ಚನ್ನರಾಯಪಟ್ಟಣದಲ್ಲಿ ಯುವತಿಯ ಸಿನಿಮೀಯರೀತಿ ಅಪಹರಿಸೋ ಪ್ರಯತ್ನ ಯುವಕರು ಈಗ ಅಂದರ್

0

ಹಾಸನ / ಚನ್ನರಾಯಪಟ್ಟಣ: ಒಂದು ಇನೋವಾ ಕಾರಿನಲ್ಲಿ ಬಂದ ಮೂವರು ಯುವಕರು ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಪಟ್ಟಣದಲ್ಲಿ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದ ಯುವತಿ ಓರ್ವಳನ್ನು ಮೊದಲೇ ಸ್ಕೆಚ್ ಹಾಕಿದ್ದ ತಂಡವೊಂದು ಗುರುವಾರ (2Dec2021) ಅಪಹರಿಸೋ ಪ್ರಯತ್ನ ಮಾಡಿದ್ದಾರೆ . ಆಕೆ ಧೈರ್ಯ ಮಾಡಿ ಕೂಗಾಡಿಕೊಂಡಿದ್ದರಿಂದ  ರಾಷ್ಟ್ರೀಯ ಹೆದ್ದಾರಿ 75ರ ಜೋಗಿಪುರ ಗ್ರಾಮದ ಬಳಿ ಕಾರಿನಿಂದ ಇಳಿಸಿ ಪರಾರಿಯಾದವರ ಕೆಲವೇ ಕ್ಷಣದಲ್ಲಿ ಪೊಲೀಸರ ತೀಕ್ಷ್ಣ ಯೋಜನೆಯಿಂದ ಸಿಕ್ಕಿ ಬಿದ್ದಿದ್ದಾರೆ.,

ಹುಡುಗಿ ಕೂಗಿದ ರಭಸಕ್ಕೆ ಸ್ಥಳೀಯರ ಸಹಾಯದಿ ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು‌ ಇನೋವಾ ಕಾರನ್ನು ಬೆನ್ನಟ್ಟಿ ಸಿನಮೀಯ ರೀತಿ ಚೇಸ್ ಮಾಡಿ ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಇದೀಗ ಅವರನ್ನು ಕಂಬಿ ಹಿಂದೆ ನಿಲ್ಲಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಚನ್ನರಾಯಪಟ್ಟಣ‌ ತಾಲ್ಲೂಕಿನ ಗ್ರಾಮವೊಂದರ ಯುವತಿ, ಮತ್ತೊಂದು ಗ್ರಾಮದ ಯುವಕ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರಂತೆ. ಮೂರು ತಿಂಗಳ ಹಿಂದೆ ಯುವತಿಗೆ ಇಷ್ಟ ಇಲ್ಲದ ಕಾರಣ ಯುವಕ, ಯುವತಿಯ ತಂಟೆಗೆ ಹೋಗದಂತೆ ಹಿರಿಯರ ಉಪಸ್ಥಿತಿಯಲ್ಲಿ ತೀರ್ಮಾನಿಸಲಾಗಿದೆ. ಆದರೆ ಈಚೆಗೆ ಪುನಃ ಪ್ರೀತಿಸುವಂತೆ ಆತ ಪೀಡಿಸುತ್ತಿದ್ದ ಎನ್ನಲಾಗಿದೆ.

ಈ ಪ್ರಕರಣ! ವಳಗೇರಸೋಮನಹಳ್ಳಿಯ ಯುವಕ, ಕಾರಿನ ಚಾಲಕ ಮತ್ತು ಮತ್ತೊಬ್ಬ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ. ಯುವಕರು , ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ

#crimedairyhassan

LEAVE A REPLY

Please enter your comment!
Please enter your name here