ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ‌ ನಡುವೆ ಮಾರಾಮಾರಿ : ಕೊಲೆಯಲ್ಲಿ ಅಂತ್ಯ ; ಕೆಂಪೊಳೆಗೆ ಶವ ಎಸೆದ ಪಾತಕಿಗಳು

0

ಹಾಸನ : ನಗರದ ಬಿ.ಎಂ. ರಸ್ತೆಯ ಪಬ್ ಮುಂದೆ ನಡೆದ ಕ್ಷುಲ್ಲಕ ಗಲಾಟೆ ಪ್ರಕರಣದಲ್ಲಿ ಯುವಕನನ್ನು ಹೊಡೆದು ಕೊಲೆ ಮಾಡಿ ಆತನ ಶವ ಸಿಗದಂತೆ ಗುಂಡ್ಯ ಕೆಂಪು ಹೊಳೆಯಲ್ಲಿ ಎಸೆದಿರುವುದಾಗಿ ಘಟನೆ ನಡೆದಿದೆ

ಶನಿವಾರ ರಾತ್ರಿ ನಗರದ ಬಿ.ಎಂ. ರಸ್ತೆಯ ಪಬ್‌ಗೆ ಪತ್ನಿ ಜೊತೆ ಬಂದಿದ್ದ ಸೋದರಹಳ್ಳಿಯ ರೌಡಿಶೀಟರ್ ರಾಕಿ ಒಬ್ಬನಿಗೆ ಅಪ್ರಾಪ್ತ ಬಾಲಕರ ತಂಡ ಧಮ್ಕಿ ಹಾಕಿದ್ದರು. ಪತ್ನಿ ಮುಂದೆ ಧಮ್ಕಿ ಹಾಕಿಸಿಕೊಂಡಿದ್ದ ರೌಡಿ ಶೀಟರ್ ಆತನನ್ನು ಭಾನುವಾರ ಬೆಳಗ್ಗೆ ಹೊತ್ತೊಯ್ದು ನಗರದ ಕೈಗಾರಿಕಾ ಪ್ರದೇಶದ ಸ್ಥಳಕ್ಕೆ ಕರೆದು ಕೊಂಡು ಹೋಗಿ ಸರಿ ಸುಮಾರು 10 ರಿಂದ 12 ಮಂದಿ ಸೇರಿ ಆತನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಬಿಟ್ಟ ಗೌಡನಹಳ್ಳಿ ವಿನಯ್ ಅಲಿಯಾಸ್ ವಿನಿ(17) ಎಂಬಾತ

ಹುಚ್ಚಾಟ ಆಡಲು ಹೋಗಿ ಜೀವ ತೆತ್ತಿದ್ದಾನೆ. ಮೃತ ಪಟ್ಟಿದ್ದಾನೆ. ಈ ವೇಳೆ ಮೃತ ಬಾಲಕನ ತಾಯಿಗೆ ಕರೆ ಮಾಡಿದ ವ್ಯಕ್ತಿ ನಿನ್ನ ಮಗನನ್ನು ಕೊಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ.

ಬಳಿಕ ಶವವನ್ನು ಕಾರಿನಲ್ಲಿ ಹಾಸನದಿಂದ ಸಕಲೇಶಪುರಕ್ಕೆ ತೆಗೆದುಕೊಂಡು ಹೋಗಿ ಗುಂಡ್ಯ ಹೊಳೆಯಲ್ಲಿ ಎಸೆದಿರುವುದಾಗಿ ತಪ್ಪನ್ನೊಪ್ಪಿಕೊಂಡಿದ್ದಾರೆ.

ಈ ವಿಚಾರಕ್ಕೆ ಅಲ್ಲೇ ಮಾತಿಗೆ ಮಾತು ಬೆಳೆದಿದೆ. ಅದಾದ ಬಳಿಕ ಕೆಳಗೆ ಇಳಿದ ನಂತರವೂ ಪಡ್ಡೆ ಹುಡುಗರು ತಮ್ಮ ಚೇಷ್ಟೆ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲ ಪತ್ನಿ ಜೊತೆ ಇದ್ದ ವ್ಯಕ್ತಿಯನ್ನು ಕೊಲೆ ಮಾಡುವುದಾಗಿ ವಿನಯ್ ಡ್ರಾಗರ್ ನಿಂದ ಇರಿಯಲೂ ಮುಂದಾಗಿದ್ದಾನೆ. ರಾಕಿಗೆ ಸಣ್ಣಪುಟ್ಟ ಗಾಯವಾಗುತ್ತಿದ್ದಂತೆಯೇ,

ಅಲರ್ಟ್ ಆದ ಆತ, ಫೋನ್ ಮಾಡಿ ತನ್ನ ಕಡೆಯವರನ್ನು ಸ್ಥಳಕ್ಕೆ ಕರೆಸಿದ್ದಾನೆ. ಗುಂಪೊಂದು ಎಂಟ್ರಿ ಕೊಡುತ್ತಿದ್ದಂತೆಯೇ ಏನಿ ಅಂಡ್ ಗ್ಯಾಂಗ್ ಬೈಕನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದೆ. ಘಟನೆ : CCTV ಯಲ್ಲಿ ಸೆರೆಯಾಗಿದೆ.

