ಅಲೆಮಾರಿ ಮತ್ತು ಅರೆ-ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಲು ಅಗ್ರಹ – ಅರಸೀಕೆರೆ ಆರ್ ರಾಜು

2

ಅಲೆಮಾರಿ ಮತ್ತು ಅರೆ-ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಲು ಅಗ್ರಹ

ಹಿಂದುಳಿದ ಅಲೆಮಾರಿ ಮತ್ತು ಅರೆ-ಅಲೆಮಾರಿಯಲ್ಲಿ ಸಮುದಾಯಕ್ಕೆ ಸೇರುವ ದೊಂಬಿದಾಸ, ಬೈರಾಗಿ (ಬಾವ), ಬಾಲಸಂತೋಷಿ – ಜೋಷಿ, ಬಾಜಿಗರ್, ಭರಡಿ, ಬುಡ್ ಬುಡಕಿ-ಜೋಷಿ-ಗೊಂಧಳಿ, ಚಾರ, ಚಿತ್ರಕಥಿ-ಜೋಷಿ, ಧೋಲಿ, ಡವೇರಿ, ದೊಂಬರಿ, ಘಿಸಾಡಿ, ಗಾರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ-ಜೋಷಿ-ಗೊಂದಳಿ,ಪುಲ್ ಮಾಲಿ,ನಾಥಪಂಥಿ,ಡೌರಿಗೋಸಾವಿ, ನಿರ್ಶಿಕಾರಿ, ಪಾಂಗ್ಯುಯಲ್, ಜೋಷಿ (ಸಾದ ಜೋಷಿ, ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ್, ವಾಡಿ, ವಾಗ್ರಿ, ವಿರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತ, ಸರೋಡಿ, ದುರ್ಗ-ಮುರ್ಗ (ಬುರ್ ಬುರ್ ಚ), ಹಾವ್ ಗಾರ್ (ಹಾವಾಡಿಗಾರ್), ಪಿಚಗುಂಟಲ, ಮಸಣಿಯ ಯೋಗಿ, (ಬೆಸ್ತರ್) ಬುಂಡಬೆಸ್ತ, ಕಟಬು, ದರ್ವೆಶ್, ಕಾಶಿ ಕಪಾಡಿ, ಬೈಲಪತರ್ ಒಟ್ಟು 46 ಸಮುದಾಯಗಳ
ಹಿತದೃಷ್ಟಿಯಿಂದ, ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಸರ್ಕಾರವು ನಿಗಮ ಮಂಡಳಿಯನ್ನು ಸ್ಥಾಪಿಸಿ ಅದಕ್ಕೆ ವಸಂತನಗರದಲ್ಲಿ ಸುಸರ್ಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟು, ಉತ್ತಮ ಜನಸ್ನೇಹಿಯಾದ ಕೆ ರವೀಂದ್ರ ಶೆಟ್ಟಿಯವರನ್ನು ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ, ಆದರೆ ಕರ್ನಾಟಕ ಸರ್ಕಾರ 2020-2021 ನೇ ಸಾಲಿನಲ್ಲಿ ನಿಗಮಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ.
ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿಯವರು ಕರ್ನಾಟಕ ಪ್ರತಿ ಜಿಲ್ಲಾ ಪ್ರವಾಸವನ್ನು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ, ಪ್ರತಿ ಭಾರಿ ಜಿಲ್ಲಾ ಪ್ರವಾಸ ಮಾಡುವ ಸಮಯದಲ್ಲಿ ಸಮುದಾಯದ ನಾಯಕರಿಂದ ಸರ್ಕಾರದಿಂದ ಹೆಚ್ಚಿನ ಸಹಕಾರ ನಿರೀಕ್ಷಿಸುತ್ತಿದ್ದು, ಸಮುದಾಯದ ಮುಖಂಡರು ಅಧ್ಯಕ್ಷರ ಬಳಿ ಅವಶ್ಯಕತೆಗಳ ಪಟ್ಟಿಯೇ ಇಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಹೆಚ್ಚಿನ ಅಲೆಮಾರಿ
ಮತ್ತು ಅರೆ ಅಲೆಮಾರಿ ಸಮುದಾಯದ ಶೇ95% ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತ ಕುಟುಂಬಗಳಾಗಿದ್ದು, ಉತ್ತಮ ಗುಣಮಟ್ಟ ಶಿಕ್ಷಣ, ಅರೋಗ್ಯ, ವಸತಿ ಸೌಲಭ್ಯ, ಸಿಮೆಂಟ್ ರಸ್ತೆ ಮತ್ತು ಉತ್ತಮ ಚರಂಡಿಗೆ ಸೌಲಭ್ಯಗಳನ್ನು ದೊರೆಯುವುದು ಕನಸಾಗಿಯೇ ಉಳಿದಿದೆ, ಸಮುದಾಯದಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 300 ಕೋಟಿ ರೂಪಾಯಿಗಳನ್ನು ಮೀಸಲಿಡಲೇಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆಯ ರಾಜ್ಯಧ್ಯಕ್ಷರಾದ ಆರ್ ರಾಜು ರವರು ಅಗ್ರಹಿಸಿದ್ದಾರೆ.

2 COMMENTS

  1. ನಿಮ್ಮ ಜವಾಬ್ದಾರಿ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿರುವಿರಿ ರಾಜು ಆರ್ ಸರ್ ಶುಭಾಶಯಗಳು

LEAVE A REPLY

Please enter your comment!
Please enter your name here