ಈ ಬಾರಿಯ ಚನ್ನಕೇಶವ ಸ್ವಾಮಿ ರಥೋತ್ಸವ : ಭಕ್ತಾಧಿಗಳಿಗೆ ನಿಷೇಧ (ಈ ಬಾರಿಯ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವದ ದಿನಾಂಕ 👇

0

ಹಾಸನ / ಬೇಲೂರು (ಹಾಸನ್_ನ್ಯೂಸ್ !, ಬೇಲೂರು ನಗರದಲ್ಲಿರುವ ಶ್ರೀ ಚನ್ನಕೇಶ್ವಸ್ವಾಮಿ ದೇವಾಲಯದಲ್ಲಿ ಏ.15 ರಿಂದ 29 ರವರೆಗೆ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ನಡೆಯಲಿದ್ದು,  ಕೋವಿಡ್-19 ಸೋಂಕು ಹರಡುವಿಕೆ ಹೆಚ್ಚುತ್ತಿರುವ ಸಂಬಂಧ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಗಳಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಸಾರ್ವಜನಿಕರು/ಭಕ್ತಾಧಿಗಳು ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಆಗಮಿಸುವುದರಿಂದ ಕೋವಿಡ್-19 ಸೋಂಕು ಹರಡುವಿಕೆ ಹಿನ್ನಲೆಯಲ್ಲಿ ಸದರಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವವನ್ನು ಸರಳವಾಗಿ ದೇವಾಲಯದ ಒಳಭಾಗದಲ್ಲಿ ದೇವಾಲಯದ ಸಂಪ್ರದಾಯದಂತೆ ನಡೆಸಲಾಗುವುದು.
ಜಾತ್ರಾ ಮಹೋತ್ಸವ ಮತ್ತು ರಥೋತ್ಸವವನ್ನು ಸರಳವಾಗಿ ನಡೆಸುವ ಉದ್ದೇಶದಿಂದ ಸಾರ್ವಜನಿಕರಿಗೆ/ ಭಕ್ತಾಧಿಗಳಿಗೆ ಸದರಿ ದಿನದಂದು ದೇವಾಲಯದ ಪ್ರವೇಶವನ್ನು ನಿಷೇಧಿಸಿದೆ. ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಗಳು, ಅರ್ಚಕರುಗಳು ಮತ್ತು ಆಡ್ಡೆಗಾರರು  ಮಾತ್ರ ಹಾಜರಿದ್ದು ದೇವಾಲಯದ ಸಂಪ್ರದಾಯದಂತೆ ದೇವಾಲಯದ ಒಳಭಾಗದಲ್ಲಿ  ರಾತ್ರಿ 7 ಗಂಟೆಯ ಒಳಗೆ ಸರಳವಾಗಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವವನ್ನು ನೆರವೇರಿಸಲು ಹಾಗೂ ಎಲ್ಲಾ ಸಾಂಪ್ರದಾಯಿಕವಾಗಿ ಆಚರಣೆ ಮತ್ತು ಪೂಜೆಗನ್ನು ಸರಳರೀತಿಯಲ್ಲಿ ಆಚರಿಸಲು ಸೂಚಿಸಿದೆ.  ದೇವಾಲಯದ ಆವರಣದಲ್ಲಿ ಯಾವುದೇ ರೀತಿಯ ಸಾಮೂಹಿಕ ಭೋಜನ ಮತ್ತು ಪ್ರಸಾದವನ್ನು ತಯಾರಿಸಿ ವಿತರಿಸುವುದನ್ನು ನಿಷೇಧಿಸಿದೆ, ಸಾಂಕ್ರಮಿಕ ರೋಗಗಳ  ಕಾಯ್ದೆ ಹಾಗೂ ವಿಪತ್ತು ನಿರ್ವಹಣೆ ಕಾಯ್ದೆಯ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here