಜೊತೆ ಪೈಪೋಟಿ ನೀಡುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣ ಅಧಿಕಾರಿ ಎಸ್ ಆರ್ ಲೋಕೇಶ್ ಮಾತನಾಡಿ ಈಗಾಗಲೇ ಮುಚ್ಚಿರುವ ಶಾಲೆಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು ಅದರಲ್ಲಿ ತಾಲೂಕಿನ ಕೂಡ್ಲೂರು,ಸೂರಾಪುರ,ಐರವಳ್ಳಿ ಹಾಗೂ ಅಂಕಿಹಳ್ಳಿ ಪೇಟೆಯ ೪_ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಆ ಗ್ರಾಮಗಳಲ್ಲಿ ಗ್ರಾಮಸ್ಥರು ಹಾಗೂ ಪೋಷಕರ ಸಹಾಯದೊಂದಿಗೆ ಶಾಲೆಯನ್ನು ಪ್ರಾರಂಭಿಸಲು ಸಿದ್ಧತೆ ಮಾಡಲಾಗುತ್ತಿದೆ.ಅಂಕಿಹಳ್ಳಿ ಪೇಟೆಯ ಸರ್ಕಾರಿ ಶಾಲೆ ಸುಮಾರು ೭ ವರ್ಷಗಳಿಂದ ಇಲ್ಲಿ ಯಾವುದೇ ತರಗತಿಯಾಗಲಿ ಅಥವಾ ಶಿಕ್ಷಣವಾಗಲಿ ನಡೆಸುತ್ತಿರಲಿಲ್ಲ,ಕಾರಣ ಮಕ್ಕಳ ದಾಖಲಾತಿ ಕನಿಷ್ಠ ಪ್ರಮಾಣದಲ್ಲಿ ಇದ್ದಿದ್ದು ಶಿಕ್ಷಕರ ಕೊರತೆ ಇತ್ತು.ಆದರೆ ಈಗ ಕಾಲ ಬದಲಾದಂತೆ ಶಿಕ್ಷಣ ವ್ಯವಸ್ಥೆ ಕೂಡ ಬದಲಾಗಿದೆ.ಖಾಸಗಿ ಶಾಲೆಗಳಿಗೆ ಇಂದು ಸರ್ಕಾರಿ ಶಾಲೆಗಳು ಪೈಪೋಟಿ ನೀಡುತ್ತಿದ್ದು ಉತ್ತಮ ಶಿಕ್ಷಕರನ್ನು ಒಳಗೊಂಡಿದೆ.ವಿಧ್ಯಾರ್ಥಿಗಳಿಗೆ ಉತ್ತಮ ಸವಲತ್ತುಗಳನ್ನು ನೀಡಿದ್ದು ಪೋಷಕರು ಯಾವುದೇ ಅಂಜಿಕೆ ಇಲ್ಲದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಬಹುದಾಗಿದೆ.ಅಂಕೀಹಳ್ಳಿ ಪೇಟೆ ಶಾಲೆಗೆ ಇಬ್ಬರು ಉನ್ನತ ಶಿಕ್ಷಕರನ್ನು ನೇಮಿಸಿದ್ದು ಹೆಚ್ಚಿನ ರೀತಿಯಲ್ಲಿ ವಿಧ್ಯಾಭ್ಯಾಸ ನೀಡಲಿದ್ದಾರೆ.ನಮ್ಮಶಾಸಕರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಲೆಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ತಟ್ಟೆ ಪುಸ್ತಕ ಸಮವಸ್ತ್ರ ಗಳನ್ನು ಶಾಸಕ ಕೆ ಎಸ್ ಲಿಂಗೇಶ್ ವಿತರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನಟರಾಜ್,ಗಣೇಶ್,ತಾ,ಪಂ,ಮಾಜಿ ಅಧ್ಯಕ್ಷೆ ಕಮಲಾ ಚನ್ನಪ್ಪ,
ಲಕ್ಕುಂದ ಗ್ರಾಮಪಂಚಾಯಿತಿ ಅಧ್ಯಕ್ಷ ತಮ್ಮೇಗೌಡ,ಉಪಾಧ್ಯಕ್ಷೆ ಗೀತಾ ವಿರುಪಾಕ್ಷ,ಸದಸ್ಯರಾದ ಚೈತ್ರಾ ಸುಂದರೇಶ್,ರಾಧಾ ಗಂಗಾಧರ್ , ಲೀಲಾ ಕುಮಾರ್,ಪಿಡಿಓ ಮಂಜುನಾಥ್,ಇಸಿಓ ರವಿಕುಮಾರ್,ಗ್ರಾಮಸ್ಥರು ಹಾಜರಿದ್ದರು

LEAVE A REPLY

Please enter your comment!
Please enter your name here