” 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷದಿಂದ 59 ವರ್ಷ ಅಸ್ವಸ್ಥತೆ ಸಾರ್ವಜನಿಕರು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಂದ ಉಚಿತವಾಗಿ ಲಸಿಕೆಯನ್ನು ಪಡೆದು ಕೋವಿಡ್ ಮುಕ್ತರಾಗಿ ” -ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್

0

ಹಾಸನ ಮಾ. (ಹಾಸನ್_ನ್ಯೂಸ್ !, 
ನಗರದ  ಜಿಲ್ಲಾ ಕ್ರೀಡಾಂಗಣದ ಮುಂಭಾಗ ಮಾ.16 ರಂದು  ನಡೆದ ಸಂತೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಆರೋಗ್ಯದ ಅರಿವು ಹಾಗೂ ಆರೋಗ್ಯ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಈ ಕಾರ್ಯಕ್ರಮವನ್ನು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಸತೀಶ್ ಕುಮಾರ್ ಉದ್ಘಾಟಿಸಿದರು.  
ಎಲ್ಲಾ ರಾಷ್ಟ್ರೀಯಾ ಆರೋಗ್ಯ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಅರಿವು  ಮಾಡಿಸುವುದು ಆರೋಗ್ಯ ವಸ್ತು  ಪ್ರದರ್ಶನದ ಮುಖ್ಯ ಉದ್ದೇಶವಾಗಿದ್ದು  ಈ ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡದವರಿಂದ ನಾಟಕ, ಕರೋನ ಗೀತೆ, ತಂಬಾಕು ನಿಷೇದ, ತಾಯಿಮಕ್ಕಳ ಆರೋಗ್ಯ ಬಗ್ಗೆ ಅರಿವು ಮೂಡಿಸಲಾಯಿತ್ತು.


ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುಳಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಯಾದ ಅರುಂಧತಿ,  ಜಿಲ್ಲಾ ತಂಬಾಕು ಕೋಶದ  ಮೇಲ್ವಿಚಾರಕಾರದ ಮಮತಾ ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here