ಅದಾದ ಬಳಿಕ ಇಬ್ಬರು ಬೈಕ್ ತೆಗೆದುಕೊಂಡು ಹೋಗಲು ಬಂದಿದ್ದಾರೆ. ಅವರಿಗೆ ಬಿಸಿ ಮುಟ್ಟಿಸಿದ ನಂತರ ಅವರು ಬಂದ ಹಾಗೆಯೇ ವಾಪಸ್ ಹೋಗಿದ್ದಾರೆ.

ಇದಾದ ಬಳಿಕ ಬೇರೊಬ್ಬ ವ್ಯಕ್ತಿಯನ ಮೂಲಕ ರಾಕಿಗೆ ಕರೆ ಮಾಡಿಸಿ, ಬೈಕ್‌ ಕೊಡುವಂತೆ ಹೇಳಿಸಿದ್ದಾರೆ. ಆಗ ಆತನೇ ಬರಬೇಕು ಎಂದು ಪಟ್ಟು ಹಿಡಿದಾಗ ಕೊನೆಗೆ ವಿನಯ್ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಹಿಡಿದು ಕಾರಿಗೆ ಹಾಕಿಕೊಂಡ ತಂಡ, ಭಾನುವಾರ ಇಡೀ ದಿನ ಬ್ಯಾಟ್ ಇತ್ಯಾದಿ ವಸ್ತುಗಳಿಂದ ಮನಬಂದಂತೆ ಹಲ್ಲೆ ಮಾಡಿದೆ. ಅಪ್ರಾಪ್ತ ವಿನಿ ಸ್ಥಿತಿ ಗಂಭೀರ

ಹಂತಕ್ಕೆ ತಲುಪಿದೆ. ನಂತರ ಆಸ್ಪತ್ರೆಗೆ ದಾಖಲಿಸಲು ಕರೆತರುವ ವೇಳೆ ವಿನಿ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಏನಿ ಸತ್ತ ನಂತರವೂ ಕೆಲಹೊತ್ತು ಕಾರಿನಲ್ಲೇ ಹೆಣ ಇಟ್ಟುಕೊಂಡು ಸುತ್ತಾಡಿದ ಹಂತಕರು, ಕಡೆಗೆ ಮೃತದೇಹವನ್ನು ಸಕಲೇಶಪುರ ತಾಲೂಕು ಗುಂಡ್ಯ ಬಳಿಗೆ ತೆಗೆದುಕೊಂಡು ಹೋಗಿ ಬಿಸಾಡಿ ಬಂದಿದ್ದಾರೆ. ಇದಾದ ಬಳಿಕ ವಿನಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗನನ್ನು ಕೊಲೆ ಮಾಡಿ, ಮೃತದೇಹವನ್ನು ಇಂತ ಕಡೆ ಬಿಸಾಡಿದ್ದೇವೆ ಎಂದು ತಿಳಿಸಿದರು. ಎಂದು ಮೂಲಗಳು ಹೇಳಿವೆ.

ಇದಕ್ಕೂ ಮುನ್ನ ಮಾಜಿ ರೌಡಿ ಶೀಟರ್ ಮತ್ತವರ ತಂಡ ವಿನಯ್‌ನನ್ನು ಎಳೆದುಕೊಂಡು ಹೋಗುವುದನ್ನು ಗಮನಿಸಿದ ಕೆಲವರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದನ್ನು ಆಧರಿಸಿ ವಿನಯ್ ಪೋಷಕರು ನಗರಠಾಣೆಗೆ ಮಿಸ್ಸಿಂಗ್ ಕೇಸ್ ಸಹ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ವಿನಿ ಹೆಣವಾಗಿರುವುದು ಖಚಿತವಾಗಿದೆ. ಇದನ್ನು ಖಾತ್ರಿ ಪಡಿಸಿಕೊಂಡ ಖಾಕಿ ಪಡೆ ದಿಢೀರ್ ಕಾರ್ಯಾಚರಣೆ ನಡೆಸಿ ಕೊಲೆ ಮಾಡಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ ಆರೋಪಿಗಳು : ಬಾಲಕನ ಹತ್ಯೆ ಪ್ರಕರಣದಲ್ಲಿ ಬಾಗಿಯಾಗಿರುವ ಆರೋಪಿಗಳು ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿ ದ್ದಾರೆಂದು ಮಾಹಿತಿ ನೀಡಿದ ಎಸ್ಪಿ ಈ ಕೊಲೆ ಪ್ರಕರಣದಲ್ಲಿ ಮೂವರು ರೌಡಿ ಶೀಟರ್‌ಗಳು ಪಾಲ್ಗೊಂಡಿ ದ್ದಾರೆಂದರು.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ವಿಚಾರಣೆಗೆ ಒಳಡಿಸಲಾಗಿದ್ದು ಇಬ್ಬರನ್ನು ಅಧಿಕೃತವಾಗಿ ಬಂಧಿಸಲಾಗಿದೆ ,

