ಅಪ್ಪಟ ಮಲೆನಾಡು ಬಯಲುಸೀಮೆಯ ಹಾಸನ ಮಣ್ಣಿನ ಸೊಗಡಿನ ಹೆಮ್ಮೆಯ ಹೆಣ್ಣುಮಗಳು ಈ ವೈಡೂರ್ಯ

0

ಹೆಸರು “ವೈಢೂರ್ಯ”………‌.

ಅಪ್ಪಟ ಮಲೆನಾಡು ಬಯಲುಸೀಮೆಯ ಹಾಸನ ಮಣ್ಣಿನ ಸೊಗಡಿನ ಹೆಮ್ಮೆಯ ಹೆಣ್ಣುಮಗಳು…………

ವಿಚಾರ ಇರುವುದೇ ಇಲ್ಲಿ ಸಾಕಷ್ಟು ವೈವಿಧ್ಯಮಯ ರಂಗಗಳಿಗೆ ಯುವಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ಈ ಗಟ್ಟಿಭೂಮಿಯಿಂದ ಮತ್ತೊಂದು ಮಿನುಗುವ ನಕ್ಷತ್ರ ಬೆಳ್ಳಿತೆರೆಗೆ ಅಡಿಯಿಟ್ಟು ಭಾನಿನನತ್ತ ತನ್ನ ಪಥದಲ್ಲಿ ಯಶಸ್ವಿಯಾಗಿ ಮುನ್ನುಡಿ ಬರೆಯುತ್ತಿದೆ………..

ಹೌದು ಇಷ್ಟೆಲ್ಲಾ ಪೀಠಿಕೆ ಬೇರೆ ಯಾರ ಬಗ್ಗೆಯೂ ಅಲ್ಲ ಚಿತ್ರರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಬೇಕೆಂಬ ಮಹಾದಾಸೆಯಿಂದ ಚಿಕ್ಕವಯಸ್ಸಿನಲ್ಲೇ ರಂಗ ತಾಲೀಮು ಮಾಡಿಕೊಂಡು ಯಶಸ್ವಿಯಾಗಿ ಮೊದಲ ಹೆಜ್ಜೆ ಇಡುತ್ತಿರುವ ನಮ್ಮ ನಿಮ್ಮೆಲ್ಲರ ಪ್ರೀತಿಯ ಹಾಸನದ ಬೆಡಗಿ “ವೈಢೂರ್ಯ” …………..‌..

ತನ್ನ ಸೌಂದರ್ಯ ಅದಕ್ಕಿಂತ ಮಿಗಿಲಾಗಿ ತನ್ನ ಅದ್ಭುತ ಕಂಠಸಿರಿ ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ದೇಹಭಾಷೆ ಅತ್ಯದ್ಭುತ ಮಾತುಗಾರಿಕೆ ಕೌಶಲ್ಯ ಎಲ್ಲರೊಂದಿಗೆ ನಗುನಗುತ್ತಲೇ ಬೆರೆತು ಒಡನಾಟ ಕಾಪಾಡಿಕೊಂಡು ಬಂದಿರುವ “ವೈಢೂರ್ಯ” ಖಂಡಿತವಾಗಿಯೂ ಚಿತ್ರರಂಗದಲ್ಲಿ ನೆಲೆಯೂರಲು ಯೋಗ್ಯವಾದ ಎಲ್ಲಾ ಸಿದ್ಧತೆಗಳನ್ನು ಚಾಚು ತಪ್ಪದೆ ಅಚ್ಚುಕಟ್ಟಾಗಿ ಮಾಡಿಕೊಂಡೇ ಬಂದಿರುವ ವರ್ತಮಾನವಿದೆ………..

ಅಚಾನಕ್ಕಾಗಿ ಬಂದು ತನ್ನ ಪ್ರತಿಭೆ ಅನಾವರಣಗೊಳಿಸುತ್ತಿಲ್ಲ ಈ ಹುಡುಗಿ ಅತ್ಯಂತ ಕಠಿಣ ಹಾದಿ ಸವೆಸಿ ಅಭಿನಯದ ಚಾತುರ್ಯ ಬೆಳೆಸಿಕೊಂಡು ಅಪಾರವಾದ ಪೂರ್ವಸಿದ್ಧತೆಗಳನ್ನು ಮಾಡಿಕೊಂಡೇ ಚಿತ್ರರಂಗದ ಸಮುದ್ರಕ್ಕೆ ದಾಂಗುಡಿಯಿಟ್ಟಿರುವುದು ಈಗ ಗುಟ್ಟಾಗಿ ಉಳಿದಿಲ್ಲ………..

ಪ್ರಥಮ ಪ್ರಯತ್ನದಲ್ಲೇ ಅವಿಸ್ಮರಣೀಯ ಅಭಿನಯ ನೀಡಿರುವ ತೆಲುಗು ಚಿತ್ರರಂಗದ “ರುದ್ರಾಕ್ಷಪುರಂ” ಚಿತ್ರ ಟಾಲಿವುಡ್ ಅಂಗಳದಲ್ಲಿ ಈಗ ಭರ್ಜರಿ ಸದ್ದು ಮಾಡಲು ಸಿದ್ಧತೆ ನೆಡೆಸಿದೆ ಮತ್ತೆಂದೂ ಹಿಂತಿರುಗಿ ನೋಡದೆ ಕನ್ನಡ ಚಿತ್ರರಂಗದಲ್ಲೂ ಭದ್ರವಾಗಿ ನೆಲೆಯೂರಲು ಯೋಗ್ಯವಾದ ಕಥೆಗಳು ಈಗಾಗಲೇ ಸಿದ್ದವಾಗಿದ್ದು ಆದಷ್ಟು ಬೇಗ ಗಂಧದಗುಡಿ ಚಂದನವನದಲ್ಲೂ “ವೈಢೂರ್ಯ” ತನ್ನ ಹೊಳಪನ್ನು ತೋರಿಸಿ ವಜ್ರದಂತೆ ಮಿನುಗಲಿ ಎಂದು ತಾಯಿ ಹಾಸನಾಂಭೆಯಲ್ಲಿ ಪ್ರಾರ್ಥಿಸೋಣ……………

ಶ್ರೀಧರ್ ಮಾಡಾಳು……..🌾🌾🌾

LEAVE A REPLY

Please enter your comment!
Please enter your name here