ನಗರದ ಯುವ ಪೈಲ್ವಾನ್‌ ಖ್ಯಾತಿಯ ಮನು (24) ಹೃದಯಾಘಾತ ದಿಂದ ಸಾವು

0

ಹಾಸನ: ನಗರದ ಯುವ ಪೈಲ್ವಾನ್‌ ಖ್ಯಾತಿಯ ಮನು (24) ಎಂಬುವವರು ಗುರುವಾರ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ. ಹಾಸನ ನಗರ ಗರಡಿರಸ್ತೆಯ ಗರಡಿ ಮನೆಯಲ್ಲಿ ನಿತ್ಯ ಅಭ್ಯಾಸ ಮಾಡುತ್ತಿದ್ದ ಮನು, ಫಿಟ್ನೆಸ್‌ಗೆ ಭಾರಿ ಮಹತ್ವ ನೀಡುತ್ತಿದ್ದವ. ಗುರುವಾರ (27jan2022) ಸಂಜೆ ಎದೆನೋವು ಕಾಣಿಸಿಕೊಂಡು ಬಳಲಿತ್ತಿದ್ದ ಅವನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಕೊನೆಯುಸಿರೆಳೆದ ಬೇಸರದ ಸಂಗತಿ ನಡೆದೋಗಿದೆ. ಶುಕ್ರವಾರ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಿದೆ.

ಬಾಳಿ ಬದುಕ ಬೇಕಿದ್ದ ಯುವಕ ಸಾಧನೆ ಜೊತೆಗೆ ಜೀವನವು ಮುಗಿದ ಅಧ್ಯಾಯವಾಗಿದೆ.

LEAVE A REPLY

Please enter your comment!
Please enter your name here