ಹಾಸನ / ಚನ್ನರಾಯಪಟ್ಟಣ : ಸ್ಪುರದ್ರೂಪಿ ಯುವಕನನ್ನು ಮದುವೆಯಾದ 22 ವರ್ಷದ ಸುಂದರ ಯುವತಿ ಮದುವೆಯಾದ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಮುದ್ರವಳ್ಳಿಯಲ್ಲಿ ನಡೆದಿದೆ., ನವವಿವಾಹಿತೆ ರೋಹಿಣಿ
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ . ಹಾಸನ ಜಿಲ್ಲೆಯ ಹೊಳೆನರಸೀಪುರದ ಕಲ್ಲಹಳ್ಳಿಯ ಸುಮಂತ್ ಎಂಬಾತನನ್ನು ಮದುವೆಯಾಗಿದ್ದ ರೋಹಿಣಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು
ಪೋಷಕರಿಗೆ ವರದಕ್ಷಿಣೆ ಕಿರುಕುಳದ ಬಗ್ಗೆ ಮೆಸೇಜ್ ಮಾಡಿದ್ದಳು ಎನ್ನಲಾಗಿದೆ. , ಪೋಷಕರು ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ., ಈ ಬಗ್ಗೆ ತನಿಖೆ ನಂತರವಷ್ಟೇ ಸಂಪೂರ್ಣ ಚಿತ್ರಣ ಸಿಗಲಿದೆ .