ಕಳೆದ 11 ವರ್ಷಗಳಿಂದ ಬರಿದಾಗಿದ್ದ ಹಾಸನದ ಎರಡನೇ ದೊಡ್ಡ ಕೆರೆ ತುಂಬಿದೆ

0

ಹಾಸನ / ಚನ್ನರಾಯಪಟ್ಟಣ : ಇಂದು ಹಾಸನ ಜಿಲ್ಲೆಯ ಅತಿದೊಡ್ಡ ಎರಡನೇ ಕೆರೆ ಅಣತಿ ಕೆರೆಗೆ, ಕೋಡಿಹಳ್ಳಿ ಭಾಗದಲ್ಲಿರುವ ಕೆರೆಕೋಡಿಗೆ ಬಾಗಿನ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು(ಶ್ರವಣಬೆಳಗೊಳ/ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರ) ಸಿ.ಎನ್.ಬಾಲಕೃಷ್ಣ ರವರು ಹಾಗೂ ಗ್ರಾಮಸ್ಥರು ಭಾಗವಹಿಸಿ, ಬಾಗಿನ ಅರ್ಪಿಸಲಾಯಿತು.
ಸುಮಾರು 900ಎಕರೆ ಪ್ರದೇಶದಲ್ಲಿರುವ ಕೆರೆಯು ಕಳೆದ 11 ವರ್ಷಗಳಿಂದ  ಬರಿದಾಗಿತ್ತು, ಹೇಮಾವತಿ ಏತನೀರಾವರಿ ಮತ್ತು ಈ ಬಾರಿ ಉತ್ತಮ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಹರಿದಿದೆ, ಊರಿನ ಗ್ರಾಮಸ್ಥರು, ಸುತ್ತಮುತ್ತಲಿನ ಹಳ್ಳಿಗಳ ಹಿರಿಯರು ಸಂತೋಷದಿಂದ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
#CNBalakrishna #channarayapattana

LEAVE A REPLY

Please enter your comment!
Please enter your name here