ಸಕಲೇಶಪುರ :- ಪಟ್ಟಣದ ಹೆಚ್. ಡಿ. ಪಿ. ಎ ಸಭಾಂಗಣ ದಲ್ಲಿ ಇಂದು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರದ ಕೆ.ಏನ್ ಕ್ಯಾನಹಳ್ಳಿ ಸುಬ್ರಮಣ್ಯರ ಅಧ್ಯಕ್ಷತೆಯಲ್ಲಿ 23ನೇ ಮಾಸಿಕ ಕ ಸಭೆ ನೆಡೆಸಲಾಯಿತು.
ಸಭೆಯಲ್ಲಿ ,ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಕಾಲ ವಿಶ್ವ ಕಾಪಿ ಸಮ್ಮೇಳನದಲ್ಲಿ ಪಾಲ್ಗೊಂಡ ಬೆಳೆಗಾರರು ತಮ್ಮ ಅನುಭವ ಹಾಗೂ ತಿಳಿದುಕೊಂಡ ಮಾಹಿತಿ ಬಗ್ಗೆ ಚರ್ಚಿಸಲಾಯಿತು. ಬೆಳೆಗಾರರು ತಮ್ಮ ಜೀವಿತಾವಧಿಯಲ್ಲಿ ಈ ವಿಶ್ವ ಕಾಫಿ ಸಮ್ಮೇಳನವನ್ನು ನೋಡಿದ್ದಕ್ಕೆ ಹಾಗೂ ವಿವಿಧ ದೇಶದ ಕಾಫಿಗಳನ್ನು ಸವಿಯುವ ಮೂಲಕ ಕಾಫಿ ಮಾರುಕಟ್ಟೆಯಲ್ಲಿ ದರ ಹಾಗೂ ಉತ್ಪಾದನೆಗಳ ಬಗ್ಗೆ ತಿಳಿದುಕೊಂಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು.ಹಾಗೂ ಇದಕ್ಕೆ ಕಾರಣವಾದ ಹಾಸನ ಜಿಲ್ಲಾ ಬೆಳೆಗಾರರ ಸಂಘಕ್ಕೆ ಗೆ ಧನ್ಯವಾದ ಹೇಳಿದರು.ನಂತರ ಸಕಲೇಶಪುರದಲ್ಲಿ ನಡೆದ ಅಂತರಾಷ್ಟ್ರೀಯ ಕಾಫಿ ಸಮ್ಮೇಳನ ಅತ್ಯಂತ ಸಂಭ್ರಮ ಸಡಗರದಿಂದ ಯಶಸ್ವಿಯಾಗಿದ್ದಕ್ಕೆ ಎಲ್ಲಾ ಬೆಳಗಾರರು ಸಂಘದ ಪದಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದರು.
ನಂತರ,ಸಭೆಯಲ್ಲಿ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯ ಹಾಗೂ ತಿಂಗಳ ಖರ್ಚು ವೆಚ್ಚಗಳನ್ನು ಓದುವ ಮೂಲಕ ಸಭೆಯ ಒಪ್ಪಿಗೆ ಪಡೆಯಲಾಯಿತು. . ಹೊಂಕಾರವಳ್ಳಿ ಧರ್ಮಣ್ಣ ಗೇ ಡಾಕ್ಟರ್ ರೇಟ್ ಕೊಟ್ಟ ಬಗ್ಗೆ ಸಾಮಾಜಿಕ ಜಾಲತಾಣ ದಲ್ಲಿ ಚರ್ಚೆ ಆಗುತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿ, ಅಧ್ಯಕ್ಷರು ಅದಕ್ಕೆ ಕಾಫಿ ಗೌರವ ಡಾಕ್ಟರೇಟ್ ಎಂದು ಕೊಟ್ಟ ಬಗ್ಗೆ ಸಮಂಜಾಯಿಸಿಕೊಂಡರು.
ಜಂಟಿ ಕಾರ್ಯದರ್ಶಿ ಮೀರ್ ಆಲಿ ರಜ್ವೀನ್ ಮಾತನಾಡಿ ವಿಶ್ವ ಕಾಫಿ ಸಮ್ಮೇಳನದ ಎಲ್ಲಾ ಕಾರ್ಯಕ್ರಮದ ನೆನಪುಗಳ ಮೆಲುಕು ಹಾಕುವ ಮೂಲಕ ಸಭೆಯಲ್ಲಿದ್ದವರೆಲ್ಲರಿಗೂ ಮತ್ತೊಮ್ಮೆ ವಿಶ್ವಕಾಪಿ ಸಮ್ಮೇಳನದ ನೆನಪು ತಂದುಕೊಟ್ಟರು.ಒಟ್ಟಾರೆ ಎಲ್ಲಾ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿಯಿಂದ ಬಂದ ಬೆಳೆಗಾರರ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸದಸ್ಯರು 23ನೇ ವಾರ್ಷಿಕ ಸಭೆಯನ್ನು, ಚರ್ಚೆ ಮತ್ತು ಅಧ್ಯಕ್ಷರಿಂದ ಸಂಬಂಧಪಟ್ಟ ಗೊಂದಲಗಳಿಗೆ ಉತ್ತರವನ್ನು ಪಡೆಯುವ ಮೂಲಕ ಸಭೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಶಿಸ್ತು ಬದ್ಧವಾಗಿ ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರದ ಕೆ.ಏನ್ ಸುಬ್ರಮಣ್ಯ. ಉಪಾಧ್ಯಕ್ಷರಾದ ಎ ಎಸ್ ಪರಮೇಶ್, ಕಾರ್ಯದರ್ಶಿ ಎಂ ಬಿ ರಾಜೀವ್, ಖಜಾಂಚಿ ಎಂಎಸ್ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಮೀರ್ ಆಲಿ ರಜ್ವೀನ್ ,ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು .