ಹಾಸನ: ನೀವು ನೋಡ್ತಾ ಇರೋ ಫೊಟೋದಲ್ಲಿರುವ ದಿಲೀಪ್ ಮತ್ತು ಸುಶ್ಮಿತಾ ಬಂಧಿತ ಆರೋಪಿಗಳು. ಕೊಲೆ ನಡೆದಿರೋದಕ್ಕೆ ಮೊದಲು ಕಾರಣ ಹೇಳ್ಬಿಡ್ತೀವಿ ನೋಡಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆರನೇ ಹೊಸಕೋಟೆ ಗ್ರಾಮದ ಹರೀಶ್ ಎಂಬಾತ ಕೊಲೆಯಾದ ಧುರ್ಧೈವಿ
ಮೇಲ್ಕಂಡ ಈ ದಂಪತಿಗೆ 1 ಲಕ್ಷ ರೂ. ಸಾಲ ನೀಡಿದ್ದರಂತೆ. ಕೊಟ್ಟ ಸಾಲ ವಾಪಸ್ ಮರಳಿಸುವಂತೆ ಹರೀಶ್ ಇತ್ತೀಚೆಗೆ ದಂಪತಿ ಬಳಿ ಕೇಳಿದ್ದಾಗ. ಜನವರಿ 18ರಂದು ಸಾಲ ವಾಪಸ್ ನೀಡುವುದಾಗಿ ದೀಲಿಪ್ ಮತ್ತು ಸುಶ್ಮಿತಾ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿರುವ ಖಾಸಗಿ ಲಾಡ್ಜ್ಗೆ ಹರೀಶ್ನನ್ನು ಕರೆಸಿಕೊಂಡಿದ್ದಾರೆ.
, ಹಣ ವಾಪಸ್ ಬರುತ್ತದೆ ಎಂದು ಸ್ಥಳಕ್ಕೆ ಹೊರಟ ಹರೀಶ್ ಗೆ ಅದೇ ಕೊನೆ ದಿನ ಅಂತ ಗೊತ್ತಿರಲಿಲ್ಲ
ಪತಿ ಜೊತೆ ದೇವಸ್ಥಾನಕ್ಕೆ ಬಂದಿರುವುದಾಗಿ ಕೊಣನೂರಿನ ಲಾಡ್ಜ್ನಲ್ಲಿ ಸುಶ್ಮಿತಾ ರೂಮ್ ಪಡೆದಿದ್ದಾಗ. ಹರೀಶ್ ಬರುವ ಮೊದಲೇ ಅದೇ ರೂಮ್ನ ಶೌಚಾಲಯದಲ್ಲಿ ದಿಲೀಪ್ ಹಾಗೂ ಆತನ ಸಹೋದರ ಲಕ್ಷ್ಮಣ ಅಡಗಿ ಕುಳಿತಿದ್ದರು. ಬಳಿಕ ಹರೀಶ್ನನ್ನೇ ತನ್ನ ಪತಿಯೆಂದು ಸುಶ್ಮಿತಾ ಕೋಣೆಯೊಳಗೆ ಕರೆದುಕೊಂಡು ಹೋಗಿದ್ದು ವಿಪರ್ಯಾಸ. ನಂತರ ಲಾಡ್ಜ್ನಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ನೋಡ ನೋಡುತ್ತಿದ್ದಂತೆಯೇ ಹರೀಶ್ ಕಣ್ಣಿಗೆ ಖಾರದಪುಡಿ ಎರಚಿದ್ದಾಳೆ.
ಸುಶ್ಮಿತಾ ಹರೀಶ್ ಕಣ್ಣಿಗೆ ಖಾರದಪುಡಿ ಎರಚುತ್ತಿದ್ದಂತೆ ದಿಲೀಪ್ ಹಾಗೂ ಲಕ್ಷ್ಮಣ ಶೌಚಾಲಯದಿಂದ ಹೊರಬಂದು ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಮೂವರಲ್ಲಿ ಒರ್ವ ಲಕ್ಷ್ಮಣ ಅಂದೇ ಪೊಲೀಸರಿಗೆ ಸಿಕ್ಕಿಬಿದ್ದರೆ, ಹಂತಕ ದಂಪತಿ ಸ್ಥಳದಿಂದ ಪರಾರಿಯಾಗಿ ಬಿಟ್ಟಿದ್ದರು. ಆರೋಪಿ ದಂಪತಿಗಳ ಹಿಡಿಯಲು ಬಲೆಬೀಸಿದ ಪೊಲೀಸರು ಘಟನೆ ನಡೆದ ಹತ್ತು ದಿನಗಳ ಒಳಗೆ ಆರೋಪಿಗಳ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಜೈಲಿಗಟ್ಟಿದ್ದಾರೆ
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ದಂಪತಿ ಕೃತ್ಯ ಒಂದು ಕುಟುಂಬದ ಆಧಾರ ಸ್ತಂಭ ಕಳೆದುಕೊಂಡಂತಾಗಿದೆ