” ಪಕ್ಕದ ರಾಜ್ಯದಲ್ಲಿ ಕಂಡು ಬಂದಿರುವ ಹಕ್ಕಿ ಜ್ವರ ಜಿಲ್ಲೆಗೂ ವ್ಯಾಪಿಸದಂತೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಕಟ್ಟು ನಿಟ್ಟಿನ ಸೂಚನೆ “

0

ಹಾಸನ ಜ.11(ಹಾಸನ್_ನ್ಯೂಸ್ ) !,
        ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಕೋಳಿ ಶೀತ ಜ್ವರ ನಿಯಂತ್ರಣ ಸಮಿತಿ ಸಭೆನಲ್ಲಿ ಮಾತನಾಡಿದ ಅವರು ಎಲ್ಲಾ ತಾಲ್ಲೂಕಗಳ ಮೆಲ್ವೀಚಾರಣೆಗೆ ತಂಡಗಳನ್ನು ರಚಿಸಿ ನಿಗಾವಹಿಸಿ  ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
    ಜಿಲ್ಲೆಯಲ್ಲಿ ಹತ್ತು ಸಾವಿರ ಅಧಿಕ ಕೋಳಿ ಸಾಕಾಣಿಕಾ ಕೇಂದ್ರಗಳು ಪಾಲ್ಟ್ರಿಗಳು ಇದ್ದು ಎಲ್ಲಾ ಕಡೆಗಳಿಗೆ ಅಧಿಕಾರಿಗಳ  ತಂಡ ಪರಿಶೀಲಿಸಬೇಕು ಹಾಗೂ ಅದರ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಹಕ್ಕಿ ಜ್ವರ ಮತ್ತು ಅದರ ನಿಯಂತ್ರಣ ಕ್ರಮದ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
    ಮಾಸಿಕ ಕೋಳಿ ಶೀತ ಜ್ವರ ಸರ್ವೇಕ್ಷಣೆ ಕಾರ್ಯದ ಜೊತೆಗೆ ಪ್ರತಿವಾರ ಕುಕ್ಕುಟ ಕ್ಷೇತ್ರಗಳಿಂದ ಹೆಚ್ಚುವರಿಯಾಗಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಮಾದರಿಗಳನ್ನು ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಅರಣ್ಯ ಇಲಾಖೆ ವತಿಯಿಂದ  ಪಕ್ಷಿಧಾಮ, ವಲಸೆ ಹಕ್ಕಿಗಳು ಹೆಚ್ಚಾಗಿ ಕಂಡು ಬರುವಂತಹ ಸ್ಥಳಗಳ, ನೀರು ಸಂಗ್ರಹಣಾಗಾರ(ಕೆರೆ, ಕುಮಟೆ, ಹೊಂಡ,ಇತ್ಯಾದಿ) ಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ಸಂಬಂಧಪಟ್ಟ ಅರಣ್ಯಾಧಿಕಾರಿಗಳೊಂದಿಗೆ ಪಕ್ಷಿಗಳ ಅಸ್ವಾಭವಿಕ ಮರಣದ ಬಗ್ಗೆ ನಿಗಾವಹಿಸಬೇಕು ಹಾಗೂ ಆ ಪ್ರದೇಶಗಳ ಕೆರೆ ಕೊಳ್ಳಗಳ ನೀರಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಬೇಕು ಹಾಗೂ ತಾಲ್ಲೂಕುವಾರು, ಹೋಬಳಿ ಗ್ರಾಮವಾರು ವಿವರಗಳನ್ನು ಶ್ರೀಘ್ರವೇ ನೀಡಬೇಕು ಎಂದು  ಜಿಲ್ಲಾಧಿಕಾರಿ ಹೇಳಿದರು.
