ವಿದ್ಯುತ್ ತಂತಿ ಅವಘಡದಿಂದ ಜಾನುವಾರು ಸೇರಿದಂತೆ ಓರ್ವ ಮಹಿಳೆ ಸಾವು

0

ಹಾಸನ : ವಿದ್ಯುತ್ ತಂತಿ ಅವಘಡದಿಂದ ಜಾನುವಾರು ಸೇರಿದಂತೆ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಜರುಗಿದೆ.
ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಬೆಳಗ್ಗೆಯಿಂದ ಎಡಬಿಡದೆ ಸುಯುತ್ತಿರುವ ಬಾರಿ ಮಳೆಯಲ್ಲಿ ಇಂದು ಸಂಜೆ 5:30 ರ ಸಮಯದಲ್ಲಿ ವಿದ್ಯುತ್ ಕಂಬದಿಂದ ತಂತಿ ತುಂಡಾಗಿ

ನೆಲಕ್ಕೆ ಬಿದ್ದ ಘಟನೆ ಜರುಗಿತ್ತು ಇದೇ ಸಂದರ್ಭ ಬಳ್ಳೂರು ಗ್ರಾಮದ ಗಂಗಮ್ಮ (67)ವರ್ಷದ ಮಹಿಳೆ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಜಾನುವಾರು ನೊಂದಿಗೆ ತೆರಳುವ ಸಂದರ್ಭ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಜಾನುವಾರು ಮತ್ತು ಮಹಿಳೆ ಗಂಗಮ್ಮ ತುಳಿದ ಹಿನ್ನೆಲೆಯಲ್ಲಿ ವಿದ್ಯುತ್ ಸ್ಪರ್ಶ ಗೊಂಡು ಸ್ಥಳದಲ್ಲಿ ಉರುಳಿ ಬಿದ್ದು

ಮೃತಪಟ್ಟಿರುವ ಘಟನೆ ನಡೆದಿದೆ.
ಇದೇ ಸಂದರ್ಭ ಸ್ಥಳೀಯ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ವಿದ್ಯುತ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಳೆದ ನಾಲ್ಕು ವರ್ಷದ ಹಿಂದೆ ಇದೇ ರೀತಿ ಓರ್ವ ವ್ಯಕ್ತಿ ಕಟ್ಟಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನಪ್ಪಿದ್ದರು. ಈ ವಿಷಯವಾಗಿ ಹಲವಾರು ಬಾರಿ ಸಂಬಂಧಪಟ್ಟಂತೆ ಹೊಸದಾದ ಲೈನ್ ಬದಲಾವಣೆ ಮಾಡಿ ಎಂದು ಸಾಕಷ್ಟು ಬಾರಿ ಇಲಾಖೆ ಮುಂದೆ ಧರಣಿ ನಡೆಸಿ ಎಚ್ಚರಿಕೆ ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಉದ್ದಟತನ ಇರುವುದೇ ಪುನಃ ಇಂತ ಘಟನೆ ನಡೆದಿದೆ.4 ವರ್ಷದ ಹಿಂದೆ ಮೃತ ಪಟ್ಟ ವ್ಯಕ್ತಿಯ ಸಂಬಂಧಿಕರಾದ ಗಂಗಮ್ಮ

ಸಾವನ್ನಪ್ಪಿರುವ ಘಟನೆ ಇಂದು ಮರುಕಳಿಸಿದೆ ಸಂಬಂಧಪಟ್ಟ ಚೆಸ್ಕಾಂ ಇಲಾಖೆಯವರೇ ಕಾರಣ ಎಂದು ಚೆಸ್ಕಾಂ ಇಲಾಖೆ ಅಧಿಕಾರಿ ಎ ಇ ಇ ಚಂದ್ರಮ್ಮ ಅವರನ್ನು ತರಾಟೆಗೆ ತೆಗೆದುಕೊಂಡು ಗೆರಾವು ಹಾಕಿ ಮೇಲಧಿಕಾರಿ ಆಗಮಿಸುವ ವರಗೂ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ರವಿಕಿರಣ್ ಪ್ರತಿಭಟನಾಕಾರರನ್ನು ಮನವೊಲಿಸಲು ಪಟ್ಟರು ಪ್ರತಿಭಟನಾಕಾರರು ಪಟ್ಟು ಬಿಡಲಿಲ್ಲ
ವಿದ್ಯುತ್ ಇಲಾಖೆಯ ನಿರ್ಲಕ್ಷದಿಂದ ಇಂತಹ ಘಟನೆ ಮರುಕಳಿಸಿದೆ ಇದಕ್ಕೆ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ ಒರಬೇಕು. ಹಾಗೂ

ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತ ಗಂಗಮ್ಮ ಕುಟುಂಬಕ್ಕೆ ನ್ಯಾಯ ಒದಗಿಸುವವರೆಗೂ ಶವ ಮೇಲೆತ್ತಲು ಬಿಡುವುದಿಲ್ಲ .
ಭೋಗ ಮಲ್ಲೇಶ್.
ಅಧ್ಯಕ್ಷರು. ಕರ್ನಾಟಕ ರಾಜ್ಯ ರೈತ ಸಂಘ ಬೇಲೂರು ತಾಲೂಕು.

LEAVE A REPLY

Please enter your comment!
Please enter your name here