ಸತ್ಯಭಾಮ ಕೆಲಸಕ್ಕೆ ಥಂಡಾ ಹೊಡೆದ ನಗರಸಭೆ ಕೆಲ ಸಿಬ್ಬಂದಿಗಳು. ಸಾರ್ವಜನಿಕರಿಂದ ಭಾರೀ ಪ್ರಶಂಸೆ. ಟವಲ್ ಕಟ್ಟಿಕೊಂಡು ಬಂದು ಬಾಗಿಲು ತೆರೆದ ಎಂಜಿನಿಯರ್. ಬೆಳ್ಳಂಬೆಳಗ್ಗೆ ಡಿಸಿ ಕಾರ್ಯಾಚರಣೆ. ನಗರಸಭೆಯ ಭ್ರಷ್ಟಾಚಾರಿಗಳ ಚಳಿ ಬಿಡಿಸಿದ ಡಿಸಿ. ಡಿಸಿಯ ನಡೆಗೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ. ಇಂಜಿನಿಯರ್ ಆನಂದ್ ಮನೆ ಮುಂದೆ ಡಿಸಿಯವರ ವಾಹನ ಸೇರಿ 4-5 ಸರ್ಕಾರಿ ವಾಹನಗಳು ಬೆಳಗ್ಗೆ 6.30 ವರೆಗೆ ಜಮಾಯಿಸಿದ್ದು ನೋಡಿ ಅಲ್ಲಿನ ನಿವಾಸಿಗಳು ದಿಘಾಂತರಾಗಿದ್ದು, ಸಂಪೂರ್ಣ ವಿಷಯ ತಿಳಿದ ನಂತರ, ಡಿಸಿ ಯ ನಡೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹಾಸನ: ಅನಧಿಕೃತವಾಗಿ ಗೈರು ಹಾಜರಾಗಿದ್ದ ಹಾಸನ ನಗರಸಭೆಯ ಇಂಜಿನಿಯರ್ ಆನಂದ್ ರವರನ್ನು ಖುದ್ದು ಅವರ ಮನೆಗೆ ತೆರಳಿ, ಜಿಲ್ಲಾಧಿಕಾರಿಗಳು ಕರ್ತವ್ಯಕ್ಕೆ ಕರೆ ತಂದಿರುವ ಘಟನೆ ಹಾಸನದಲ್ಲಿ ಮಂಗಳವಾರ ಬೆಳಗ್ಗೆ ನೆಡೆದಿದೆ.!!! ದೇಶದಲ್ಲೇ ಮೊದಲ ಘಟನೆ ಅಂದರೆ ತಪ್ಪಾಗಲಾರದು.
ಘಟನೆ ಹಿನ್ನಲೆ: ಹಾಸನ ನಗರಸಭೆಯ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಮಾನ್ಯ ಜಿಲ್ಲಾಧಿಕಾರಿ ಸತ್ಯಭಾಮ, ನಿರ್ದೇಶಕರಾದ ಬಿ.ಎ.ಜಗದೀಶ್, ಯೋಜನಾ ಹಾಸನ ನಗರಸಭೆಯ ಪೌರಾಯುಕ್ತರಾದ ಸತೀಶ್‌ರವರು ಜಿಲ್ಲಾನಗರಾಭಿವೃದ್ಧಿ ಕೋಶದ ಇಂಜಿನಿಯರ್ ಗಳು ಮತ್ತು ಹಾಸನ ನಗರಸಭೆಯ ಸಿಬ್ಬಂದಿ, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು, ಮಂಗಳವಾರ ಬೆಳಗ್ಗೆ 6 ಗಂಟೆಗೆ ವೀಕ್ಷಣೆ ಮಾಡಲು ಒಂದು ಕಡೆ ಸೇರಿದ್ದು, ಅಲ್ಲಿ ಕಾಮಗಾರಿ ಉಸ್ತುವಾರಿ ನೋಡಿಕೊಂಡಿದ್ದ ಇಂಜಿನಿಯರ್ ಗೈರು ಆಗಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತದೆ. ಅವರ ಬಗ್ಗೆ ನಗರಸಭೆ ಅಧಿಕಾರಿಗಳ ಬಗ್ಗೆ ಡಿಸಿಯವರು ವಿಚಾರಿಸಿದಾಗ, ಇಂಜಿನಿಯರ್ ಆನಂದ್ ನಾಲ್ಕು ದಿನಗಳಿಂದ ಕಛೇರಿಗೆ ಅನಧಿಕೃತ ಗೈರು ಹಾಜರಾಗಿರುವ ಬಗ್ಗೆ ಎಇಇ ರಂಗಸ್ವಾಮಿ ಮಾಹಿತಿ ನೀಡುತ್ತಾರೆ.
ಅಷ್ಟೇ ಡಿಸಿ ಯವರು, ವಾರ್ಡ ನಂ.4, ಉದಯಗಿರಿ ಬಡಾವಣೆಯಲ್ಲಿರುವ ಇಂಜಿನಿಯರ್ ಆನಂದ್ ಮನೆ ಮುಂದೆ ಬೆಳಗ್ಗೆ 6.30 ಗಂಟೆಗೆ ಡಿಸಿಯವರ ಕಾರು ಬಂದು ನಿಲ್ಲುತ್ತದೆ. ಆನಂದ್ ಇಂಜಿನಿಯರ್‌ನ್ನು ಮನೆಯಿಂದ ಹೊರ ಕರೆದು ನಡು ರಸ್ತೆಯಲ್ಲಿ ನಿಲ್ಲಿಸಿ ಕ್ಲಾಸ್ ತೆಗೆದು ಕೊಳ್ಳುತ್ತಾರೆ. ನಂತರ ಅವರ ಜೊತೆ ಕಾಮಗಾರಿಗಳ ವೀಕ್ಷಣೆಗೆ ಕರೆದುಕೊಂಡು ಹೋಗಿರುವ ವಿಷಯ ಸಾರ್ವಜನಿಕ ವಲಯದಿಂದ ಭೀಮ ವಿಜಯ ಪತ್ರಿಕೆಗೆ ಲಭ್ಯವಾಗಿದೆ.