ರೈತರಿಗೆ ಮಂಗಳೂರಿನಲ್ಲಿ ಬೃಹತ್ ಸಾವಯವ ಕೃಷಿ ಮೇಳ2021 ಭಾಗವಹಿಸಲು ಅವಕಾಶ ಇದೆ ನೋಡಿ : #ರೈತಮಿತ್ರಹಾಸನ್ನ್ಯೂಸ್ 👇

0

ಹಾಸನ ಮಾ.18 (ಹಾಸನ್_ನ್ಯೂಸ್ !, ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಕರ್ನಾಟಕದ ವಿವಿಧ ಜಿಲ್ಲೆಗಳ ರೈತರ ವತಿಯಿಂದ  ಬೃಹತ್ ಸಾವಯವ ಮೇಳವನ್ನು ಮಾ. 20 ಮತ್ತು 21 ರಂದು  ಮಂಗಳೂರಿನ  ಶರವು ಮಹಾಗಣಪತಿ ದೇವಸ್ಥಾನದ ಬಳಿ ಇರುವ ಬಾಲಂಭಟ್ ಸಭಾಂಗಣದಲ್ಲಿ ಏರ್ಪಡಿಸಿದ್ದಾರೆ.

ಎರಡು ದಿನಗಳ ಈ ಮೇಳದಲ್ಲಿ ಶಿರಸಿ, ತಿಪಟೂರು, ಅರಸೀಕೆರೆ, ದಾವಣಗೆರೆ, ಹುಲಿಕೆರೆ, ಚಿತ್ರದುರ್ಗ, ಪಾವಗಡ, ಬಳ್ಳಾರಿ, ಹಾವೇರಿ, ಕಡೂರು, ಬಾಗಲಕೋಟೆ, ಚನ್ನರಾಯಪಟ್ಟಣದಿಂದ ಹಾಗೂ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಆಗಮಿಸುವ 25 ಸಾವಯವ ರೈತರು ತಾವೇ ಬೆಳೆಸಿದ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.

ಕೈತೋಟ ಕ್ರಾಂತಿ ಕಾರ್ಯಕ್ರಮದ ಅಂಗವಾಗಿ ವಿವಿಧ ತರಕಾರಿ ಇತ್ಯಾದಿ ಸಸಿಗಳ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದ್ದು  ಸಾವಯವ ಪಾನೀಯ ಮತ್ತು ತಿಂಡಿತಿನಿಸುಗಳೂ ಖರೀದಿಗೆ ಲಭ್ಯವಿರುತ್ತದೆ.

ಕೋವಿಡ್ 19 ಮಾರ್ಗ ಸೂಚಿಗಳನ್ವಯ  ಕಡ್ಡಾಯವಾಗಿ ಮಾಸ್ಕ್ ಧರಿಸುವುದರ  ಜೊತೆಗೆ ಸಾಮಾಜಿಕ ಅಂತರ ಕಾಪಾಡಲು  ಸಾವಯವ ಕೃಷಿ-ಗ್ರಾಹಕರ ಬಳಗದ   ಕಾರ್ಯದರ್ಶಿಗಳು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ 9448549130, 9448835606, 9880085845 ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here