   ವ್ಯಾಪ್ತಿಗೆ ಬರುವ ಎಲ್ಲಾ ಕುಕ್ಕುಟ ಕ್ಷೇತ್ರಗಳಲ್ಲಿ ಫಕ್ಷಿಧಾಮ ಹಾಗೂ ನೀರು ಸಂಗ್ರಹಣಾ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು, ಕೋಳಿಗಳು, ಹಿತ್ತಲ ಕೋಳಿಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳು ಯಾವುದೇ ಮರಣ ಹೊಂದಿದ್ದಲ್ಲಿ ಅಂತಹ ರೋಗ ಲಕ್ಷಣ ಕಂಡುಬಂದಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಕೋಳಿ ಶೀತ ಜ್ವರ ಸಂಭವನೀಯತೆಯನ್ನು ಪರಿಗಣಿಸಿ ಸಂಬಂಧಪಟ್ಟ ಪ್ರಯೋಗಾಲಯಕ್ಕೆ ರೋಗ ವಿಶ್ಲೇಷಣೆ ನಡೆಸುವ ಬಗ್ಗೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
     ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಈಗಾಗಲೇ ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತೆ ಕೈಗೊಂಡಿದೆ, ಕೋಳಿ ಮಾಂಸವನ್ನು ಬೇಯಿಸಿ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ ಇದರಿಂದ ಹಕ್ಕಿ ಜ್ವರ ಹರಡುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿದರು.
    ಎಲ್ಲಾ ಕೋಳಿಫಾರಂಗಳಲ್ಲಿ ಮುಂಜಾಗೃತಾ ಕ್ರಮವಾಗಿ ಒಳ ಹಾಗೂ ಹೊರ ಆವರಣವನ್ನು ರಾಸಾಯನಿಕಗಳಿಂದ ಸ್ವಚ್ಚಗೋಳಿಸಿ ಹಾಗೂ ಜೈವಿಕ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
    ಒಂದು ವೇಳೆ ಜಿಲ್ಲೆಯಲ್ಲಿ ಯಾವುದಾದರೂ ಪ್ರದೇಶದಲ್ಲಿ ಹಕ್ಕಿ ಜ್ವರ ಕಂಡು ಬಂದರು ಯಾವ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ಹಾಗೂ ಕೋಳಿಗಳ ಸಾಮೂಹಿಕ ಹತ್ಯೆ ನಂತರ ಹೇಗೆ ಗುಂಡಿ ತೆಗೆದು ಮುಚ್ಚಬೇಕು ಎಂಬುದನ್ನು ಎಲ್ಲಾ ತಂಡಗಳಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
      ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ|| ರಮೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ 14785 ಪಾಲ್ಟ್ರಿಗಳಿದ್ದು, ಪ್ರತಿ ವಾರ 10 ಲಕ್ಷ ಕೋಳಿ ಮರಿಗಳು ಆಗಮಿಸುತ್ತಿವೆ  ಜಿಲ್ಲೆಗೆ ಬೇಕಾದ ಕೋಳಿ ಮಾಂಸ ಸ್ಥಳೀಯವಾಗಿಯೇ ಉತ್ಫಾಧನೆಯಾಗುತ್ತಿದ್ದು ಕೋಳಿ ಬೇರೆ ಜಿಲ್ಲೆಗಳಿಗೆ ರವಾನೆಯಾಗುತ್ತಿದೆ ಎಂದರು.
     ಹಕ್ಕಿ ಜ್ವರದ ಹೆಚ್5 ಎಚ್1  ರೀತಿಯ 144 ರೂಪಾಂತರಗಳನ್ನು ಈಗಾಗಲೇ ಗುರುತಿಸಲಾಗಿದೆ 1878 ರಿಂದಲ್ಲೇ  ಈ ಖಾಯಿಲೆ ಇದ್ದು ಸಾಕಷ್ಟು  ಜಿಲ್ಲೆಯಲ್ಲಿ ಹಾಲಿ ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದರು.
    ಸಭೆಯಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಿ. ಭಾರತಿ, ಹಿಮ್ಸ್ ಪ್ರೋಫೆಸರ್ ಆಫ್ ಮೈಕ್ರೋ ಬಯಾಲಜಿ ಡಾ. ಶ್ರೀಧರ್, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಾದ ಡಾ|| ಸತೀಶ್ ಪಶು ವೈದ್ಯಕೀಯ ಕಾಲೇಜಿನ ಪ್ರತಿನಿಧಿ ,ಕುಕುಟೋದ್ಯಮದ ಸಂಘಟನೆಗಳ ಪ್ರತಿನಿದಿಗಳುü ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here