ಹಾಸನ/ಚನ್ನರಾಯಪಟ್ಟಣ : ಏಪ್ರಿಲ್ 5 ಮಂಗಳವಾರ ಬೆಳಿಗ್ಗೆ 9.30ಕ್ಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಖಾಸಗಿ ನರ್ಸಿಂಗ್ ಕಾಲೇಜು ಬಳಿ ಉಪನ್ಯಾಸಕಿ ಒಬ್ಬರನ್ನು ನಾಲ್ವರು ಯುವಕರು ಚುಡಾಯಿಸಿದ್ದಾರೆ. ಆಗ ಅಲ್ಲಿದ್ದ ಪ್ರಾಂಶುಪಾಲ ಅರುಣ್ ಕುಮಾರ್, ಈ ಬಗ್ಗೆ ಯುವಕರನ್ನು ಪ್ರಶ್ನಿಸಿದ್ದಾರೆ. ” ಇದುನ್ನೆಲ್ಲ ಕೇಳಕ್ ನೀನ್ ಯಾರ್ಲ ” ಎಂದು ಧಮಕಿ ಹಾಕಿದ ಯುವಕರು, ಕೈಯಿಂದ ಗುದ್ದಿದ್ದಲ್ಲದೇ ಅವರ ಕಾರಿನ ಗಾಜನ್ನು ಒಡೆದಿದ್ದಾರೆ
ಈ ಸಂಬಂಧ ಪೊಲೀಸರು ಒರ್ವನ ವಶಕ್ಕೆ ಪಡೆದಿದ್ದಾರೆ. ಮೂವರು ತಲೆಮರೆಸಿಕೊಂಡಿರುವರ ಇನ್‌ಸ್ಪೆಕ್ಟರ್ ಜಿ.ಕೆ. ಸುಬ್ರಹ್ಮಣ್ಯ ಮತ್ತು ತಂಡ ಬಲೆ ಬೀಸಿದೆ
ಘಟನೆಯಲ್ಲಿ ಗಾಯಗೊಂಡಿರುವ ಪ್ರಾಂಶುಪಾಲ ಅರುಣ್ ಕುಮಾರ್, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
* ನಮಗೆ ಶಿಕ್ಷಣ ಕೊಡುವ ಗುರುಗಳ ಗೌರವಿಸೋಣ , ಇದು ಅವರ ಹಕ್ಕು ಗುರುವಿನ ಅರಿವು ನಮ್ಮ ನಾಳಿನ ಸುಂದರ ಜವಾಬ್ದಾರಿಯುತ ಭವಿಷ್ಯ *