ಸಕಲೇಶಪುರ : ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ತನ್ನ ಪತಿ ಮೃತಪಟ್ಟಿದ್ದಾರೆ ಎಂದು ಪತ್ನಿ ಯಸಳೂರು ಪೊಲೀಸರಿಗೆ ದೂರು ನೀಡುತ್ತಾಳೆ , ಹೌದು ಎಂದು ತಿಳಿದುಕೊಂಡು ಪೊಲೀಸರು ತನಿಖೆ ಆರಂಭಿಸಿದಾಗ ಘಟನೆಯ ಹಿಂದೆ ಒಂದು ಆತಂಕಕಾರಿ ಟ್ವಿಸ್ಟ್ ಕಾದಿತ್ತು ., ಅದೇನಪ್ಪ ಎಂದರೆ : ಪತಿಯನ್ನು ಯಾರೋ ಕೊಲೆ ಮಾಡಿರಬಹುದು , ಉತ್ಕೃಷ್ಟ ಚಾಲಕ ನನ್ನ ಪತಿ ಎಂದು ಹೇಳಿದ್ದಳಂತೆ ., ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ತೀವ್ರಗೊಳಿಸಿದಾಗ , ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಮರಡಿಕೆರೆ ಗ್ರಾಮದ ಬಳಿ ಡಿ.26 ರ ರಾತ್ರಿ ನಡೆದ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದ ಸಂತೋಷ್ ಕೇಸ್ ರಿಒಪನ್ ಆಯಿತು ., ಮಡಿಕೇರಿ ಜಿಲ್ಲೆ ತ್ಯಾಗರಾಜ ಕಾಲೊನಿಯ ಚಂದ್ರಶೇಖರ್ ಮತ್ತು ಈಕೆ ನಡುವೆ ಅನೈತಿಕ ಸಂಬಂಧ ಇತ್ತೆಂಬ ಗುಮಾನಿ ಮೇರೆಗೆ ಅದರ ಸುತ್ತ ಬಲೆ ಎಣೆದಾಗ. ಸಂತೋಷ್ ತನ್ನ ಪತಿ ಇದಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಶ್ರುತಿ ಹಾಗೂ ಇಬ್ಬರು ಸೇರಿ ಪತಿ ಬೈಕ್ನಲ್ಲಿ ಬರುವ ದಾರಿಯನ್ನು ಸ್ನೇಹಿತ ಚಂದ್ರಶೇಖರ್ ಹಾಗೂ ಮತ್ತೊಬ್ಬ ಆರೋಪಿ ಅರಕಲಗೂಡು ತಾಲ್ಲೂಕು ರಂಗಾಪುರ ಗ್ರಾಮದ ವ್ಯಕ್ತಿಗೆ ನೀಡಿ ಡಿ. 26ರ ರಾತ್ರಿ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿ ನಂತರ ಅಪಘಾತ ಎಂದು ಬಿಂಬಿಸಿದ್ದರಂತೆ ., ಈ ಸಂಬಂಧ ಮೃತನ ಪತ್ನಿ ಶ್ರುತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ
ಪ್ರಕರಣ ಕಂಡು ಹಿಡಿದು ಆರೋಪಿಗಳ ಬಂಧಿಸಿ ಜೈಲಿಗೆ ಕಳುಹಿಸಿ ಸಂತೋಷ್ ಕುಟುಂಬಕ್ಕೆ ನ್ಯಾಯ ಒದಗಿಸಿದ ಸಕಲೇಶಪುರ ಚೈತನ್ಯ(CPI), ಯಸಳೂರು ಮಂಜುನಾಥ್(PSI) ಮತ್ತು ತಂಡ ಧನ್ಯವಾದಗಳು