ಹಾಸನ / ಮಂಡ್ಯ : ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕಾರಿನಲ್ಲಿ ಏನೋ ಸಮಸ್ಯೆ ಇದೆ ನೋಡಿ ಸರ್ ಎಂದು ಸನ್ನೆಮಾಡಿ ಮುಂದೆ ಹೋಗುತ್ತಾನೆ. ಹೇಮಕುಮಾರ್ ಎಂಬುವವರು ಅದನ್ನು ನಂಬಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ನೋಡುತ್ತಿದ್ದ ಕೆಲವೇ ಕ್ಷಣದಲ್ಲಿ, ಹಿಂದಿನಿಂದ ಇನ್ನೊಂದು ಬೈಕ್‌ನಲ್ಲಿ ಬಂದ ಮತ್ತಿಬ್ಬರು ಚಾಕು ಹಿಡಿದು ಬೆದರಿಸಿ ಮಾಲೀಕನ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಅವರ ಬಳಿ ಇದ್ದ ಬರೋಬ್ಬರಿ 10 ಲಕ್ಷ₹ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಹೋಬಳಿಯ ರಾಜಪುರ ಗೇಟ್ ಬಳಿ ಸೋಮವಾರ ನಡೆದಿದೆ .,
ಅಷ್ಟಕ್ಕು ಆ ಹತ್ತು ಲಕ್ಷ ಹೇಗೆ ಬಂತು , ಯಾರದ್ದು??
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕದಬಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಫ್ಯೂಯಲ್ ಸ್ಟೇಷನ್ ಮಾಲೀಕ ಹೇಮಕುಮಾರ್ ಚನ್ನರಾಯ ಪಟ್ಟಣ ತಾಲ್ಲೂಕಿನ ಮಟ್ಟನವಿಲೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಹಣ ಕಟ್ಟಲು ಕಾರಿನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ
ಸ್ಥಳಕ್ಕೆ ಮುರಳೀಧರ್(DYSP), ಎ.ಟಿ. ಭಾನು(CPI), ಶ್ರೀನಿವಾಸ್(SI) ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ನಡೆಯುತ್ತಿದೆ