ವಾಕಿಂಗ್ ಯಾಕಿಷ್ಟು ಆರೋಗ್ಯಕರ ಅಭ್ಯಾಸ? ದಿನಕ್ಕೆ ಎಷ್ಟು ಹೆಜ್ಜೆ ನಡೆಯುವುದು ಉಪಯೋಗಕಾರಿ?

0

ನಡುಗೆ ಅಥವಾ ವಾಕಿಂಗ್ ಎಲ್ಲಾ ವಯಸ್ಸಿನ ಜನರಿಗೂ ಒಂದು ಅತ್ಯುತ್ತಮ ಮಾರ್ಗ ಹಾಗೆ ಇದು ಬಹಳ ಸುಲಭವಾದ ವ್ಯಾಯಾಮ ನಿಮ್ಮ ವಾಹನಗಳನ್ನು ಪಕ್ಕಕ್ಕಿಟ್ಟು ಹತ್ತಿರ ಇರುವ ಜಾಗಕ್ಕೆ ನಡೆದುಕೊಂಡು ಹೋಗಿ ಆಗ ನಿಮ್ಮ ಆರೋಗ್ಯಕ್ಕೆ ಬಹಳ ಉಪಯೋಗವಾಗುತ್ತದೆ.ವಾಕಿಂಗ್ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳು ಇವೆ

*ನಿಮ್ಮ ಹೃದಯಕ್ಕೆ ತಗಲುವ ರೋಗವನ್ನು ತಡೆಯುತ್ತದೆ.
*ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
*ನೀವು ಯಾವುದೇ ರೋಗದಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಅಭ್ಯಾಸ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.
*ನಿಮ್ಮ ಮೂಳೆಯ ಆರೋಗ್ಯ ಉತ್ತಮಗೊಳ್ಳುತ್ತದೆ.
*ನೀವು ಸದಾ ಯೌವ್ವನವನ್ನು ಅನುಭವಿಸುತ್ತೀರಿ.
*ನಿಮ್ಮ ತೂಕ ಇಳಿಸೋಕೆ ವಾಕಿಂಗ್ ಅಭ್ಯಾಸ ತುಂಬಾ ಸಹಾಯಕಾರಿ.

ಆದರೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು?
ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ನಡುಗೆ ಬಹಳ ಒಳ್ಳೆಯದು. ನೀವು ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆದರೆ ನಿಮ್ಮ ಆರೋಗ್ಯ ಸುಧಾರಣೆಗೆ ಬಹಳ ಸಹಾಯ ಮಾಡುತ್ತದೆ.ನಿಮ್ಮ ಮೊಬೈಲ್ ಗಳಲ್ಲಿ ನೀವು ಎಷ್ಟು ನಡೆದಿದ್ದೀರಿ ಎಂದು ಟ್ರ್ಯಾಕ್ ಮಾಡುವ ಆ್ಯಪ್ಗಳನ್ನು ಉಪಯೋಗಿಸಿ ನಿಮ್ಮ ವಾಕಿಂಗ್ ಅಭ್ಯಾಸವನ್ನು ಇನ್ನೂ ಅತ್ಯುತ್ತಮಗೊಳಿಸಿ.

ಮತ್ತೇಕೆ ಚಿಂತೆ ನಾಳೆಯಿಂದಲೇ ನಿಮ್ಮ ವಾಕಿಂಗ್ ಅಭ್ಯಾಸವನ್ನು ಪ್ರಾರಂಭಿಸಿ. ನಿಮ್ಮ ಜೀವನವನ್ನು ಇನ್ನಷ್ಟು ಉಲ್ಲಾಸದಿಂದ ತುಂಬಿರುವ ಹಾಗೆ ಮಾಡಿಕೊಳ್ಳಿ.

-ತನ್ವಿ. ಬಿ

LEAVE A REPLY

Please enter your comment!
Please enter your name here