ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ

0

ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ

ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿ ಕ್ರೌರ್ಯ , 55 ಜನರ(45ಪುರುಷರು , 10ಮಹಿಳೆಯರು) ನ್ನು ಒಂದೆಡೆ ಬಂಧನದಲ್ಲಿಟ್ಟಿದ್ದ ಸಾಹುಕಾರ , ಅಕ್ರಮ ಬಂಧನದಲ್ಲಿಟ್ಟು ಬಲವಂತದ ದುಡಿಮೆ ಮಾಡಿಸಿಕೊಳ್ಳುತ್ತಿದ್ದ ಆರೋಪದ ಮೇಲೆ ಮುನೀಶ್ ಎಂಬಾತನ ಬಂಧಿಸಲು ಕರೆ ನೀಡಿದ್ದಾರೆ , ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅಣ್ಣೇನಹಳ್ಳಿ ಗ್ರಾಮದಲ್ಲಿ ಘಟನೆ , ಏಪ್ರಿಲ್ 5ರ ಬೆಳಗ್ಗೆ ದಾಳಿ ಮಾಡಿದ ಅರಸೀಕೆರೆ ಗ್ರಾಮಾಂತರ ಪೊಲೀಸರು , ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಸಿಬ್ಬಂದಿ ಗಳು ಕೂಡಿ 55 ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಬಂಧಮುಕ್ತಗೊಳಿಸಿದ ಪೊಲೀಸರು

ಅರಸೀಕೆರೆ ಗ್ರಾಮಾಂತರ ಸಿಪಿಐ ವಸಂತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮೊದಲು ನಡೆದಿದ್ದು , ನೀವು ಕಾಣುತ್ತಿರು ಭಾವ ಚಿತ್ರಗಳ ಎರಡು ಪ್ರತ್ಯೇಕ ಶೆಡ್‌ಗಳಲ್ಲಿ ಬಂಧಿಸಿಟ್ಟಿದ್ದ ಮುನೇಶ್

ಈ ಮುನೇಶ್ ಇವರನ್ನು ಇಟ್ಟುಕೊಂಡು ಮಾಡಿಸುತ್ತಿದ್ದ ಕೆಲಸ ಏನು :
ಚಿಕ್ಕಮಗಳೂರು, ದಾವಣೆಗೆರೆ, ಹುಬ್ಬಳ್ಳಿ, ಮಧುಗಿರಿ, ಪಾವಗಡ, ಮಂಡ್ಯ, ತಮಿಳುನಾಡು ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಕಾರ್ಮಿಕ ರನ್ನು ಶುಂಠಿ ಕೆಲಸ ,  ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮುನೇಶ್ , ಕೆಲಸ ಮುಗಿದ ಕೂಡಲೇ ಶೆಡ್‌ನಲ್ಲಿ ಎಲ್ಲರನ್ನೂ ಕೂಡಿ ಹಾಕುತ್ತಿದ್ದನಂತೆ , ಅವರಿಗೆ ಹೊರ ಹೋಗಲು ಬಿಡುತ್ತಿರಲಿಲ್ಲ.ಪಾಪ ಕೂಲಿ ಅರಸಿ ಹೊರ ಜಿಲ್ಲೆಗಳಿಂದ ಬಂದಿದ್ದ ಕಾರ್ಮಿಕರು

ಅವರನ್ನು ಅಕ್ರಮವಾಗಿ ದುಡಿಸಿಕೊಳ್ಳಲು ಮುನೇಶ್ ಜೊತೆಗೆ ಕುಮಾರ, ಲಕ್ಷ್ಮೀ, ಮನು ಎಂಬುವವರೂ ಕೈ ಜೋಡಿಸಿದ್ದು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ

ಹಾಸನ SP ಶ್ರೀನಿವಾಸ್‌ಗೌಡ ಸೂಚನೆ ಮೇರೆಗೆ ದಾಳಿ ನಡೆಸಿದ DYSP ಅಶೋಕ್, ವಸಂತ್‌ಕುಮಾರ್ (ಸರ್ಕಲ್ ಇನ್ಸ್ಪೆಕ್ಟರ್ ), ಲಕ್ಷ್ಮಣ್ (SI) ನೇತೃತ್ವದ ತಂಡ ದಾಳಿ ಕಾರ್ಯಾಚರಣೆಯಲ್ಲಿ ಸಹಕರಿಸಿದ ಬೆಳಗುಂಬ ಗ್ರಾಮ ಪಂಚಾಯಿತಿ ಗ್ರಾಮಸ್ಥರು

” ಕಾರ್ಮಿಕರನ್ನು ಶುಂಠಿ ಕೆಲಸಕ್ಕೆಂದು ಕರೆ ತಂದು ಬೇರೆ ಬೇರೆ ಕೆಲಸಕ್ಕೆ ದುಡಿಸಿಕೊಳ್ಳಲಾಗಿದೆ. ಕೆಲವರು ಎರಡು ವರ್ಷ, ಕೆಲವರು ಆರು ತಿಂಗಳು, ಇನ್ನೂ ಕೆಲವರು ವಾರಗಳಿಂದ ಬಂಧಿಯಾಗಿದ್ದರು. ಹಲವರು ಎಷ್ಟೋ ದಿನಗಳಿಂದ ಸ್ನಾನವನ್ನೂ ಮಾಡದೆ, ಕೊಳಕು ಬಟ್ಟೆಯಲ್ಲೇ ಉಸಿರುಗಟ್ಟುವ ವಾತಾವರಣದಲ್ಲಿ ದಿನದೂಡುತ್ತಿದ್ದರು ” – ನಂದಿನಿ ( additional HASSAN SP)

ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಧನ್ಯವಾದಗಳು ಹೇಳಲೇ ಬೇಕು

crimedairyhassan stopserfdom

LEAVE A REPLY

Please enter your comment!
Please enter your name here