ಆರೋಪಿಗಳನ್ನು ಸಹ ಶೀಘ್ರವಾಗಿ ಬಂಧಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು. ಮಾತ್ರವಲ್ಲದೆ ಮೃತ ದೇಹವನ್ನು ಹುಡುಕುವುದಕ್ಕಾಗಿ ಒಬ್ಬರು DYSP ನೇತೃತ್ವದಲ್ಲಿ ತಂಡವೊಂದು ನಿರತವಾಗಿದೆ.

ದೇಹ ಸಿಗದಿದ್ದರೆ ಆರೋಪಿಗಳಿಗೆ ಶಿಕ್ಷೆ ಆಗುತ್ತದೆಯೇ ??
ದೇಹ ಸಿಗದೆ ಇದ್ದರೂ ಶಿಕ್ಷೆಯಾಗಿರುವ ನಿದರ್ಶನಗಳವೆ  , ಕೊಲೆ ಮಾಡಿದ ಬಳಿಕ ದೇಹ ಸಿಗದಂತೆ ಮಾಡಿರುವ ಹಲವು ಪ್ರಕರಣಗಳಲ್ಲಿ ಶಿಕ್ಷೆಯಾಗಿವೆ. ದೇಹ ಸಿಗದಂತೆ ಮಾಡುವ ಮೂಲಕ ಕೊಲೆ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಅಗತ್ಯವಿರುವಂತೆ ವೈಜ್ಞಾನಿಕ ಹಾಗೂ ತಂತ್ರಜ್ಞಾನವನ್ನು ಬಳಸಿ ಕೊಂಡು ಇಂತವು ಆರೋಪ ಪಟ್ಟಿ ಸಲ್ಲಿಸುವ ಮೂಲಕ ಬಾಲಕನ ಕೊಲೆ ಪ್ರಕರಣದ ಆರೋಪಿಗಳು ತಲೆ ತಪ್ಪಿಸಿ ಕೊಳ್ಳದಂತೆ ಕ್ರಮವಹಿ ಸಲಾಗುವುದು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

‘ರೌಡಿಸಂ ಹಾಗೂ ರೌಡಿ ಪಡೆ ಮತ್ತು ಅವರ ಪ್ರೋತ್ಸಾಹಕರನ್ನು ಸಹಿಸುವುದಿಲ್ಲ’ ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಅಪರಾಧ ಪ್ರಕರಣಗಳಲ್ಲಿ ಯುವಕರೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದನ್ನು ಗಮನಿಸಿದ್ದೇನೆ. ಗುಂಪು ಕಟ್ಟಿಕೊಂಡು ಮುಂಡಾಟಿಕೆ ಮಾಡುವುದು, ರೌಡಿಸಂ ಮಾಡುವುದು ಕಂಡು ಬರುತ್ತಿದ್ದು ಇದನ್ನು ಸರಿಯಾದ ಮಾರ್ಗದಲ್ಲಿಯೇ ನಿರ್ಧಾಕ್ಷಿಣ್ಯವಾಗಿ ಹತ್ತಿಕ್ಕಲಾಗುವುದು ಎಂದ ಅವರು ರೌಡಿಸಂ ಮಾಡುವವರ ಬಗ್ಗೆ ಹಾಗೂ ರೌಡಿ ಚಟುವಟಿಕೆ ಮಾಡುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ರೌಡಿಸಂ ಪ್ರಕರಣ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಬಾಗಿಯಾದವರು ಮಾತ್ರವಲ್ಲದೆ ಇಂತಹವರುಗಳಿಗೆ ತಪ್ಪಿಸಿಕೊಳ್ಳಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸುವವರನ್ನು ಸಹ ಮುಲಾಜಿಲ್ಲದೆ ಕಾನೂನಿನ ವ್ಯಾಪ್ತಿಯಲ್ಲಿ ಬಂಧಿಸುವುದಾಗಿ ಎಚ್ಚರಿಸಿದರು.

LEAVE A REPLY

Please enter your comment!
Please enter your name here