ಹಾಸನ : ಬ್ಯಾಂಕ್‌ನಲ್ಲಿದ್ದ ಆಭರಣ ಕಳವು; ಗುತ್ತಿಗೆ ನೌಕರನ ಮೇಲೆ ಸಂಶಯ

0

ಬೆಳವಾಡಿ  ಎಸ್‌ಬಿಐ ಶಾಖೆಯ 94 ಲಕ್ಷ
ಬೆಲೆ ಚಿನ್ನ ಬ್ಯಾಂಕ್‌ನಲ್ಲಿದ್ದ ಆಭರಣ ಕಳವು

ಕೊಣನೂರು: ಬ್ಯಾಂಕ್‌ನಲ್ಲಿದ್ದ ಆಭರಣ ಕಳವು; ಗುತ್ತಿಗೆ ನೌಕರನ ಮೇಲೆ ಸಂಶಯ

ಕೊಣನೂರು: ಸಮೀಪದ ಬಳವಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 94,06,484 ಮೌಲ್ಯದ ಚಿನ್ನದ ಅಭರಣಗಳನ್ನು ಬ್ಯಾಂಕಿನ ಗುತ್ತಿಗೆ  ನೌಕರ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದೊಡ್ಡಮಗ್ಗೆ ಹೋಬಳಿ ಬೆಳವಾಡಿ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಗುತ್ತಿಗೆ ನೌಕರ ಲವ (49) ಒಡವೆಗಳನ್ನು ಕದ್ದೊಯ್ದ ವ್ಯಕ್ತಿ. ಮೇ 5 ರಂದು ಬ್ಯಾಂಕಿನಲ್ಲಿ ಚಿನ್ನದ ಪ್ಯಾಕೆಟ್ ಪರಿಶೀಲಿಸುತ್ತಿದ್ದಾಗ ಚಿನ್ನದ ಅಭರಣಗಳು ಮೌಲ್ಯಮಾಪಕನ ವರದಿಗೆ ತಾಳೆಯಾಗಿಲ್ಲ.
ಒಟ್ಟು ಪ್ಯಾಕೆಟ್ ಪೈಕಿ ಎರಡು ಪ್ಯಾಕೆಟ್ ಕಡಿಮೆ ಇರುವುದು ಕಂಡುಬಂದಿದೆ. ಚಿನ್ನದ ಆಭರಣಗಳನ್ನು ಬದಲಾಯಿಸಿ ನಕಲಿ ಅಭರಣಗಳನ್ನು ಪ್ಯಾಕೆಟ್‌ಗೆ ತುಂಬಿದ್ದಾನೆ.

ಈ ಕುರಿತು ಬ್ಯಾಂಕಿನ ಅಂತರಿಕ ತನಿಖೆಗಳ ನಂತರ ಹಾಸನದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅನುರಾಧ ಟಿ ಅಧಿಕಾರಿಗಳು ತಂಗವೇಲು ಅವರು ಕೊಣನೂರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುತ್ತಿಗೆ ನೌಕರ ಲವ ತಲೆಮರೆಸಿಕೊಂಡಿದ್ದಾನೆ.

ನಂತರ ಮೈಸೂರಿನ ಬಿಸಿಡಿಎಂ ಅಡಳಿತ ಕಚೇರಿಯ ವ್ಯವಸ್ಥಾಪಕ ಎಸ್. ಶ್ರೀಕಾಂತ್ ನಡೆಸಿದ ಹೆಚ್ಚಿನ ತನಿಖಾ ವರದಿಯಲ್ಲೂ ಚಿನ್ನ ವ್ಯತ್ಯಾಸವಿರುವುದು ಖಚಿತವಾಯಿತು. 30 ಪ್ಯಾಕೆಟ್‌ಗಳಲ್ಲಿ 2 ಪ್ಯಾಕೆಟ್ ಖಾಲಿಯಾಗಿತ್ತು. 18 ಪ್ಯಾಕೆಟ್ ಗಳಲ್ಲಿ ನಕಲಿ ಚಿನ್ನ ಉಳಿದ ಹತ್ತು ಪ್ಯಾಕೆಟ್‌ಗಳಲ್ಲಿ ಕೆಲ ಅಭರಣಗಳು ಕಾಣೆಯಾಗಿವೆ.
ಈ ಶಾಖೆಯಲ್ಲಿ ಒಡವೆಗಳನ್ನು ದೋಚಿ ಗ್ರಾಹಕರಿಗೆ ವಂಚಿಸಿರುವ ಕೃತ್ಯ ಖಂಡನೀಯ. ಸಂಬಂಧಪಟ್ಟ ಗ್ರಾಹಕರಿಗೆ ದೊರಕಿಸಿಕೊಡಬೇಕು’ ತಾಲ್ಲೂಕು ನ್ಯಾಯ ಎಂದು ಸಂಘದ ಅಧ್ಯಕ್ಷ ಯೋಗಣ್ಣ ಒತ್ತಾಯಿಸಿದರು.

”ಬ್ಯಾಂಕ್‌ನಲ್ಲಿ ಗಿರವಿ ಒಡವೆಗಳು ಮುಖ್ಯ ಲಾಕರ್‌ನಲ್ಲಿ ಇದ್ದು ಅವುಗಳ ಭದ್ರತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡದಿದ್ದರೆ ರೈತ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here